ಕಲ್ಲಿನ ಕೂರೆಯ ಹುಡಿಯೂ ಉತ್ತಮ ಗೊಬ್ಬರ ಗೊತ್ತೇ?

ಸಸ್ಯ ಪೋಷಕವಾಗಿ ನಮಗೆ ರಾಕ್ ಫೋಸ್ಫೇಟ್ ಬಳಕೆ ಗೊತ್ತು.ಇದು ಕಲ್ಲಿನ ಹುಡಿ. ಅದೇ ರೀತಿ ನಮ್ಮ ಸುತ್ತಮುತ್ತ ಬೇರೆ ಬೇರೆ  ಶಿಲೆಗಳನ್ನು ಕಾಣಬಹುದು. ಶಿಲೆಗಳೆಲ್ಲವೂ ಜ್ವಾಲಾಮುಖಿಯ ಮೂಲಕ ಸೃಷ್ಟಿಯಾದವುಗಳು. ಅದರಲ್ಲಿ ಬೆಳೆ ಪೋಷಣೆಗೆ ಬೇಕಾಗುವ ವಿವಿಧ ಪೋಷಕಾಂಶಗಳು ಇವೆ.  ಇದನ್ನುಮೊತ್ತ ಮೊದಲ ಬಾರಿಗೆ  ಮಂಡ್ಯದ ಕೃಷಿ ಮಹಾವಿಧ್ಯಾಲಯದ  ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಯ ಅಸ್ತಿತ್ವಕ್ಕೆ ಮಣ್ಣೇ ಆಧಾರ. ಬೆಳೆಗಳಿಗೆ ಮರಗಿಡಗಳಿಗೆ ಆಸರೆ ನೀಡುತ್ತದೆ. ಪೋಷಕಾಂಶವನ್ನು ಒದಗಿಸುತ್ತದೆ. ನೀರನ್ನುಹಿಡಿದಿಟ್ಟುಕೊಂಡು ಬೇಕಾದಾಗ ಪೂರೈಸುತ್ತದೆ. ಮಣ್ಣು ಸಕಲ ಪೋಷಕಾಂಶಗಳನ್ನೂ…

Read more

ಕಿಸಾನ್ ಕ್ರೆಡಿಟ್ ಕಾರ್ಡ್ ಸರಕಾರದ ಕೊಡುಗೆಯೇ ?

ಕೇಂದ್ರ ಸರಕಾರ  ಮೇ. 14-2020 , ರಂದು ವಿಶೇಷ ಪ್ಯಾಕೇಜ್  ಅಡಿಯಲ್ಲಿ 2.5 ಕೋಟಿ ಹೊಸ ಕೃಷಿಕರಿಗೆ  ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಯೋಜನೆ ಹಾಕಿಕೊಂಡಿದೆ. ಬಹಳಷ್ಟು ಜನ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಸರಕಾರ  ಸರಕಾರ  ಕೊಡುವ ಸವಲತ್ತು ಎಂದು ಭಾವಿಸಿದೆ. ಇದು ಹಾಗಲ್ಲ. ರೈತರು ಬ್ಯಾಂಕ್ ವ್ಯವಹಾರ ಮಾಡುವಾಗ ಹಣ  ತೆಗೆಯಲು ಆನುಕೂಲವಾಗುವಂತೆ ಕೊಡುವ ಕ್ರೆಡಿಟ್  ಕಾರ್ಡ್ ಇದು. ಇದರಲ್ಲಿ ನಿಮ್ಮ ಖಾತೆಯಲ್ಲಿ ಜಮಾ ಇದ್ದರೆ ಅದು ಮುಗಿಯುವ  ತನಕ  ಹಣ ತೆಗೆಯಬಹುದು….

Read more
pest problem

ಅಡಿಕೆ ಹೂಗೊಂಚಲು ಒಣಗುತ್ತಿದೆಯೇ ? ಯಾವ ಕಾರಣ- ಪರಿಹಾರ.

