ಕಲ್ಪರಸ – ನೀವು ಇನ್ನೂ ಕುಡಿದಿಲ್ಲವೇ – ಇಲ್ಲಿಗೆ ಹೋಗಿ.

ತೆಂಗಿನ ಮರದ ಹೂ ಗೊಂಚಲಿನಲ್ಲಿ ಒಂದು ರಸ (SAP) ಇದೆ. ಈ ರಸದಿಂದಲೇ, ಎಳನೀರು, ತೆಂಗಿನ ಕಾಯಿ ಆಗುತ್ತದೆ.  ಎಳನೀರು, ಕಾಯಿ ಆಗುವುದಕ್ಕೂ ಮುನ್ನ ನಾವು  ಇದನ್ನು ಸವಿಯಬಹುದು. ಅದೂ ಪರಿಶುದ್ಧವಾಗಿ. ಅದುವೇ ಕಲ್ಪರಸ.. ನಮ್ಮ ಪೂರ್ವಜರ ಕಾಲದಿಂದಲೂ ತೆಂಗಿನ ಮರ, ತಾಳೆ ಮರ, ಈಚಲು ಮರದ ಹೂ ಗೊಂಚಲಿನ ಅಮೃತ ಸಮಾನವಾದ ರಸದ ಮಹತ್ವವನ್ನು  ತಿಳಿಯಲಾಗಿತ್ತು. ಆದನ್ನು ತೆಗೆಯುವ ಕ್ರಮ ಮತ್ತು ದಾಸ್ತಾನು  ವಿಧಾನಗಳಿಂದ ಅದು ಕಲ್ಪರಸವಾಗದೆ  ಅಮಲು ಬರಿಸುವ ಸೇಂದಿ ಎಂಬ ಹೆಸರನ್ನು ಪಡೆದಿತ್ತು….

Read more
arecanut

ನಿಮ್ಮ ಹೊಲದ ಮಣ್ಣಿಗೆ ಯಾವಾಗ ಎಷ್ಟು ನೀರಾವರಿ ಮಾಡಬೇಕು.

ನಿಮ್ಮಲ್ಲಿ ನೀರು ಎಷ್ಟೇ ಇರಲಿ. ಬೆಳೆಗಳಿಗೆ ಎಷ್ಟೇ ನೀರುಣಿಸಿರಿ. ಆದರೆ ಸಸ್ಯಕ್ಕೆ ಅದು ಲಭ್ಯವಾಗುವುದು ಮಣ್ಣಿನ ಗುಣದ ಮೇಲೆ.ಯಾವುದೇ ಬೆಳೆ ಇರಲಿ, ಅದಕ್ಕೆ ಬೇಕಾದಷ್ಟೇ ನೀರಾವರಿ ಮಾಡಬೇಕು. ಅದರಲ್ಲೂ ಅಡಿಕೆ, ತೆಂಗು ಮುಂತಾದ ಬೆಳೆಗಳಿಗೆ ನೀರು ಬೇಕಾಗುವುದು ಕಡಿಮೆ. ಹೆಚ್ಚಾದರೆ ಅದು ಎಲೆಗಳ ಮೂಲಕ ಬಾಷ್ಪೀಭವನ ಕ್ರಿಯೆಯಲ್ಲಿ  ಹೊರ ಹಾಕುತ್ತವೆ. ಕೆಲವರು ತಮ್ಮ ಹೊಲಕ್ಕೆ ಎಷ್ಟೇ ನೀರುಣಿಸಿದರೂ ಮರುದಿನ ಒಣಗುತ್ತದೆ ಎನ್ನುತ್ತಾರೆ. ಕೆಲವರಲ್ಲಿ  ನೀರಾವರಿ ಮಾಡಿದ ನಂತರ ತೇವಾಂಶ  ಹೆಚ್ಚು ಸಮಯದ ತನಕ ಉಳಿಯುತ್ತದೆ. ಬೆಳೆಗಳಿಗೆ ನೀರು…

Read more
ಎರಡನೇ ವರ್ಷದ ಅಡಿಕೆ ಸಸಿಗಳು

2 ವರ್ಷದ ಅಡಿಕೆ ಸಸಿಗಳಿಗೆ ಗೊಬ್ಬರದ ಪ್ರಮಾಣ.

