ಸರಕಾರೀ ವ್ಯವಸ್ಥೆಗಳಲ್ಲೂ ಇಷ್ಟು ವ್ಯಾಪಾರ ಬೇಕೇ?

ಮೊನ್ನೆ ಸುಬ್ರಮಣ್ಯ ಸಮೀಪದ ನೆಟ್ಟಣದ ಕೇಂದ್ರೀಯ ತೋಟದ ಬೆಳೆಗಳ ಸಂಶೊಧಾನ ಸಂಸ್ಥೆಯ  ಬೀಜ ಕೇಂದ್ರಕ್ಕೆ ತೆಂಗಿನ ಸಸಿ ತರಲು ಹೋಗಿದ್ದೆ. ಇಲ್ಲಿ ಆದ ಅನುಭವ ಯಾಕೋ ರೈತರ ಜೊತೆ ಹಂಚಿಕೊಳ್ಳಬೇಕೆನಿಸುತ್ತಿದೆ.  ಸರಕಾರೀ ವ್ಯವಸ್ಥೆಗಳಲ್ಲಿ ಇಷ್ಟೊಂದು ವ್ಯಾಪಾರ ಬೇಕಾ?. ಬೀಜ- ಸಸಿ ಎಂಬ ರೈತರ ಭವಿಷ್ಯದ ಇನ್ವೆಸ್ಟ್ಮೆಂಟ್ ನಲ್ಲಿ ಯಾರೂ ಮಕ್ಕಳಾಟಿಕೆ ಮಾಡಬಾರದು.  ಒಂದು ಕುಬ್ಜ ತಳಿಯ ಬೀಜದ ತೆಂಗಿನ ಕಾಯಿ. ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 120 ರೂ. ಒಂದು ಸಸಿಯ ಬೆಲೆ ಎಷ್ಟು ಗೊತ್ತೇ 210…

Read more
An interview with Mr. Jommy Mathew on monsoon and after monsoon management in pepper plantations

ಮಳೆಗಾಲದಲ್ಲಿ ಮತ್ತು ಮಳೆಗಾಲದ ನಂತರ ಕಾಳುಮೆಣಸಿನ ತೋಟದಲ್ಲಿ ಏನು ಮಾಡಬೇಕು?

ಕರ್ನಾಟಕದ ಅನುಭವಿ ಕಾಳುಮೆಣಸು ಬೆಳೆಗಾರರಾದ ಶ್ರೀ ಜೋಮ್ಮಿ ಮ್ಯಾಥ್ಯೂ ಅವರೊಂದಿಗೆ ಮಳೆಗಾಲ ಮತ್ತು ಮಳೆಗಾಲದ ನಂತರ ಕಾಳು ಮೆಣಸಿನ ತೋಟದ ಬೇಸಾಯ ಕ್ರಮದ ಕುರಿತಾದ  ಸಂದರ್ಶನ ಮಳೆಗಾಲದಲ್ಲಿ ಹಾಗೂ ಮಳೆಗಾಲದ ನಂತರದ ಅವಧಿಯಲ್ಲಿ ಕಾಳುಮೆಣಸಿನ ತೋಟದಲ್ಲಿ ಸೂಕ್ತ ನಿರ್ವಹಣೆ ಅತ್ಯಂತ ಮುಖ್ಯ. ನೀರಾವರಿ, ಪೋಷಕಾಂಶ ನಿರ್ವಹಣೆ, ಮಲ್ಚಿಂಗ್, ಕಳೆ ನಿಯಂತ್ರಣ ಮತ್ತು ಬೇರು ವಲಯದ ಸಂರಕ್ಷಣೆ — ಇವೆಲ್ಲವೂ ಆರೋಗ್ಯಕರ ಕಾಳುಮೆಣಸಿನ ಬಳ್ಳಿಗಳನ್ನು ಕಾಪಾಡಿಕೊಳ್ಳಲು ಹಾಗೂ ಉತ್ತಮ ಇಳುವರಿ ಪಡೆಯಲು ಪ್ರಮುಖ ಪಾತ್ರ ವಹಿಸುತ್ತವೆ. ಈ ಸಂದರ್ಶನದಲ್ಲಿ…