ಅಧಿಕ ಆದಾಯದ ಅಡಿಕೆ ಬೆಳೆಯಲ್ಲಿ ಹೂಗೊಂಚಲು ಒಣಗುವ ಸಮಸ್ಯೆ ಅತೀ ದೊಡ್ಡದು. ಇದಕ್ಕೆ ಪರಿಹಾರ ಸಿಂಗಾರಕ್ಕೆ ಸಿಂಪರಣೆ ಒಂದೇ.ರಾಸಾಯನಿಕ ಸಿಂಪರಣೆ ಇಷ್ಟವಿಲ್ಲದವರು ಮರದಲ್ಲಿ ಒಣಗಿದ ಹೂಗೊಂಚಲು ಶೇಷವನ್ನು ಸಂಪೂರ್ಣವಾಗಿ ತೆಗೆದು ಸ್ವಲ್ಪ ಮಟ್ಟಿಗೆ ನಷ್ಟದಿಂದ ಪಾರಾಗಬಹುದು. ಕಳೆದ ವರ್ಷ ಅಡಿಕೆ ಬೆಳೆಗಾರರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿಕೊಂಡಿದ್ದಾರೆ. ಕಾರಣ ಉತ್ತಮ ಹೂ ಗೊಂಚಲು ಇತ್ತು. ಆದರೆ ಹೂ ಗೋಂಚಲೆಲ್ಲಾ ಒಣಗಿ ಹಾಳಾಗಿದೆ. ಇದರಿಂದಾಗಿ ಬೆಳೆ ಸುಮಾರು 30% ನಷ್ಟವಾಗಿದೆ. ಈ ವರ್ಷ ಹಾಗಾಗಬಾರದು ಎಂದು ಬೆಳೆಗಾರರು…

Read more
ಜರ್ಸಿ – ಎಚ್ ಎಪ್ ಹಸುವಿನ ಸಗಣಿಯಲ್ಲಿ ಪೋಷಕಾಂಶ ಹೆಚ್ಚು

ಜರ್ಸಿ – ಎಚ್ ಎಪ್  ಹಸುವಿನ ಸಗಣಿಯಲ್ಲಿ  ಪೋಷಕಾಂಶ ಹೆಚ್ಚು.

ಜರ್ಸಿ – ಎಚ್ ಎಫ಼್  ಹಸುಗಳು ಹಾಕುವ ಸಗಣಿಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದರೆ ಬೇಸರ ಮಾಡಿಕೊಳ್ಳಬೇಡಿ. ನಿಜವಾಗಿಯೂ ಇದು ಸತ್ಯ. ಈ ಹಸುಗಳು  ವಿದೇಶಿ ತಳಿಗಳಾದರೂ  ಅವು ಹಾಕುವ ಸಗಣಿಯಲ್ಲಿ ಪೋಷಕಾಂಶ  ಚೆನ್ನಾಗಿಯೇ ಇರುತ್ತದೆ. ಹಾಗೆಂದು ನಾಟೀ ಹಸುಗಳ ಸಗಣಿಯಲ್ಲಿ ಇಲ್ಲ ಎಂದಲ್ಲ. ಯಾವ ಹಸುಗಳಿಗೆ ಅಧಿಕ ಸತ್ವದ ಆಹಾರ ಕೊಡಲಾಗುತ್ತದೆಯೋ ಅವುಗಳು ವಿಸರ್ಜಿಸುವ ತ್ಯಾಜ್ಯದಲ್ಲಿ  ಆ ಸತ್ವಗಳ ಉಳಿಕೆ ಇರುತ್ತವೆ. ಹಸುಗಳಲ್ಲಿ ನಾಟಿ ಮತ್ತು ವಿದೇಶೀ ತಳಿ ಎಂಬ ಎರಡು ವಿಧಗಳು. ನಾಟಿ ತಳಿಗೆ…

Read more
ಕಾಲಸ್ಥಿತಿಗೆ ಅನುಗುಣವಾಗಿ ಕೃಷಿ ಮಾಡಬೇಕು- ಅಶೋಕ್ ಕುಮಾರ್ ಕರಿಕಳ..

ಕಾಲಸ್ಥಿತಿಗೆ ಅನುಗುಣವಾಗಿ ಕೃಷಿ ಮಾಡಬೇಕು- ಅಶೋಕ್ ಕುಮಾರ್ ಕರಿಕಳ.

ಕೃಷಿಕರಾದವರು ಕಾಲಸ್ಥಿತಿಗೆ ಅನುಗುಣವಾಗಿ ತಮ್ಮ ವೃತ್ತಿಕ್ಷೇತ್ರದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡು ಬಂದರೆ  ಯಾವುದೋ ಕಷ್ಟವಿಲ್ಲದೆ ಅದರಲ್ಲಿ ಯಶಸ್ಸನು ಹೊಂದಬಹುದು ಎಂಬುದು ಕರಿಕಳ ಅಶೋಕ್ ಕುಮಾರ್ ಇವರ ಅನುಭವದ ಮಾತು. ಇವರು ಹುಟ್ಟು ಕೃಷಿಕರು. ಅದೇ ಕ್ಷೇತ್ರದಲ್ಲಿ ವ್ಯಾಸಂಗವನ್ನೂ ಮಾಡಿದವರು. ಜೊತೆಗೆ ಅದೇ ಕ್ಷೇತ್ರದಲ್ಲೇ ತನ್ನ ಬದುಕನ್ನೂ ಕಟ್ಟಿಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಸಮೀಪದ ಕರಿಕಳ ಎಂಬಲ್ಲಿ ವೈದ್ಯರ ಮಗನಾಗಿ ಹುಟ್ಟಿ, ಈಗ ಬೆಂಗಳೂರು ದೊಡ್ಡಬಳ್ಳಾಪುರದಲ್ಲಿ ಕೃಷಿ ಮತ್ತು ಅದಕ್ಕೆ ಪೂರಕ ವೃತ್ತಿ ನಡೆಸುತ್ತಿದ್ದಾರೆ. ಇವರರನ್ನು  ಕೃಷಿ…