ಮೊದಲ ವರ್ಷ ಅಡಿಕೆ ಸಸಿ ನೆಡುವಾಗ ಅಲ್ಪ ಸ್ವಲ್ಪವಾದರೂ ಕೊಟ್ಟಿಗೆ ಗೊಬ್ಬರ ಕೊಡುತ್ತೇವೆ. ಮಣ್ಣಿನಲ್ಲೂ ಸ್ವಲ್ಪ ಸಾರಾಂಶ ಇರುತ್ತದೆ. ಬೇರುಗಳೂ ಹೆಚ್ಚು ಬೆಳೆದಿರುವುದಿಲ್ಲ.  ಹಾಗಿರುವಾಗ NPK ಸಮನಾಗಿ ಇರುವ ಕಾಂಪ್ಲೆಕ್ಸ್ ಗೊಬ್ಬರ ಕೊಡುವುದು ಸಾಕಾಗುತ್ತದೆ. ಸಸಿ ಬೆಳೆದಂತೆ ಬೇರು ಹೆಚ್ಚು ಬೆಳೆದು, ಮಣ್ಣಿನಲ್ಲಿ ಸಾರಾಂಶಗಳು  ಕಡಿಮೆ ಆದಂತೆ ಗೊಬ್ಬರವನ್ನು ಹೆಚ್ಚು ಕೊಡಬೇಕಾಗುತ್ತದೆ. ಎರಡನೇ ವರ್ಷದ ತರುವಾಯ ಶಿಫಾರಸಿನಂತೆ NPK ಪ್ರಮಾಣವನ್ನು ಕೊಡುವುದರಿಂದಾ ಆರೋಗ್ಯಕರ ಬೆಳವಣಿಗೆ ಉಂಟಾಗುತ್ತದೆ. ಗೊಬ್ಬರವನ್ನು ಮಳೆಗಾಲ ಪೂರ್ವದಲ್ಲಿ ಕೊಡುವುದು ಅವಶ್ಯಕ. ಆ ನಂತರ ಮಳೆಗಾಲ…

Read more
Cyclea peltata – A Valuable Medicinal Climber of India

Cyclea peltata – A Valuable Medicinal Climber of India

Cyclea peltata, botanically referred to as Cissampelos pareira Linn. in North India and Cyclea peltata in South India, is a well-known medicinal plant belonging to the family Menispermaceae. It is a perennial twining climber that grows naturally in forests, hedges, and moist shady areas. The plant is widely used in Ayurveda and folk medicine due…

Read more
ಕಳೆದ ವರ್ಷ 7500. ಈ ವರ್ಷ 6300 ಅಡಿಕೆ ಮಾರುಕಟ್ಟೆ ಅಸ್ಥಿರವಾದೀತೇ

ಕಳೆದ ವರ್ಷ 7500. ಈ ವರ್ಷ 6300. ಅಡಿಕೆ ಮಾರುಕಟ್ಟೆ ಅಸ್ಥಿರವಾದೀತೇ?   

ಕಳೆದ ವರ್ಷ ಈ ಸಮಯದಲ್ಲಿ ಹಸಿ ಅಡಿಕೆಗೆ 7500 ರೂ. ಬೆಲೆಗೆ ಖರೀದಿ ಮಾಡಲಾಗುತ್ತಿತ್ತು. ಈ ವರ್ಷ ಪ್ರಾರಂಭಿಕ ದರ 6500, ಇನ್ನೂ ಇಳಿಕೆಯಾಗಿ 6300 ಕ್ಕೆ ಬಂದಿದೆ. ಇನ್ನೂ ಇಳಿಯುವ ಸಂಭವ. ಇದು ಮುಂದಿನ ಅಡಿಕೆ ಧಾರಣೆಯ ಅಸ್ಥಿರತೆಯನ್ನು ತೋರಿಸುತ್ತಿದೆ. ಕೆಂಪಡಿಕೆಯ ಉತ್ಪಾದನೆ ಭಾರೀ ಹೆಚ್ಚಳವಾಗುತ್ತಿದ್ದು, ಸಾಂಪ್ರದಾಯಿಕ ಪ್ರದೇಶಗಳ ಇಳುವರಿಯನ್ನು ಹೊಸ ಪ್ರದೇಶಗಳು ಹಿಂದಿಕ್ಕುತ್ತಿದೆ. ಜೋಳ, ರಾಗಿ, ಭತ್ತ ತರಕಾರಿ ಬೆಳೆಯುತ್ತಿದ್ದ ಬಯಲು ಸೀಮೆ ಪ್ರದೇಶಗಳಲ್ಲಿ  ಉತ್ತಮ ಇಳುವರಿ ಕಾಣಿಸುತ್ತಿದ್ದು,  ಮಾರುಕಟ್ಟೆ ಈ ಉತ್ಪಾದನೆಯನ್ನು ತಾಳಿಕೊಳ್ಳಬಹುದೇ…

Read more

ತೆಂಗಿನ ಮರದಲ್ಲಿ ಕಾಯಿ ಹೆಚ್ಚುವಿಕೆ ಒಂದು ಕುತೂಹಲ.

