ಕೆಂಪಡಿಕೆ

ಅಡಿಕೆ ಧಾರಣೆ ದಿನಾಂಕ- 09-11-2021 ಮಂಗಳವಾರ ಸ್ಥಿರ ಧಾರಣೆ.

09-11-2021 ಮಂಗಳವಾರ  ಅಡಿಕೆ ಧಾರಣೆ ಸ್ಥಿರವಾಗಿಯೂ  ಕರಿಮೆಣಸು ಸ್ವಲ್ಪ ಇಳಿಕೆಯೂ ಕೊಬ್ಬರಿ, ಕಾಫಿ ಹಾಗೂ ರಬ್ಬರ್ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಅಡಿಕೆಯ ಧಾರಣೆಗೆ ಯಾವ ಅಂತಂಕವೂ ಇಲ್ಲ. ಯಾವ ಸುದ್ದಿಗೂ ಬೆಳೆಗಾರರು ಗಮನ ಕೊಡಬೇಕಾಗಿಲ್ಲ. ಅಡಿಕೆ ಬೆಳೆಗಾರರ ಸುದ್ದಿಗೆ ಯಾವ ಸರಕಾರವೂ ಬರುವುದಿಲ್ಲ.ಅಡಿಕೆ ಬ್ಯಾನ್ ಮುಂತಾದ ಪ್ರಸ್ತಾಪ ಕೇವಲ ತಾತ್ಕಾಲಿಕ ಮಾತ್ರ. ಇಂದು ಅಡಿಕೆ ಧಾರಣೆ: BANTWALA, 09/11/2021, Coca, 26, 12500, 25000, 22500 BANTWALA, 09/11/2021, New Variety, 3, 27500, 42500, 40000…

Read more
ಆಮಟೆ ಕಾಯಿ ಒಡೆದದ್ದು

ಅಮಟೆ- ಇದಕ್ಕೆ ಭಾರೀ ಔಷಧೀಯ ಗುಣ ಇದೆ.  

ನಮ್ಮ ಹಿರಿಯರ ಆಹಾರಾಭ್ಯಾಸಗಳಲ್ಲಿ ಬಹಳ  ಶಿಸ್ತು, ಪೌಷ್ಠಿಕತೆ , ಔಷಧೀಯ ಮಹತ್ವ ಇತ್ತು. ಋತುಮಾನ ಆಧಾರಿತ ಆಹಾರವಸ್ತುಗಳನ್ನೇ ಬಳಸುವುದು ಅವರ ಕ್ರಮ. ಇಂತಹ ಆಹಾರಗಳಲ್ಲಿ  ಕೆಸು, ಅಮಟೆ, ಮಾವು, ಕುಡಿ,ಸೊಪ್ಪು ಮುಂತಾದವು ಸೇರಿವೆ. ಹಿರಿಯರು  ಉಚಿತವಾಗಿ   ಲಭ್ಯವಿರುತ್ತಿದ್ದ  ವಸ್ತುಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಅದು ಉಚಿತವಾಗಿದ್ದರೂ ಆರೋಗ್ಯಕ್ಕೆ ಉತ್ತಮವಾಗಿತ್ತು. ಈಗ ನಾವು ದುಡ್ಡು ಕೊಟ್ಟು ಖರೀದಿಸುವ ವಸ್ತುಗಳಲ್ಲಿ  ಆರೋಗ್ಯವನ್ನು  ಗಮನಿಸುವುದೇ ಇಲ್ಲ. ಹಿಂದೆ ಮಳೆಗಾಲವೆಂಬ ಕಷ್ಟದ ಸಮಯದಲ್ಲಿ  ಅಡುಗೆಗೆ ಅಗ್ಗದಲ್ಲಿ ದೊರೆಯುವ ಹುಳಿ ಕಾಯಿ ಇದಾಗಿತ್ತು.  ಏನಿದು…

Read more
ginger in sprinkler irrigation

ಶುಂಠಿ ಬೆಳೆದ ಭೂಮಿ ಹಾಳಾಗುವುದು ನಿಜವೇ?