Read more
ಬೇಗ ಇಳುವರಿ ಕೊಡಬಲ್ಲ ತೆಂಗಿನ ಸಸಿ ಲಕ್ಷಣ - Early yielding nature of plant

ಉತ್ತಮ ಇಳುವರಿ ನೀಡಬಲ್ಲ ತೆಂಗಿನ ಸಸಿಯ ಲಕ್ಷಣಗಳು ಹೇಗೆ ಇರಬೇಕು?

 ಧೀರ್ಘಾವಧಿ ಬೆಳೆಗಳಲ್ಲಿ ಸಸ್ಯ ಮೂಲವನ್ನು ಆರಿಸುವಾಗ ನಮಗೆ ಸ್ವಲ್ಪ ಮಟ್ಟಿಗೆ ಸಸಿ ಹೀಗೆ ಇದ್ದರೆ ಉತ್ತಮ ಎಂಬ ಮಾನದಂಡಗಳನ್ನು ತಿಳಿದಿದ್ದರೆ ಒಳ್ಳೆಯದು.  ಕಾರಣ ಈ ಗಿಡ ನೆಟ್ಟು ಪ್ರತಿಫಲ ತೋರಿಸಲು 5-6 ವರ್ಷ ಬೇಕು. ಆಗ ನಮ್ಮ ಆಯ್ಕೆ ಸ್ವಲ್ಪ ತಪ್ಪಿದ್ದರೆ ಅಷ್ಟೂ ವರ್ಷ ನಷ್ಟ. ಇದಕ್ಕಾಗಿ ಪ್ರತೀಯೊಬ್ಬ ತೆಂಗು ಬೆಳೆಯುವವನೂ ತೆಂಗಿನ ಉತ್ತಮ ಗಿಡದ ಲಕ್ಷಣಗ ಗಳು ಹೀಗೆ ಇರಬೇಕು ಎಂಬುದನ್ನು ತಿಳಿದಿದ್ದರೆ ಒಳ್ಳೆಯದು. ತೆಂಗು ಮಿಶ್ರ ಪರಾಗಸ್ಪರ್ಷದ ಮೂಲಕ ಕಾಯಿ ಕಚ್ಚುವ ಸಸ್ಯವಾಗಿದು, ಯಾವ ಮರದ ಕಾಯಿಯನ್ನು…

Read more
ಮಣ್ಣಿನಲ್ಲಿ  ಎಷ್ಟೆಲ್ಲಾ ಸೂಕ್ಷ್ಮ ಜೀವಿಗಳಿವೆ- ಅವು  ಹೇಗೆ ಬದುಕುತ್ತವೆ.

ಮಣ್ಣಿನಲ್ಲಿ  ಎಷ್ಟೆಲ್ಲಾ ಸೂಕ್ಷ್ಮ ಜೀವಿಗಳಿವೆ- ಅವು  ಹೇಗೆ ಬದುಕುತ್ತವೆ.

ಮಣ್ಣು ಎಂಬುದು ಸೂಕ್ಷ್ಮ ಜೀವಿಗಳ  ಮನೆ ಎಂದೇ ಹೇಳಬಹುದು. ಇಲ್ಲಿ ಬಹುತೇಕ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ವಾಸವಾಗಿರುತ್ತವೆ. ಕೆಲವು ಕಣ್ಣಿಗೆ ಕಾಣಿಸಿದರೆ ಮತ್ತೆ ಕೆಲವು ಕಾಣಿಸುವುದಿಲ್ಲ.  ಇವೆಲ್ಲಾ ಮಣ್ಣಿನ ಆಸರೆಯಲ್ಲಿ ಬೆಳೆದು ಅದೇ ಮಣ್ಣಿಗೆ, ಅಲ್ಲಿನ ಸಸ್ಯ ಜೀವಿಗಳಿಗೆ ಪ್ರಯೋಜನವನ್ನೂ  ಹಾಗೆಯೇ ಕೆಲವೇ ಕೆಲವು ತೊಂದರೆಯನ್ನೂ ಉಂಟುಮಾಡುತ್ತವೆ. ಪ್ರಕೃತಿ ಅಥವಾ ಸೃಷ್ಟಿ ಉಪಕಾರೀ ಜೀವಿಗಳಿಗೆ ಪ್ರಾಬಲ್ಯವನ್ನು ಕೊಟ್ಟಿದೆ. ಪ್ರತಿಕೂಲ ವಾತಾರಣದಲ್ಲಿ ಮಾತ್ರ ಅವು ದುರ್ಬಲವಾಗುತ್ತದೆ.  ಇಲ್ಲಿ ನಾವು  ವಿವಿಧ ಜೀವಾಣುಗಳ ಬಗ್ಗೆ ತಿಳಿಯೋಣ. ಖನಿಜ ವಸ್ತು,…