ತೆಂಗು ಬೆಳೆಯುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ಸಂಗತಿ ಅದರಲ್ಲಿ ಕಾಯಿಗಳು ಹೇಗೆ ಆಗುತ್ತವೆ ಎಂಬುದು. ತೆಂಗಿನ ಮರದಲ್ಲಿ ಹೂ ಗೊಂಚಲು ಆಗುತ್ತದೆ. ಅದರಲ್ಲಿ ಮಿಡಿಗಳು ಬೆಳೆದು ಅದು ಕಾಯಿಯಾಗುತ್ತದೆ ಎಂದಷ್ಟೇ ತಿಳಿದರೆ ಸಾಲದು. ಈ ಪ್ರಕ್ರಿಯೆಯಲ್ಲಿ ಯಾರೆಲ್ಲಾ ಪಾತ್ರ ವಹಿಸುತ್ತಾರೆ. ಇವರೇನಾದರೂ ಕೈಕೊಟ್ಟರೆ ಏನಾಗುತ್ತದೆ ಎಂಬುದನ್ನು ತಿಳಿಯಲೇ ಬೇಕು. ಹೂ ಗೊಂಚಲು ತನ್ನಷ್ಟಕ್ಕೇ ಕಾಯಿ ಕಚ್ಚುವುದಲ್ಲ. ಅದು ಬೇರೆ ಜೀವಿಗಳನ್ನು ಅವಲಂಭಿಸಿ ಆಗುತ್ತದೆ. ಸೃಷ್ಟಿಯ ಈ ವೈಚಿತ್ರ್ಯವನ್ನು ಪ್ರತೀಯೊಬ್ಬ ರೈತರು ತಿಳಿಯಲೇ ಬೇಕು. ತೆಂಗಿನ ಸಸಿ ಉತ್ತಮ ಆರೈಕೆಯಲ್ಲಿ…

Read more

ಸಾವಯವ ಕೃಷಿ- ಇದು ವ್ಯವಸ್ಥಿತ ರಾಜಕೀಯ.

ರೈತರೇ ನೀವು ಕೃಷಿ ಮಾಡುವವರೇ ಹೊರತು ಪಕ್ಷ ಕಟ್ಟುವವರಲ್ಲ. ಪಕ್ಷ ಕಟ್ಟುವ, ರಾಜಕೀಯ ಮಾಡುವ ಮನೋಸ್ಥಿತಿಯವರು ನಾವಲ್ಲ. ನಾವು ಸಾಧ್ಯವಾದಷ್ಟು ಒಗ್ಗಟ್ಟಾಗುವ ಬಗ್ಗೆ ಶ್ರಮಿಸೋಣ. ನಮಗೆ ಯಾವ ವಿಧಾನದ ಕೃಷಿ ಲಾಭದಾಯಕ ಎಂದೆಣಿಸುತ್ತದೆಯೋ ಅದನ್ನು ಮಾಡೋಣ.. ಕೃಷಿ ಮಾಡುವುದು ನಮ್ಮ ಬದುಕುವ ದಾರಿಗಾಗಿಯೇ ಹೊರತು ಪ್ರಚಾರಕ್ಕಾಗಿ ಅಲ್ಲ ತಾನೇ? ಇಲ್ಲಿ ಇದರ ಪ್ರಸ್ತಾಪ ಯಾಕೆಂದರೆ ಕೃಷಿಕರು ಅವರ ಹೊಟ್ಟೆ ಪಾಡಿಗಾಗಿ  ವೃತ್ತಿ ಮಾಡುವವರು. ಇವರ ಶ್ರಮದಲ್ಲಿ ಸ್ವಾರ್ಥ ಅಲ್ಲದೆ ಸಾಮಾಜಿಕ ಕಳಕಳಿಯೂ ಇದೆ. ಇದರಲ್ಲಿ ಮಧ್ಯಪ್ರವೇಶಕ್ಕೆ ಮೂರನೆಯವರಿಗೆ…

Read more
ಅಡಿಕೆ ಗರಿಯಲ್ಲಿ ಸೂಕ್ಷ್ಮ ಪೋಷಕದ ಕೊರತೆ ಲಕ್ಷಣ

ಮೈಕ್ರೋ ನ್ಯೂಟ್ರಿಯೆಂಟ್ ಬಳಸಿದರೆ ಅಚ್ಚರಿಯ ಇಳುವರಿ.