ಕೆಲವರು ಹೇಳುತ್ತಾರೆ ಶುಂಠಿ ಬೆಳೆದರೆ ಆ ಮಣ್ಣು ಹಾಳಾಗುತ್ತದೆ. ಮತ್ತೆ ಅಲ್ಲಿ ಬೆಳೆ ಬೆಳೆಯಲಿಕ್ಕಾಗುವುದಿಲ್ಲ ಎಂದು. ಇದು ನಿಜವೇ? ಶುಂಠಿ ಬೆಳೆಗೆ ಬೇರೆ ಬೇರೆ ಪೊಷಕಾಂಶಗಳನ್ನು ಹಾಕುತ್ತಾರೆ. ಆದ ಕಾರಣ ಮಣ್ಣು ಜೀವ ಕಳೆದುಕೊಳ್ಳುತ್ತದೆ ಎಂಬ ಮಾತನ್ನು ಬಹಳ ಜನ ಇನ್ನೂ ನಂಬಿದ್ದಾರೆ. ಇದನ್ನು ಕೆಲವು ಜನ ರಂಗು ರಂಗಾಗಿ ವಿವರಿಸುತ್ತಾ  ಈ ವಿಷಯದಲ್ಲಿ ತಜ್ಞರಾಗುತ್ತಾರೆ. ಆದರೆ ವಾಸ್ತವವೇ ಬೇರೆ. ಶುಂಠಿ ಬೆಳೆ ಇರಲಿ ಇನ್ಯಾವುದೇ ಬೆಳೆ ಇರಲಿ ಅದು ಮಣ್ಣಿನಲ್ಲಿ ಪೊಷಕ ಇದ್ದರೆ ಅದನ್ನು ಬಳಸಿಕೊಳ್ಳುತ್ತದೆ….

Read more

ಕೊಳೆ ರೋಗ ಬಾರದಿರುವಂತೆ ಮುನ್ನೆಚ್ಚರಿಕೆ.

ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರ ನಮ್ಮ ವಾತಾವರಣದಲ್ಲಿ ಎಲ್ಲಾ  ಕಡೆ ಬೀಜಾಣು ರೂಪದಲ್ಲಿ ಇರುತ್ತದೆ, ಇದು ಅನುಕೂಲ ಪರಿಸ್ಥಿತಿ  ಕೂಡಿ ಬಂದಾಗ ಬೀಜಾಂಕುರವಾಗುತ್ತದೆ. ಸಂತಾನಾಭಿವೃದ್ದಿ ಹೊಂದಿ ಅಡಿಕೆಯ ಎಳೆ ಕಾಯಿಗಳಿಗೆ ಹಾನಿ ಮಾಡಿ ಬೆಳೆ ನಷ್ಟಕ್ಕೆ  ಕಾರಣವಾಗುತ್ತದೆ. ಪ್ರಾರಂಭದಲ್ಲೇ ಬೀಜಾಂಕುರವನ್ನು ತಡೆದರೆ  ಪರಿಣಾಮ ಹೆಚ್ಚು. ತಜ್ಞರು ಕೊಳೆ ಔಷಧಿಯನ್ನು ಮುಂಗಾರು ಮಳೆ ಪ್ರಾರಂಭವಾಗುವ ಮುಂಚೆಯೇ ಅಡಿಕೆ ಗೊನೆಗಳಿಗೆ ಸಿಂಪರಣೆ ಮಾಡಬೇಕು ಎನ್ನುತ್ತಾರೆ. ನಾವು ಇನ್ನೂ ಅಡಿಕೆ  ಮಿಡಿಗಳು ಸಣ್ಣದಿವೆ. ಅದಕ್ಕೆ ಹೇಗಪ್ಪಾ ಔಷಧಿ ತಗಲುವುದು ಎಂದು ಸಾಧ್ಯವಾದಷ್ಟು…

Read more
ಅ ಸಾಮಾನ್ಯ ಮಳೆ

ಈಗ ಬಂದದ್ದು  ಸಾಮಾನ್ಯ ಮಳೆಯೇ? ಆಮ್ಲ ಮಳೆಯೇ?

ಮಳೆ ಎಂದರೆ ಮಳೆ ಅದರಲ್ಲಿ ವಿಶೇಷ ಏನಿದೆ? ಖಂಡಿತವಾಗಿಯೂ ಇದೆ. ಮಳೆ ನೀರು ಸಾಮಾನ್ಯ ನೀರಿನಂತೆ ಕಂಡರೂ ಅದರ ಗುಣ ವ್ಯತ್ಯಾಸಗಳು ಸಸ್ಯಗಳು , ಮನುಷ್ಯರು, ಪ್ರಾಣಿ ಪಕ್ಷಿಗಳು ಮತ್ತು ಸೂಕ್ಷ್ಮಾಣು ಜೀವಿಗಳ ಮೇಲೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ. ಈ ವರ್ಷದ ಮಳೆ ಅಂತಹ ಸನ್ನಿವೇಶವನ್ನು ಉಂಟು ಮಾಡಿದೆ. ಮಳೆ ಎಂಬುದು ಮೇಘ ಸ್ಪೋಟ ಆದಂತೆ ಬರುತ್ತಿದ್ದು, ಕಣ್ಣಿಗೆ ಕಾಣುವಂತ ಕೆಲವು ತೊಂದರೆಗಳು ಮತ್ತು ಕಣ್ಣಿಗೆ ಕಾಣದ ಕೆಲವು ತೊಂದರೆಗಳು ಉಂಟಾಗಿವೆ. ಈ ವರ್ಷದ…

