ಚಾಲಿ ಅಡಿಕೆ

ಅಡಿಕೆ ಧಾರಣೆ ದಿನಾಂಕ:23-09-2021

ದಿನಾಂಕ 23-09-2021 ರ ಗುರುವಾರ, ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಚಾಲಿ ಮತ್ತು ಕೆಂಪು ಅಡಿಕೆ ಧಾರಣೆಗಳು ಹೀಗೆ ಇವೆ. ಚಾಲಿ ಯಥಾಸ್ಥಿತಿ. ಸಿರ್ಸಿ, ಸಿದ್ದಾಪುರ . ಯಲ್ಲಾಪುರಗಳಲ್ಲಿ ಚಾಲಿ ಸ್ವಲ್ಪ ಹಿಂದೆ. ಕೆಂಪು ಇನ್ನೂ ಸ್ವಲ್ಪ ಹಿಂದೆ. ಊರು –   ದಿನಾಂಕ   –     ವಿಧ – ಅವಕ -ಕನಿಶ್ಟ -ಗರಿಷ್ಟ -ಸರಾಸರಿ ಬಂಟ್ವಾಳ: 23/09/2021, Coca, 19, 10000, 25000, 22500 ಬಂಟ್ವಾಳ: 23/09/2021, New Variety, 96, 25000, 50000, 46000 BANTWALA, 23/09/2021,…

Read more
ಸೌಗಂದ್” ಅಡಿಕೆಯ ಬಳಕೆ ಹೆಚ್ಚಿಸಬಹುದಾದ ಮೌಲ್ಯವರ್ಧಿತ ಉತ್ಪನ್ನ

“ ಸೌಗಂದ್” ಅಡಿಕೆಯ ಬಳಕೆ ಹೆಚ್ಚಿಸಬಹುದಾದ ಮೌಲ್ಯವರ್ಧಿತ ಉತ್ಪನ್ನ.  

ಕ್ಯಾಂಪ್ಕೋ ಸಂಸ್ಥೆಯಿಂದ ಈಗ ಅಡಿಕೆಯ ಬಳಕೆ ಜನಸಾಮಾನ್ಯರೂ ಮಾಡಬಹುದಾದ ಉತ್ಪನ್ನ  “ಸೌಗಂಧ್” (Saugandh) ಅನ್ನು ಬಿಡುಗಡೆ ಆಗಿದೆ. ಬಹುಶಃ ಈ ಒಂದು ಉತ್ಪನ್ನವನ್ನು ಸಮರ್ಪಕವಾಗಿ ಮಾರುಕಟ್ಟೆ ಮಾಡಿದಲ್ಲಿ ಅಡಿಕೆಯ ಬಳಕೆ ಹೆಚ್ಚಳವಾಗಿ ಬೆಳೆಗಾರರಿಗೆ ಅನುಕೂಲವಾಗಬಹುದು. ಸಂಸ್ಥೆಯು ಸುಮಾರು 15 ವರ್ಷಕ್ಕೆ ಮೊತ್ತ ಮೊದಲಬಾರಿಗೆ ಅಡಿಕೆಯನ್ನು ಬಾಲಕರಿಂದ ಹಿಡಿದು ವೃದ್ಧರ ವರೆಗೂ, ಗಂಡಸರು ಹೆಂಗಸರೆಂಬ ಭೇಧವಿಲ್ಲದೆ ತಿನ್ನಬಹುದಾದ  “ಕಾಜೂ ಸುಪಾರಿ” ಎಂಬ ಎಂಬ ಉತ್ಪನ್ನವನ್ನು ಪರಿಚಯಿಸಿ ಜನಮನ್ನಣೆಗಳಿಸಿತ್ತು.  ಬಹುಶಃ ನಮ್ಮ ಅಡಿಕೆ ಬೆಳೆಗಾರರಿಗೆ ಗೊತ್ತಿದೆಯೋ ಇಲ್ಲವೋ, ನಮ್ಮ ಮನೆಯ ಶುಭ…

Read more
ಹಸಿಸೊಪ್ಪು ಮಣ್ಣಿಗೆ ಹಾಕುವುದರ ಪ್ರಯೋಜನ ಏನು?.

