ಬೂದಿ

ಕೃಷಿ ಸುಣ್ಣ – ಯಾವುದನ್ನು ಹಾಕಿದರೆ ಹೇಗೆ?

ಪ್ರಾದೇಶಿಕವಾಗಿ ಕೃಷಿ ಸುಣ್ಣದ ನೈಸರ್ಗಿಕ ಮೂಲಗಳು ಬೇರೆ ಬೇರೆ ಇರುತ್ತವೆ. ಸಾಮಾನ್ಯವಾಗಿ ಕರಾವಳಿ ಪ್ರದೇಶದಲ್ಲಿ ಕಪ್ಪೆ ಚಿಪ್ಪಿನಲ್ಲಿ ಸುಣ್ಣದ ಅಂಶ ಇದ್ದರೆ, ಅರೆ ಮಲೆನಾಡು ಮತ್ತು ಮೈದಾನ ಪ್ರದೇಶಗಳಲ್ಲಿ ಸುಣ್ಣದ ಕಲ್ಲುಗಳು, ಡೊಲೋ ಮೈಟ್  ಖನಿಜಗಳು ನೈಸರ್ಗಿಕ ಸುಣ್ಣದ ಮೂಲಗಳಾಗಿವೆ. ಇದಲ್ಲದೆ ಕೆಲವು ಕಾರ್ಖಾನೆಗಳ ತ್ಯಾಜ್ಯಗಳಲ್ಲೂ ಸುಣ್ಣದ ಅಂಶ ಇರುತ್ತದೆ. ಎಲ್ಲಿ ಯಾವುದು ಅಗ್ಗದಲ್ಲಿ ಲಭ್ಯವೋ ಅದನ್ನು  ಬಳಕೆ ಮಾಡಬೇಕು. ಬರೇ ಸುಣ್ಣದ ಅಂಶ ಮಾತ್ರ ಇರುವ ಮೂಲವಸ್ತುವನ್ನು ಬಳಕೆ ಮಾಡುವ ಬದಲಿಗೆ ಮೆಗ್ನೀಶಿಯಂ ಸಹ ಇರುವ…

Read more
ಅಡಿಕೆ ಬೇಯಿಸಿದ ರಾಸಿ

ಅಡಿಕೆಗೆ 2022 ಕ್ಕೆ ದಾಖಲೆಯ ಬೆಲೆ ಬರಲಿದೆ -ಅಡಿಕೆ ಧಾರಣೆ ದಿನಾಂಕ.16-12-2021.

ಹೊಸ ವರ್ಷ 2022 ಕ್ಕೆ ಅಡಿಕೆ ಧಾರಣೆ ಐತಿಹಾಸಿಕ ದಾಖಲೆಯನ್ನು ನಿರ್ಮಿಸುತ್ತದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಈಗಾಗಲೇ ಹೊಸ ಚಾಲಿಗೆ ರೂ.465 ದಾಟಿದೆ. ಹಳೆ ಚಾಲಿ 540-545 ಕ್ಕೆ ಮುಟ್ಟಿದೆ. ಕೆಂಪು ರಾಶಿ ಸರಾಸರಿ 47,000 ದ ಗಡಿ ದಾಟಿದೆ. ಈ ವರ್ಷದ ಕೊನೆ ಒಳಗೆ ಹೊಸ ಚಾಲಿ ದರ  47500 ದಾಟುವ ಎಲ್ಲಾ ಸಾಧ್ಯತೆಗಳಿದ್ದು, ಹಳೆ ಚಾಲಿ 55,000 ಮುಟ್ಟುವ ನಿರೀಕ್ಷೆ ಇದೆ. ಹೊಸ ವರ್ಷದಲ್ಲಿ ಕೆಂಪಡಿಕೆ ದರ ಮೇಲೇರಲಿದೆ. ಚಾಲಿಯೂ 50000 ಗಡಿ…

Read more
ನ್ಯಾನೊ ಸಾರಜನಕ (ಸಾಂದರ್ಭಿಕ ಚಿತ್ರ

ಶ್ರೀಲಂಕಾಕ್ಕೆ ಮತ್ತೆ ಭಾರತದಿಂದ ಸಾರಜನಕ ಗೊಬ್ಬರ.

ನೆರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಇರಾದೆಯಲ್ಲಿ ಭಾರತ ಸರಕಾರವು ಮತ್ತೆ ಶ್ರೀಲಂಕಾದ ಕೃಷಿಯನ್ನು ಮೇಲೆ ಎತ್ತಲು ನ್ಯಾನೋ ಸಾರಜನಕ ಗೊಬ್ಬರವನ್ನು ವಿಮಾನದಲ್ಲಿ ಕಳುಹಿಸಿಕೊಟ್ಟಿದೆ.  ಭಾರತದ ಔದಾರ್ಯವೋ ಚೀನಾಕ್ಕೆ ಸೆಡ್ದೋ ಒಟ್ಟಿನಲ್ಲಿ ಭಾರತ ಶ್ರೀಲಂಕಾಕ್ಕೆ ಬೆಂಬಲವಾಗಿ ನಿಂತಿದೆ. ನ್ಯಾನೋ ಯೂರಿಯಾ ಭಾರತದಲ್ಲಿ ಇಫ್ಕೋ ಸಂಸ್ಥೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದು, ಭಾರತದ   ರೈತರು ಇದನ್ನು ಎಷ್ಟು ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಶ್ರೀಲಂಕಾಕ್ಕೆ ಅದೇ ನ್ಯಾನೋ ಸಾರಜನಕವನ್ನು ಕಳುಹಿಸಲಾಗಿದೆಯೋ ಬೇರೆ ಕಳುಹಿಸಲಾಗಿದೆಯೋ ಮಾಹಿತಿ ಇಲ್ಲ. ಶ್ರೀಲಂಕಾದ ಸಾವಯವ ಕೃಷಿಗೆ ಸಹಾಯ ಎನ್ನುತ್ತಿರುವ…

Read more

ವಾಂದಾ ತಂದೀತೇ ಅಡಿಕೆ ಬೆಲೆಗೆ ಕುತ್ತು?.

ಅಡಿಕೆಯ ವ್ಯವಹಾರದಲ್ಲಿ 90% ಕ್ಕೂ ಹೆಚ್ಚು ಮುಂಗಡ ಹಣ ಪಡೆಯದೇ  ನಡೆಯುತ್ತದೆ. ಅಡಿಕೆ ಹೋಗುತ್ತದೆ, ದುಡ್ಡು ಬರುವು  ದು  ನಂತರ. ಮಾರುಕಟ್ಟೆ ಸರಿಯಿಲ್ಲ.  ಸೇಟು ಊರಿಗೆ ಹೋದ ಕಾರಣ ಹಣದ ಅಡಚಣೆ. ಮುಂತಾದ ಮಾತುಗಳನ್ನು ಕೇಳಿದ್ದೀರಲ್ಲಾ. ಅದೇ ಮಾಲು ಕಳುಹಿಸಿ ಅವರಿಂದ ಹಣ ಪಡೆಯುವಾಗ ನಡೆಯುವ ವಾಂದಾ ವ್ಯವಹಾರ. ವಾಂದಾ ಎಂದರೆ ತಕರಾರು. ಮಾಲು ಹೋದ ನಂತರ ತಕರಾರು ಮಾಡುವವರಿಗೆ ಸಾಕಷ್ಟು ಅವಕಾಶಗಳಿರುತ್ತವೆ. ಈ ತಕರಾರು ಮಾರುಕಟ್ಟೆಯನ್ನು ಬಹಳ ಅಲ್ಲಾಡಿಸುತ್ತದೆ. ಅದು ಮುಂದೆ ಅಡಿಕೆ ಮಾರುಕಟ್ಟೆ ತೆರೆಯುವ…

Read more
banana plantation

ಬಾಳೆ ಬೆಳೆಯುವಾಗ ಕಂದುಗಳನ್ನು ನಿಯತ್ರಿಸುವುದು ಹೇಗೆ?