ಭಾರತ ದೇಶದ ಬಹುತೇಕ ಮಣ್ಣಿನಲ್ಲಿ ಸೂಕ್ಷ್ಮಪೋಷಕಾಂಶಗಳ ಕೊರತೆ ಇದೆ. ಒಟ್ಟು ಕೃಷಿ ಭೂಮಿಯಲ್ಲಿ 49% ಸತುವಿನ ಕೊರತೆಯನ್ನೂ , 12% ಕಬ್ಬಿಣದ ಕೊರತೆಯನ್ನೂ , 5% ಮ್ಯಾಂಗನೀಸ್, ಮತ್ತು 3% ದಷ್ಟು ತಾಮ್ರದ ಕೊರತೆಯನ್ನು 33% ಬೋರಾನ್ ಮತ್ತು 11%  ಮಾಲಿಬ್ಡಿನಂ ಕೊರತೆಯನ್ನು ಹೊಂದಿದೆ ಎಂಬುದಾಗಿ ಅಧ್ಯಯನ ಹೇಳುತ್ತದೆ. ನಿಮ್ಮ ಯಾವುದೇ ಬೆಳೆಗೆ 1 ಲೀ. ನೀರಿಗೆ 1  ಗ್ರಾಂ ಪ್ರಮಾಣದಲ್ಲಿ ಮೈಕ್ರೋ ನ್ಯೂಟ್ರಿಯೆಂಟ್ ಮಿಶ್ರಣ ಮಾಡಿ ಸಿಂಪರಣೆ ಮಾಡಿ.ಆಗ ತಿಳಿಯುತ್ತದೆ ಅದರ ಮಹಿಮೆ ಏನು ಎಂಬುದು….

Read more
ಎಲೆ ಹಳದಿಯಾಗುವುದಕ್ಕೆ ಒಂದು ಕಾರಣ ಗಂಧಕದ ಕೊರತೆ.Yellowing of leaves is one of sulphur deficiency symptom

ಗಂಧಕ- ಬೆಳೆಗಳಿಗೆ ಅಗತ್ಯವಾಗಿ ಬೇಕಾಗುವ ಪೋಷಕಾಂಶ.

ಬಹಳ ರೈತರು ತಮ್ಮ ಅಡಿಕೆ ಮರದ ಗರಿಗಳು ಹಳದಿಯಾಗಿವೆ, ಮರದ ಸುಳಿಗಳು ಸಣ್ಣದಾಗುತ್ತಿವೆ. ತೆಂಗಿನ  ಮರದಲ್ಲಿ ಕಾಯಿ ಆಗುತ್ತಿಲ್ಲ. ರಸ ಹೀರುವ ಕೀಟಗಳ ಸಮಸ್ಯೆ ಎಂದೆಲ್ಲಾ  ಹೇಳುತ್ತಾರೆ. ಇದಕ್ಕೆ ಒಂದದು ಕಾರಣ ಗಂಧಕ ಎಂಬ ಅಗತ್ಯ ಪೋಷಕದ ಕೊರತೆ. ಬೆಳೆಗಳಲ್ಲಿ ಎಲೆಗಳು (Chlorosis)ಹಳದಿಯಾಗುವುದು, ಬೇರಿನ ಬೆಳವಣಿಗೆ ಕುಂಠಿತವಾಗುವುದು, ರೋಗ, ಕೀಟಗಳಿಗೆ ಬೇಗ ತುತ್ತಾಗುವುದು ಮುಂತಾದ ಕೆಲವು ಸಮಸ್ಯೆಗಳಿಗೆ  ಗಂಧಕದ ಕೊರತೆಯು ಒಂದು ಕಾರಣ. ಪ್ರತೀಯೊಂದು ಬೆಳೆಯೂ ಗಂಧಕವನ್ನು  ಅಪೇಕ್ಷಿಸುತ್ತದೆ. ರೈತರು ಸಲ್ಫೇಟ್ ರೂಪದ ಗೊಬ್ಬರವನ್ನು ಬೆಳೆಗಳಿಗೆ ಕೊಡುತ್ತಿದ್ದರೆ…

Read more
error: Content is protected !!