ಹಸಿಸೊಪ್ಪು ಮಣ್ಣಿಗೆ ಹಾಕುವುದರ ಪ್ರಯೋಜನ ಏನು?.

ಮಣ್ಣಿನ ಫಲವತ್ತತೆ ಹೆಚ್ಚಲು ನಿರಂತರವಾಗಿ  ಹಸಿಸೊಪ್ಪು, ತರಗೆಲೆ ಮುಂತಾದ ಸಾವಯವ ವಸ್ತುಗಳನ್ನು ಸೇರಿಸುತ್ತಾ ಇರಬೇಕು. ಒಣ ತರಗೆಲೆಗಿಂತ ಹಸಿ ಸೊಪ್ಪು ಹೆಚ್ಚು ಉತ್ತಮ. ಕೃಷಿ ಮಾಡುವ ಮಣ್ಣು ಒಂದೆಡೆ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಇರುತ್ತದೆ. ಅದನ್ನು ಮರುಪೂರಣ ಮಾಡಲು ಸಾವಯವ ವಸ್ತುಗಳನ್ನು ಸೇರಿಸುತ್ತಾ ಇರಬೇಕು. ಎಲ್ಲದಕ್ಕಿಂತ ಅಗ್ಗದ ಉತ್ತಮ ಸ್ಥೂಲ (Bulk)ಸಾವಯವ ವಸ್ತು ಸೊಪ್ಪು, ತರಗೆಲೆ ಮತ್ತು ಬೆಳೆ ತ್ಯಾಜ್ಯಗಳು. ಕೃಷಿಕರಾದ ನಾವೆಲ್ಲಾ ಮಣ್ಣು ಹೇಗೆ  ರಚನೆಯಾಯಿತು ಎಂಬುದರ ಬಗ್ಗೆ ತಿಳಿಯಬೇಕು. ಗಡಸು, ಮೆದು ಶಿಲೆಗಳು ಬಿಸಿಲು, ಮಳೆ,ಗಾಳಿ…

Read more

ಅಂತರ್ಜಲ ಬಳಕೆಗೂ ಬೇಕು – ಲಾಕ್ ಡೌನ್ .

ಒಂದುವರೆ ತಿಂಗಳ ಕಾಲ ಅಂತರ್ಜಲದೊಂದಿಗಿನ  ಅತ್ಯಾಚಾರಕ್ಕೆ ಸ್ವಲ್ಪ ಬಿಡುವಾಗಿತ್ತು. ಆದರೂ ರಾತ್ರೆ ಹೊತ್ತು ಹಳ್ಳಿಯ ಮೂಲೆಗಳಲ್ಲಿ ವ್ಯವಹಾರ ನಡೆಯುತ್ತಿತ್ತು. ಈಗ ಮತ್ತೆ ಅತ್ಯಾಚಾರ ಪ್ರಾರಂಭವಾಗಿದೆ. ಹಳ್ಳಿಯ ಪೆಟ್ರೋಲ್ ಪಂಪುಗಳ ಮುಂದೆ ಮೂರು ನಾಲ್ಕು ಬೋರ್ ಲಾರಿಗಳು ಮೊಕ್ಕಾಂ ಹೂಡಿವೆ. ಒಂದು ತಿಂಗಳು ಅಂತರ್ಜಲಕ್ಕೆ ಬಿಡುಗಡೆ ಸಿಕ್ಕಿದೆ. ಹಾಗೆಯೇ ವರ್ಷದಲ್ಲಿ 2-3 ತಿಂಗಳು ಬಿಡುವು ಕೊಟ್ಟರೆ ಅದೆಷ್ಟೋ ಅಂತರ್ಜಲ ಶೋಷಣೆ ಕಡಿಮೆಯಾಗಬಹುದು. ಅಂತರ್ಜಲದ ಕ್ಷೀಣಿಸುತ್ತಿದೆ: ನಮ್ಮಲ್ಲಿ ಒಂದಷ್ಟು ಜನ ಬೆಳೆಗಳ ಅವಶ್ಯಕತೆಗೆ  ಬೇಕಾದಷ್ಟೇ ಬಳಸಲು ಅಂತರ್ಜಲವನ್ನು ಆವಲಂಭಿಸಿಲ್ಲ. ಅದನ್ನು…

Read more

ಹಳ್ಳಿಯ ಯುವಕರಿಗೆ ಉದ್ಯೋಗ ಕೊಡಬಲ್ಲ ಅಣಬೆ ಕೃಷಿ.