Read more
ಬಸವನ ಹುಳ

ಬಸವನ ಹುಳು ನಿಯಂತ್ರಣ

ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಈ ಬಸವನ ಹುಳ ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರು ಇದರಿಂದ ಬೇಸತ್ತಿದ್ದಾರೆ. ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗುವುದಿಲ್ಲ. ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತಿವೆ. ಹಗಲು ನಾಲ್ಕು– ಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ  ಏರಿ ಬಿಡುತ್ತವೆ. ಇವು ದೊಡ್ಡ ಗಾತ್ರದ  ಬಸವನ ಹುಳುಗಳು. ಇವು ಅಡಿಕೆ ಮರದ ಎಳೆ ಎಲೆಗಳನ್ನು ಮತ್ತು ಪಕ್ಕದಲ್ಲಿರುವ  ಇತರ ಗಿಡಗಳ ಎಳೆ ಎಲೆಗಳನ್ನು ತಿನ್ನುತ್ತವೆ. …

Read more
ಅಡಿಕೆ

ವರ್ಷಾಂತ್ಯದಲ್ಲೂ ಸ್ಥಿರತೆ ಉಳಿಸಿಕೊಂಡ ಅಡಿಕೆ ಧಾರಣೆ- ಮುಂದೆ ಇದೆ ಚಾನ್ಸ್.

ಸಾಮಾನ್ಯವಾಗಿ ಮಾರ್ಚ್ ವರ್ಷಾಂತ್ಯದಲ್ಲಿ ದರ ಇಳಿಕೆ ಸಾಮಾನ್ಯ. ಆದರೆ ಈ ವರ್ಷ ಹಾಗೆ ಆಗದೆ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಹಾಗಾಗಿ ಮುಂದಿನ ತಿಂಗಳಲ್ಲಿ ಚಾಲಿ- ಕೆಂಪಡಿಕೆ ಎರಡೂ ಏರಿಕೆ ಆಗಲಿದೆ. ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಸೂಚನೆ ದರ ಸ್ಥಿರತೆಯಲ್ಲಿ ಗಮನಿಸಬಹುದು.  ಚಾಲಿ ಎರಡು ತಿಂಗಳಿಂದ ಸ್ಥಿರವಾಗಿತ್ತು. ಈಗ  ಸಾಗರ, ಹೊಸನಗರ, ಇಲ್ಲೆಲ್ಲಾ ಸಿಪ್ಪೆ ಗೋಟಿಗೆ ಬೇಡಿಕೆ ಬರಲಾರಂಭಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಚಾಲಿ ದರ ಏರಿಕೆ ಪ್ರರಾಂಭವಾಗಿದೆ. ಸಿಪ್ಪೆ ಗೋಟು ದರ ಏರಿಕೆ ಚಾಲಿಗೆ ಬೇಡಿಕೆಯ ಸೂಚನೆಯಾಗಿದ್ದು, ಚಾಲಿ…

Read more
ತರಕಾರಿ ಮಾರುಕಟ್ಟೆ

ದಿನಾಂಕ 14/09/2021 ರ ವಿವಿಧ ಕೃಷಿ ಉತ್ಪನ್ನಗಳ ಧಾರಣೆ.

ವಸ್ತುಗಳು ;                                        ಧಾನ್ಯಗಳು;           Wheat / ಗೋಧಿ       ಕನಿಷ್ಟ ಬೆಲೆ  ಸರಾಸರಿ ಬೆಲೆ    ಗರಿಷ್ಟ ಬೆಲೆ                                                 Mexican / ಮೆಕ್ಸಿಕನ್ (*)                    1900              1951 Red / ಕೆಂಪು (*)                                 1215              2800 White / ಬಿಳಿ (*)                                 1039              2759 H.D. / ಹೈಬ್ರಿಡ್ (*)                             1850              1850 Local / ಸ್ಥಳೀಯ (*)                           1109              3000 Medium / ಸಾಧಾರಣ (*)                    2800              3100 Mill Wheat / ಗಿರಣಿ ಗೋಧಿ (*)           4500             …

Read more
ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?

ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?