ಬಾಳೆ ಬೆಳೆಗಾರರಿಗೆ ಕಂದುಗಳ ನಿಯಂತ್ರಣ ಒಂದು ದೊಡ್ಡ ಸಮಸ್ಯೆ. ಕಂದುಗಳು ಕಡಿಮೆಯಾದಷ್ಟೂ ಬಾಳೆ ಗೊನೆ ಚೆನ್ನಾಗಿ ಬರುತ್ತದೆ. ಬಾಳೆ ನೆಟ್ಟು ಸುಮಾರು 5-6 ತಿಂಗಳಿಗೆ ಕಂದುಗಳು ಬರಲಾರಂಭಿಸುತ್ತವೆ. ಕಂದುಗಳು ಬಂದ ನಂತರ ಇರುವ ಆಹಾರ ಅವುಗಳಿಗೂ ಹಂಚಿಕೆಯಾಗಬೇಕು. ಆಗ ಹೆಚ್ಚು ಹೆಚ್ಚು ಗೊಬ್ಬರಗಳನ್ನು ಕೊಡಬೇಕು. ಕಂದುಗಳನ್ನು ನಿಯಂತ್ರಿಸಿಕೊಂಡರೆ ಬಾಳೆಗೆ ಪೋಷಕಾಂಶ ಹಾಗೂ ನೀರಾವರಿ ಕಡಿಮೆ ಸಾಕಾಗುತ್ತದೆ. ಬಾಳೆ ಗೊನೆ ಪುಷ್ಟಿಯಾಗಿ ಬೆಳೆಯುತ್ತದೆ.  ಹಾಗಾದರೆ ಬಾಳೆಯಲ್ಲಿ ಕಂದುಗಳನ್ನು ತೆಗೆಯುವ ವಿಧಾನ ಹೇಗೆ? ಕಂದುಗಳ ನಿಯಂತ್ರಣಕ್ಕೂ ಬಾಳೆಯ ಅಧಿಕ ಇಳುವರಿಗೂ…

Read more
ಚಾಲಿ ಅಡಿಕೆ

ಚಾಲಿ ಮತ್ತು ಕೆಂಪು ಅಡಿಕೆ ಧಾರಣೆ ದಿನಾಂಕ:29-09-2021

ಇಂದು ಕರಾವಳಿಯ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ಸಂಸ್ಥೆ ದರವನ್ನು ಯಥಾಸ್ಥಿತಿ ಕಾಯ್ದುಕೊಂಡ ಕಾರಣ ಖಾಸಗಿಯವರು ಅಡಿಕೆ ಬೇಕು ಎನ್ನದೆ ಕ್ಯಾಂಪ್ಕೋ ದರದಲ್ಲೇ ಖರೀದಿ ನಡೆಸುತ್ತಿದ್ದರು. ಅಡಿಕೆ ಒತ್ತಾಯದಲ್ಲಿ ಬೇಕು ಎನ್ನುವಂತಹ ಸ್ಥಿತಿ ಇರಲಿಲ್ಲ. ಶಿರಸಿ, ಸಿದ್ದಾಪುರಗಳಲ್ಲೂ ಚಾಲಿ ಸ್ವಲ್ಪ ಹಿಂದೆಯೇ ಇತ್ತು. ಓರ್ವ ವರ್ತಕರ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಸ್ವಲ್ಪ ಇಳಿಕೆ ಆಗುವ ಸಾಧ್ಯತೆ ಇದೆಯಂತೆ. ಈಗಾಗಲೇ ಸಿಪ್ಪೆ ಗೋಟು ( ಒಣಗಿದ ಸಿಪ್ಪೆ ಇರುವ  ಚಾಲಿಗೆ ಸೂಕ್ತವಾದ ಅಡಿಕೆ) ದರ ಇಳಿಕೆಯಾಗಿದೆ. ವಾರದ…

Read more
ಹಲಸಿನ ಕಾಯಿಯಾಗುವ ಕೌತುಕ

ಹಲಸು ಹೇಗೆ ಕಾಯಿಯಾಗುತ್ತದೆ. ಅದರ ಕೌತುಕ ಏನು?

ಹಲಸಿನ ಮರದಲ್ಲಿ ಹೂವು ಬಿಡುವುದು ಹಲಸಿನ ಕಾಯಿಯಾಗಲು. ಹಲಸಿನ ಕಾಯಿಯ ಮಿಡಿಯೇ ಅದರ ಹೂವು.  ಕಳ್ಳಿಗೆ ಮತ್ತು ಮೈ ಕಳ್ಳಿಗೆ ಎಂದು ಕರೆಯುವ ಇದು ಹೆಣ್ಣು ಮತ್ತು ಗಂಡು ಹೂವುಗಳು. ಚಳಿಗಾಲ ಪ್ರಾರಂಭವಾಗುವ ಸಮಯದಿಂದ ಆರಂಭವಾಗಿ ಶಿವರಾತ್ರೆ  ತನಕ ಹಲಸಿನ ಮರ ಹೂವು ಬಿಡುವ ಕಾಲ. ಈ ಸಮಯದಲ್ಲಿ ಕೆಲವು ಬೇಗ ಹೂವು ಬಿಟ್ಟರೆ ಮತ್ತೆ  ಕೆಲವು ನಿಧಾನವಾಗಿ ಶಿವರಾತ್ರೆ  ನಂತರವೂ ಹೂವು ಬಿಡುತ್ತವೆ. ಗಾಳಿ  ಬಂದಾಗ ಹೂವು ಬಿಡುವಿಕೆ ಜಾಸ್ತಿ ಎನ್ನುತ್ತಾರೆ. ವಾಸ್ತವವಾಗಿ ಹಾಗಲ್ಲ. ಶುಷ್ಕ…