 ಆರ್ಥಿಕ ಸಂಕಷ್ಟದಿಂದ ಪಟ್ಟಣ ತೊರೆದು ಜನ ಹಳ್ಳಿಯೆಡೆಗೆ ಮುಖಮಾಡಿದ್ದಾರೆ. ಕೆಲವರಿಗೆ ಇನ್ನು ಪಟ್ಟಣದ ಸಹವಾಸವೇ ಬೇಡ ಎಂಬಂತಾಗಿದೆ.   ವೃತಿ ಅರಸುವ ಆಸಕ್ತರಿಗೆ  ಮನೆಯ ಕಡಿಮೆ ಸ್ಥಳಾವಕಾಶದಲ್ಲೂ  ಮಾಡಬಹುದಾದ ಲಾಭದ ಉದ್ದಿಮೆ ಅಣಬೆ ಬೇಸಾಯ. ವಿಶೇಷ ವಿಧ್ಯಾವಂತರೂ ಅಗಬೇಕಾಗಿಲ್ಲ. ಭಾರೀ ಬಂಡವಾಳವೂ ಬೇಕಾಗಿಲ್ಲ. ಇನ್ನೂ ಇದರೊಂದಿಗೆ ಜೇನು ಸಾಕಣೆಯಂತ ವೃತ್ತಿ ಮಾಡಿದರೆ ಮತ್ತೂ ಅನುಕೂಲ.     ಅಣಬೆ ಬೆಳೆಸಲು ಹೆಚ್ಚು ಬಂಡವಾಳ ಬೇಡ. ವೃತ್ತಿಯಲ್ಲಿ ಸ್ವಲ್ಪ ಶ್ರದ್ಧೆ ಇದ್ದರೆ ಸಾಕು. ಸೂಕ್ತ ತರಬೇತಿಯನ್ನು ಪಡೆದು ಪ್ರಾರಂಭಿಸಿದರೆ ಇದರಲ್ಲಿ ಹಿಂತಿರುಗಿ…

Read more
good yielded plant

ಒರಿಜಿನಲ್ ಮಂಗಳ ಅಡಿಕೆ ಮರ ಹೀಗಿರುತ್ತದೆ.

ಮಂಗಳ ಅಡಿಕೆ ತಳಿ ಪ್ರಸ್ತುತ ಅಡಿಕೆ ಬೆಳೆಗಾರರ ಹಿತ ದೃಷ್ಟಿಯಲ್ಲಿ ಪರಿಚಯಿಸಲಾದ ತಳಿ ಎಂದೇ ಹೇಳಬಹುದು. 30  ವರ್ಷವಾದರೂ 35-40 ಅಡಿ ಎತ್ತರ. ಹೆಚ್ಚು ಪೋಷಕಾಂಶ ಕೊಟ್ಟಷ್ಟೂ ಹೆಚ್ಚು ಇಳುವರಿ. ಮರದಲ್ಲಿ 4-5 ಭರ್ತಿ ಕಾಯಿಗಳ ಗೊನೆ.  ಅಡಿಕೆ ಬೆಳೆಯುವವರ ಅಂಗಳದ ತುಂಬಾ ಅಡಿಕೆ ಹರಡಿದ ಸಮೃದ್ಧಿ ಉಂಟಾದುದೇ ಈ ತಳಿ ಬಂದ ನಂತರ. ಆದರೆ ಈ ಮೂಲ ತಳಿ ಈಗ ಭಾರೀ ಅಪರೂಪವಾಗಿದೆ.  ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಕುಬಳಬೆಟ್ಟು ಗುತ್ತುವಿನ ಪ್ರಗತಿಪರ ಕೃಷಿಕರಾಗಿದ್ದ ದಿವಂಗತ…

Read more

ಈ ನೀಲಿ ದ್ರಾಕ್ಷಿಗೆ ರಾಸಾಯನಿಕ ಮುಕ್ತ – ಸಿಂಪರಣೆಯ ಅಗತ್ಯವಿಲ್ಲ.

