ಗುಟ್ಕಾ ನಿಷೇಧ — ನಿಜವಾಗಿ ಇದು ಸಾಧ್ಯವೇ -ಯಶಸ್ವಿಯಾಗಬಹುದೇ?
ಗುಟ್ಕಾ ನಿಷೇಧ: ಸಾರ್ವಜನಿಕ ಆರೋಗ್ಯ ರಕ್ಷಣೆಯ ಜವಾಬ್ಧಾರಿ, ಅಡಿಕೆ ಬೆಳೆಗಾರರ ಹಿತ ರಕ್ಷಣೆ ಜೊತೆಗೆ ಸರಕಾರದ ಖಜಾನೆಗೆ ಕೋಟ್ಯಾಂತರ ರೂ. ಗಳ ನಷ್ಟ ಇದರಲ್ಲಿ ಭಾರ ಯಾವುದು? ಕರ್ನಾಟಕ ಸರ್ಕಾರ ಇತ್ತೀಚೆಗೆ ರಾಜ್ಯದಲ್ಲಿ ಗುಟ್ಕಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಕೆಲವು ಉತ್ಪನ್ನಗಳ ಮಾರಾಟ, ಸಂಗ್ರಹಣೆ, ಸಾಗಾಟ ಮತ್ತು ವಿತರಣೆಗೆ ಒಂದು ವರ್ಷದ ಅವಧಿಗೆ ನಿಷೇಧ ಹೇರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರಕ್ಕೆ ಕೆಲ ಶಾಸಕರಿಂದ ವಿರೋಧವೂ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳು ಈ ವಿಚಾರವನ್ನು…