Read more
Region-wise variety Selection: The Key to Better Yield

Region-wise variety Selection: The Key to Better Yield

When we select a crop or variety for our farm, we usually look at its yield, fruit quality and market value. But one important factor is often overlooked — the region where that variety performs well. Agriculture is not the same everywhere. Climate, rainfall, soil type, temperature, humidity and many other factors change from one…

Read more
ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ

ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ?

ಮಳೆಗಾಲದಲ್ಲಿ ಕೊಳೆ ನಿವಾರಣೆಗೆ ಸಿಂಪಡಿಸುವ ಬೋರ್ಡೋ ದ್ರಾವಣವನ್ನು ಈಗ ಸಿಂಪಡಿಸುವುದರಿಂದ ಅನುಕೂಲ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಕೊಳೆ ರೋಗಕ್ಕೆ ಸಿಂಪಡಿಸುವ ಮೈಲುತುತ್ತೆ ಮತ್ತು ಸುಣ್ಣ ಇವುಗಳ ಸಮತೋಲಿತ ಮಿಶ್ರಣಕ್ಕೆ ಬೋರ್ಡೋ ದ್ರಾವಣ Bordeaux mixture ಎನ್ನುತ್ತಾರೆ. ಈ ದ್ರಾವಣವು ಶೇ. 1  ರ ಪ್ರಮಾಣದಲ್ಲಿ ಸಿಂಪಡಿಸಬೇಕು ಎಂಬುದು ಶಿಫಾರಸು. ಇದು ತಟಸ್ಥ ಮಿಶ್ರಣವಾಗಿರಬೇಕು. ಇದರಿಂದ ಫಲ ಹೆಚ್ಚು. ಇದನ್ನು ಮಳೆ ಬಂದ ನಂತರವೇ ಸಿಂಪಡಿಸಬೇಕಾಗಿಲ್ಲ. ಮಳೆ ಬರುವ ಮುಂಚೆಯೂ ಇದನ್ನು ಸಿಂಪರಣೆ ಮಾಡಬಹುದು. ಈಗಾಗಲೇ ಅಡಿಕೆ…

Read more

ಸ್ವಾವಲಂಬಿ ಬದುಕಿಗೆ ಮನೆಯಂಗಳದಲ್ಲಿ ತರಕಾರಿ.

ಅವರವರು ಬೆಳೆದ ತರಕಾರಿ ಹಣ್ಣು  ಹಂಪಲುಗಳನ್ನು ಅವರವರೇ ಬಳಸಿದರೆ  ಅದರಷ್ಟು ಆರೋಗ್ಯಕ್ಕೆ ಒಳ್ಳೆಯದು ಬೇರೊಂದಿಲ್ಲ. ನಾವು ಅಂಗಡಿಯಿಂದ ತರುವ ತರಕಾರಿ ಹಣ್ಣು  ಹಂಪಲುಗಳು ಎಷ್ಟೆಂದರೂ ಅಷ್ಟೇ. ಅದರ ಗಾತ್ರ ದೊಡ್ದದಾಗಲು ನೋಟ ಆಕರ್ಷಕವಾಗಿರಲು ಲೆಕ್ಕಕ್ಕಿಂತ ಹೆಚ್ಚು ಪೋಷಕಾಂಶಗಳನ್ನು ,ನಿಷೇಧಿತ ರಕ್ಷಕಗಳನ್ನು  ಬಳಕೆ  ಮಾಡಲಾಗುತ್ತದೆ ಎನ್ನುತ್ತಾರೆ. ಎಂದೋ ಕೊಯಿದ, ಎಲ್ಲಿಂದಲೋ ತಂದ ತರಕಾರಿ ಹಣ್ಣು ಹಂಪಲುಗಳಲ್ಲಿ ಶಿಲೀಂದ್ರ ಬೆಳೆದಿರುವುದೂ ಇದೆ. ವಿಷ ರಾಸಾಯನಿಕ ಬಳಸಿದ ಉಳಿಕೆ ಅಂಶ ಇರುವುದೂ ಇದೆ. ಇದನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಅವರವರೇ…

Read more
error: Content is protected !!