ಬೆಂಗಳೂರು ಸುತ್ತಮುತ್ತ  ನೂರಾರು ವರ್ಷಗಳಿಂದ ಬೆಳೆಯುತ್ತಿರುವ ನೀಲಿ ದ್ರಾಕ್ಷಿ ಅಥವಾ ಬೀಜ ಉಳ್ಳ ಕಪ್ಪು ರಾಸಾಯನಿಕ ಮುಕ್ತವಾಗಿ ಬೆಳೆಯಬಲ್ಲ ತಳಿ. ಇದನ್ನು ಬಾಲರಿಂದ ಹಿಡಿದು ವೃದ್ಧರ ವರೆಗೂ ಯಾವುದೇ ಅಂಜಿಕೆ ಇಲ್ಲದೆ ಸೇವಿಸಬಹುದು. ಇದು ಒಂದು ನಾಟಿ ತಳಿಯಾಗಿದ್ದು, ರೋಗ ಕೀಟ ಬಾಧೆ ಕಡಿಮೆ ಇರುವ ಕಾರಣ ಯಾರೂ ಅನವಶ್ಯಕ ಕೀಟನಾಶಕ- ರೋಗ ನಾಶಕ ಸಿಂಪಡಿಸುವುದಿಲ್ಲ. ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ತರಾವಳಿ ದ್ರಾಕ್ಷಿ ಹಣ್ಣುಗಳಿರುತ್ತವೆ. ನೀವೇನಾದರೂ ಕಡಿಮೆ  ಬೆಲೆಗೆ ದೊರೆಯುವ ಬೆಂಗಳೂರು ನೀಲಿ ದ್ರಾಕ್ಷಿಯನ್ನು /ಬೆಂಗಳೂರು…

Read more

ರಂಜಕ ಗೊಬ್ಬರವನ್ನು ಹೀಗೆ ಕೊಟ್ಟರೆ ಉತ್ತಮ.

ರಂಜಕ ಎಂಬುದು ಚಲಿಸುವ ಪೋಷಕವಲ್ಲ. ಕೆಲವು ನೀರಿನಲ್ಲಿ ಕರಗುತ್ತದೆ. ಇನ್ನು ಕೆಲವು  ಕರಗುವುದಿಲ್ಲ. ಹೊಲದ ಮಣ್ಣಿನ ಗುಣ ಹೇಗಿದೆ ಎಂಬುದರ ಮೇಲೆ ಅದಕ್ಕೆ ಹೊಂದುವ ರಂಜಕ ಗೊಬ್ಬರವನ್ನು ಕೊಡಬೇಕು. ಹಾಗೆಯೇ ಕೊಟ್ಟ ರಂಜಕವು ಬೆಳೆಗೆ ಲಭ್ಯವಾಗುವ ಸ್ಥಿತಿಯನ್ನು ಉಂಟುಮಾಡಬೇಕು. ಬಹಳಷ್ಟು  ರೈತರು ರಂಜಕ ಪೋಷಕದ ಬಳಕೆಯನ್ನು ಕಡಿಮೆ ಮಾಡುವುದಿಲ್ಲ. ಡಿಎಪಿ ಹಾಕಿದ್ದೇನೆ ಎನ್ನುತ್ತಾರೆ. ಆದರ ಬಹಳಷ್ಟು ರೈತರ ಹೊಲದ ಮಣ್ಣು ಪರೀಕ್ಷೆಯಲ್ಲಿ ರಂಜಕ ಪೋಷಕದ ಕೊರತೆ ಕಂಡು ಬರುತ್ತದೆ. ಇದಕ್ಕೆ ಕಾರಣ ಬಳಕೆ ಕ್ರಮ ಸರಿಯಿಲ್ಲದಿರುವಿಕೆ. ಹೇಗೆ…

Read more
ಅಡಿಕೆ ಮರದ ಸುಳಿ ಭಾಗಕ್ಕೆ ಹಾನಿ

ಅಡಿಕೆ ಮರಗಳು ಸಾಯುತ್ತಿವೆಯೇ? ಒಮ್ಮೆ ಸುಳಿ ಭಾಗವನ್ನು ಪರೀಕ್ಷಿಸಿರಿ.

