ನಾನು ಕೃಷಿಕ… ನನ್ನ ನೈಜ ಆದಾಯ ಎಷ್ಟು?
“ಕೃಷಿ ಎಂದರೆ ಲಾಭದಾಯಕ ವೃತ್ತಿ, ರೈತನೇ ತನ್ನ ಕೆಲಸದ ಮಾಲೀಕ, ಬೇಕಾದಾಗ ಕೆಲಸ ಮಾಡಬಹುದು, ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಾನೆ“—ಇದು ಸಮಾಜದಲ್ಲಿ ಸಾಮಾನ್ಯವಾಗಿ ಇರುವ ಅಭಿಪ್ರಾಯ. ಆದರೆ ನಿಜವಾಗಿಯೂ ರೈತನ ಆದಾಯ ಎಷ್ಟು ಎಂಬ ಲೆಕ್ಕವನ್ನು ಎಷ್ಟು ಜನ ಹಾಕಿದ್ದಾರೆ? ಇಂದು ಅನೇಕ ವಿದ್ಯಾವಂತರು ತಮ್ಮ ಹೆಚ್ಚಿನ ಸಂಬಳದ ಉದ್ಯೋಗವನ್ನು ಬಿಟ್ಟು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. “ಸ್ವಂತ ಜಮೀನು ಖರೀದಿಸಿ, ತೋಟ ಮಾಡಿ, ಸ್ವತಂತ್ರವಾಗಿ ಬದುಕೋಣ” ಎಂಬ ಕನಸಿನೊಂದಿಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುತ್ತಾರೆ. ಆರಂಭದ ಕೆಲವು…