Read more
ಅಡಿಕೆ ಧಾರಣೆ ಹಿಂದೆ- ಕಾರಣ ಏನು? ಯಾವಾಗ ಚೇತರಿಕೆ

ಅಡಿಕೆ ಧಾರಣೆ ಹಿಂದೆ- ಕಾರಣ ಏನು? ಯಾವಾಗ ಚೇತರಿಕೆ ಆಗಬಹುದು?

ಬೆಳೆಗಾರರ ಬಹು ನಿರೀಕ್ಷೆಯ ಉತ್ತಮ ಧಾರಣೆ ಯಾಕೋ ಈ ವರ್ಷ ಈಡೇರಲಿಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ಇದ್ದ ಧಾರಣೆಗಿಂತ ಈ ವರ್ಷ ಕಡಿಮೆ. ಕಾರಣ ಎನಿರಬಹುದು? ಯಾವಾಗ ಚೇತರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿರುವ ಬೆಳೆಗಾರರಿಗೆ ಇಲ್ಲಿದೆ ಕೆಲವು ಅಗತ್ಯ ಮಾಹಿತಿ. ಈ ವರ್ಷ ಅಡಿಕೆ ಧಾರಣೆ ಕಳೆದ ವರ್ಷದಷ್ಟು ಏರಿಕೆ ಆಗುವ ನಿರೀಕ್ಷೆ ಸದ್ಯಕ್ಕೆ ಇಲ್ಲ. ಚಾಲಿ ಅಡಿಕೆ ಧಾರಣೆ ಮತ್ತೆ ಕ್ವಿಂಟಾಲಿಗೆ ರೂ.1000 ಕಡಿಮೆಯಾಗಿದೆ. ಡಬ್ಬಲ್ ಚೋಲ್ ಸಹ 1000 ದಷ್ಟು ಕಡಿಮೆಯಾಗಿದೆ. ಕೆಂಪಡಿಕೆಗೂ…

Read more
ಅಡಿಕೆ

ವರ್ಷಾಂತ್ಯದಲ್ಲೂ ಸ್ಥಿರತೆ ಉಳಿಸಿಕೊಂಡ ಅಡಿಕೆ ಧಾರಣೆ- ಮುಂದೆ ಇದೆ ಚಾನ್ಸ್.

ಸಾಮಾನ್ಯವಾಗಿ ಮಾರ್ಚ್ ವರ್ಷಾಂತ್ಯದಲ್ಲಿ ದರ ಇಳಿಕೆ ಸಾಮಾನ್ಯ. ಆದರೆ ಈ ವರ್ಷ ಹಾಗೆ ಆಗದೆ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಹಾಗಾಗಿ ಮುಂದಿನ ತಿಂಗಳಲ್ಲಿ ಚಾಲಿ- ಕೆಂಪಡಿಕೆ ಎರಡೂ ಏರಿಕೆ ಆಗಲಿದೆ. ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಸೂಚನೆ ದರ ಸ್ಥಿರತೆಯಲ್ಲಿ ಗಮನಿಸಬಹುದು.  ಚಾಲಿ ಎರಡು ತಿಂಗಳಿಂದ ಸ್ಥಿರವಾಗಿತ್ತು. ಈಗ  ಸಾಗರ, ಹೊಸನಗರ, ಇಲ್ಲೆಲ್ಲಾ ಸಿಪ್ಪೆ ಗೋಟಿಗೆ ಬೇಡಿಕೆ ಬರಲಾರಂಭಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಚಾಲಿ ದರ ಏರಿಕೆ ಪ್ರರಾಂಭವಾಗಿದೆ. ಸಿಪ್ಪೆ ಗೋಟು ದರ ಏರಿಕೆ ಚಾಲಿಗೆ ಬೇಡಿಕೆಯ ಸೂಚನೆಯಾಗಿದ್ದು, ಚಾಲಿ…

Read more
error: Content is protected !!