ಅಡಿಕೆ ಮರದ ಸುಳಿ  ಏನೋ  ವ್ಯತ್ಯಾಸವಾದಂತೆ ಕಂಡರೆ,  ಕೆಂಪು ಮೂತಿ ಹುಳವೂ ಉಪಟಳ  ಇರಬಹುದು. ಮರದ ಸುಳಿ ಭಾಗ ಬಾಡಿದಂತೆ ಕಂಡರೆ, ಅಥವಾ ಕಾಂಡದಲ್ಲಿ  ಸುಳಿಭಾಗದಿಂದ ಪ್ರಾರಂಭಗೊಂಡು ರಸ ಇಳಿದಂತೆ ಕಂಡರೆ , ಸುಳಿ ಭಾಗ ಸ್ವಲ್ಪ ಹರಿದಂತೆ ಕಂಡರೆ ಮರ ಏರಿ ಸುಳಿ ಭಾಗವನ್ನು ಒಮ್ಮೆ ಪರಿಶೀಲಿಸಿರಿ. ಸುಳಿಯಲ್ಲಿ ಏನೋ ಆಗಿದೆ ಎಂಬುದು ಈ ಮೇಲಿನ ಲಕ್ಷಣಗಳು ಹೇಳುತ್ತವೆ. ಕಳೆದ ಎರಡು ವರ್ಷಗಳಿಂದ ಅಡಿಕೆ  ಮರಗಳು ಸುಳಿ ಕೊಳೆತು ಸಾಯುತ್ತಿವೆ. ರೈತರು ಅದನ್ನು ಕಡಿಯದೇ ಹಾಗೇ…

Read more

ಭೂ ತಾಯಿ ಮುನಿದಿದ್ದಾಳೆ- ನಾವೆಲ್ಲಾ ಒಟ್ಟಾಗಿ ಪ್ರಾರ್ಥಿಸೋಣ.

ಪ್ರತೀ ವರ್ಷ ಎಪ್ರೀಲ್ 22 ದಿನವನ್ನು ಜಾಗತಿಕ ಭೂಮಿಯ ದಿನ ಎಂದು ಆಚರಿಸಲಾಗುತ್ತದೆ. ಪ್ರತೀ ವರ್ಷ ಒಂದೊಂದು ಧ್ಯೇಯಗಳನ್ನು ಇಟ್ಟುಕೊಂಡು ಈ ದಿನವನ್ನು ವಿಶೇಷ ಪ್ರಾತಿನಿಧ್ಯ ಕೊಟ್ಟು ಆಚರಿಸಲಾಗುತ್ತದೆ. ಈ ವರ್ಷ ಹವಾಮಾನ ಬದಲಾವಣೆಯಂತಃ ಗಂಭೀರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅದನ್ನು ಆಚರಿಸಲಾಗುತ್ತದೆ. ಬಹುಷಃ ಈ ವರ್ಷದ  ಆಚರಣೆಗೆ ಪ್ರಕೃತಿಯ ಅಸಮಾಧಾನ ಏನೋ ಇದ್ದಂತಿದೆ. ಕೊರೋನಾ ಎಂಬ ಮಹಾ ಮಾರಿ ರೂಪದಲ್ಲಿ ಮನುಕೂಲದ ಮೇಲೆ ಭೂ ತಾಯಿ ಮುನಿದಂತಿದೆ. ಜಗತ್ತೇ ಮನುಕುಲ ಕಾಣದ ಅನಾಹುತದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಇದು…

Read more
error: Content is protected !!