Read more
ಆಷಾಢ ಅಮಾವಾಸ್ಯೆಯೂ – ಪಾಲೆ ಮರದ ಚೆಕ್ಕೆಯೂ...

ಆಷಾಢ ಅಮಾವಾಸ್ಯೆಯೂ – ಪಾಲೆ ಮರದ ಚೆಕ್ಕೆಯೂ…

ಆಟಿ ಅಥವಾ ಆಷಾಡ ಮಾಸದ ಅಮವಾಸ್ಯೆಯಂದು ಬೆಳ್ಳಂಬೆಳಗ್ಗೆ  ಪಾಲೆ/ ಮದ್ದಾಲೆ ಮರದ ಚೆಕ್ಕೆಯನ್ನು ತೆಗೆದು ಅದರ  ರಸವನ್ನು ಸೇವಿಸುವ ಅನಾದಿ ಕಾಲದ ಕ್ರಮದ ಕುರಿತಾಗಿ,  ಯಾಕೆ ಏನು ಎಂಬ ಕುತೂಹಲ  ಇದ್ದವರಿಗೆ ಸಮಯೋಚಿತವಾಗಿ  ವೈಜ್ಞಾನಿಕ ಅಂಶಗಳ ಅನಾವರಣ ಇಲ್ಲಿದೆ. ಓದಿಕೊಂಡು ಭಕ್ತಿ ಭಾವದಿಂದ ಇದನ್ನು ಮಾಡಿ.  ಪಾಲೆ ಕೆತ್ತೆ ರಸ ಸೇವನೆಗೆ ಜಾತಿ ಧರ್ಮದ ಯಾವ ಅಬ್ಯಂತರವೂ ಇಲ್ಲ. ಇದು ಮಾನವನ ಆರೋಗ್ಯ ದೃಷ್ಟಿಯಿಂದ ಹಿರಿಯರು ಮಾಡಿಕೊಂಡು ಬಂದ ಕ್ರಮ.  ಬಹುಶಃ ನಮ್ಮ ಹಿರಿಯರು ವೈಜ್ಞಾನಿಕ ಶಿಕ್ಷಣ…

Read more
ತೆಂಗು ಬೆಳೆಗಾರರನ್ನು ಉಳಿಸಿ- ಇಲ್ಲವಾದರೆ ತೆಂಗು ಬೆಳೆಯೇ ಕ್ಷೀಣಿಸಬಹುದು!

ತೆಂಗು ಬೆಳೆಗಾರರನ್ನು ಉಳಿಸಿ- ಇಲ್ಲವಾದರೆ ತೆಂಗು ಬೆಳೆಯೇ ಕ್ಷೀಣಿಸಬಹುದು!

ತೆಂಗು ಬೆಳೆಗಾರರ ನೆರವಿಗೆ ಸರಕಾರ ಮತ್ತು ತೆಂಗಿನ ಉತ್ಪನ್ನ ಬಳಕೆದಾರರು ಬಾರದೆ ಇದ್ದರೆ ಕೆಲವೇ ಸಮಯದಲ್ಲಿ ತೆಂಗಿನ ಬೆಳೆಯನ್ನೇ ರೈತರು ಬಿಡುವ ಸ್ಥಿತಿ ಬರಬಹುದು. ಕಲ್ಪವೃಕ್ಷ ತೆಂಗು, ಯಾವತ್ತೂ ಭವಿಷ್ಯವಿರುವ ಬೆಳೆ ಎಂದು ನಂಬಿದ್ದ ಬೆಳೆಗಾರರಿಗೆ ಯಾವತ್ತೂ  ಆಕರ್ಷಕ ಬೆಲೆ ಬರಲೇ ಇಲ್ಲ. ತೆಂಗಿನ ಬೆಳೆ ಕಡಿಮೆ ಇದ್ದ 30-40 ವರ್ಷಗಳ ಹಿಂದೆ ಇದ್ದ ಬೆಲೆಗಿಂತಲೂ ಕಡಿಮೆ ಬೆಲೆ ಈಗ ತೆಂಗಿನ ಕಾಯಿಯದ್ದು. ಈ ಬೆಲೆಯಲ್ಲಿ ತೆಂಗು ಬೆಳೆಗಾರರು ಉಳಿಯುವುದು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಸರಕಾರ ತೆಂಗು…

Read more

ಕೀಟಗಳ ನಿಯಂತ್ರಣಕ್ಕೆ ಹೀಗೆ ಮಾಡಿದರೆ ತುಂಬಾ ಅನುಕೂಲ.

 ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಬಂಧಿಸುವುದು. ಕೀಟಗಳಿಗೆ ಬೇಕಾದಷ್ಟು ಅಹಾರ ಕೊಟ್ಟು ಅವುಗಳನ್ನು ಅಲ್ಲೇ ಬಂಧಿಸುವುದು ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ. ನಾವು ಕೈಯಿಂದ ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು. ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ. ಹುಳ ಬಿದ್ದಿದೆ ಯಾವ ಕೀಟ ನಾಶಕ ಸಿಂಪಡಿಸಬೇಕು ಎಂದು ಕೇಳುತ್ತೇವೆಯೇ ವಿನಹ ಏನು ಮಾಡಬೇಕು ಎಂದು ಕೇಳುತ್ತಿಲ್ಲ. ತಜ್ಞರ ಬಳಿಗೆ ರೈತರು ಹೋಗುವುದಿಲ್ಲ….

Read more
Weed Removal After Monsoon: Key to Soil Recharging and Flowering in Horticultural Crops

Weed Removal After Monsoon: Key to Soil Recharging and Flowering in Horticultural Crops

In coastal and hilly (Malenadu) regions, monsoon rainfall continues for five to six months every year. During this long wet period, the soil remains waterlogged and airless. Under such conditions, the soil becomes acidic, and its natural balance is disturbed. Beneficial microbes that support root growth and nutrient availability become inactive, while harmful microbes multiply….

Read more
ಮಾವಿನ ಹೂವು ರಕ್ಷಣೆ: ಹೂ ಉದುರುವಿಕೆ ಕಡಿಮೆ ಮಾಡಿ ಉತ್ತಮ ಫಲ ಪಡೆಯುವ ಸಂಪೂರ್ಣ ಮಾರ್ಗದರ್ಶಿ.

ಮಾವಿನ ಹೂವು ರಕ್ಷಣೆ: ಹೂ ಉದುರುವಿಕೆ ಕಡಿಮೆ ಮಾಡಿ ಉತ್ತಮ ಫಲಪಡೆಯುವ ಸಂಪೂರ್ಣ ಮಾರ್ಗದರ್ಶಿ.

ಮಾವಿನ ಬೆಳೆಯಲ್ಲಿ ಹೂವು ಬಿಡುವ ಹಂತ (Flowering stage) ಎನ್ನುವುದು ಇಡೀ ಬೆಳೆಯ ಉತ್ಪಾದನೆಯನ್ನು ನಿರ್ಧರಿಸುವ ಅತ್ಯಂತ ಮುಖ್ಯ ಹಂತವಾಗಿದೆ. ಈ ವರ್ಷ ಬಹುತೇಕ ತೋಟಗಳಲ್ಲಿ ಹೆಚ್ಚು ಹೂ ಬಿದ್ದಿರುವುದು ಕಂಡುಬರುತ್ತಿದೆ. ಆದರೆ ರೈತರಿಗೆ ಗೊತ್ತಿರಬೇಕಾದ ಮುಖ್ಯ ವಿಚಾರವೇನೆಂದರೆ, ಹೂ ಹೆಚ್ಚು ಇದ್ದರೆ ಫಲವೂ ಹೆಚ್ಚು ಬರುತ್ತದೆ ಎಂಬುದು ತಪ್ಪು ಕಲ್ಪನೆ. ಮಾವಿನ ಉತ್ಪಾದನೆ ನೇರವಾಗಿ ಹೂಗಳ ಸಂಖ್ಯೆಯಿಂದ ಅಲ್ಲ, ಆದರೆ ಫಲಕಚ್ಚುವುದು  (Fruit set) ಮತ್ತು ಫಲಧಾರಣೆ (Fruit retention) ಮೇಲೆ ಅವಲಂಬಿತವಾಗಿರುತ್ತದೆ. ಮಾವು ಹೂ…

Read more
error: Content is protected !!