ಅಡಿಕೆ ತೋಟ ಮಾಡುವವರು  ಹಿಂದೆ ಇಂತಹ ಸಸಿ ಒಳ್ಳೆಯಯದು, ಇದನ್ನು ಆಯ್ಕೆ ಮಾಡಬೇಕು ಎಂದೆಲ್ಲಾ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಗಮನಿಸಬೇಕಾದದ್ದು ಗಿಡದ ತಳಿ, ಬೆಳವಣಿಗೆ ಲಕ್ಷಣ ಮಾತ್ರವಲ್ಲದೆ ಗಿಡದ ಆರೋಗ್ಯವೂ ಸಹ. ಎಳೆ ಗಿಡಗಳ ಆರೋಗ್ಯ ಹೇಗಿದೆ ಎಂಬುದನ್ನು ಕೂಲಂಕುಶವಾಗಿ ನೋಡಿ ನಂತರ ಆಯ್ಕೆ ಮಾಡಿ ನೆಡಬೇಕು. ಬರೇ ಅಡಿಕೆ ಮಾತ್ರವಲ್ಲ ತೆಂಗಿನ ಸಸಿಯೂ ಹಾಗೆಯೇ.  ಅಡಿಕೆ ಸಸಿ ನೆಡುವವರು ಅದು ಅವರೇ ಮಾಡಿದ ಗಿಡ ಇರಬಹುದು ಅಥವಾ ನರ್ಸರಿಯಿಂದ ಖರೀದಿ ಮಾಡಿ ನೆಡುವುದೇ…

Read more
ನಾಟಿ ಹಸು,ಕರು

ಒಂದು ನಾಟಿ ಹಸು ಖರೀದಿಗೆ 25000 ಸಹಾಯಧನ !

ನಾಟಿ ಹಸುಗಳ ಸಂತತಿ ಕಡಿಮೆಯಾಗುತ್ತಿದೆ. ಸಾವಯವ ವಸ್ತುಗಳಿಲ್ಲದೆ ಕೃಷಿ ಕೃತಕವಾಗುತ್ತಿದೆ. ಹಾಗಾಗಿ ನಮ್ಮ ಕೃಷಿ ಪದ್ದತಿ ಇನ್ನು ಸ್ವಲ್ಪ ಹಿಂದಿನ ಕಾಲದತ್ತ ಹೋಗಬೇಕಾಗಬಹುದು. ನಮ್ಮ ಹಿರಿಯರು ಸೊಪ್ಪು ಸದೆ, ಸಗಣಿ ಗೊಬ್ಬರ  ಮುಂತಾದವುಗಳ  ಮೂಲಕ ಕೃಷಿ ಮಾಡುತ್ತಿದ್ದರೋ ಅದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಅದಕ್ಕೆ ನಮ್ಮಲ್ಲಿ ಈಗ ಕೊರತೆ ಎಂದರೆ ಹಸುಗಳು. ಸಿಹಿ ಇದ್ದಲ್ಲಿ ಇರುವೆ ಬರುತ್ತದೆ ಎಂಬಂತೆ ಹಸು ಸಾಕಬೇಕಿದ್ದರೆ ಅದರಲ್ಲಿ ಸಾಕುವವರಿಗೆ ಲಾಭ ಬೇಕು. ಈ ಅಂಶವನ್ನು ಮನಗಂಡು ಹರ್ಯಾಣ ಸರಕಾರ ದೇಶದಲ್ಲೇ ಮೊದಲಬಾರಿಗೆ ಕೃಷಿಕರು…

Read more
ಸಧ್ಯವೇ ಅಡಿಕೆ ಮಾರುಕಟ್ಟೆ ಕುಸಿತ ಸಾಧ್ಯತೆ.

ಸಧ್ಯವೇ ಅಡಿಕೆ ಮಾರುಕಟ್ಟೆ ಕುಸಿತ  ಸಾಧ್ಯತೆ.

ಅಡಿಕೆ ಮಾರುಕಟ್ಟೆಯಲ್ಲಿ ದರ ಕುಸಿತದ ಸುದ್ದಿ ಹಬ್ಬುತ್ತಿದೆ. ಕೆಂಪಡಿಕೆ  ಕೊಯಿಲು ಪ್ರಾರಂಭವಾಗಿದೆ. ಚಾಲಿ ಅಡಿಕೆ ಮಾಡುವ ಪ್ರದೇಶಗಳಲ್ಲೂ  ಒಂದು ಕೊಯಿಲಿನ ಅಡಿಕೆ  ಹಣ್ಣಾಗಿ ಅಗಿದೆ. ಹೊಸತು ಹಳತಾಗಿದೆ. ಹೊಚ್ಚ ಹೊಸತು ಬರಲಾರಂಭಿಸಿದೆ. ಈ ಮಧ್ಯೆ ಅಡಿಕೆ ಧಾರಣೆ ಏರಿಕೆ ಆಗುವ ಸುಳಿವು ಇಲ್ಲ. ಹೊಸತು ಮಾರುಕಟ್ಟೆಗೆ ಬರುವ ಈ ಸಮಯಕ್ಕೆ  ಹಳೆ ಅಡಿಕೆಗೆ ದರ ಸ್ವಲ್ಪವಾದರೂ ಹೆಚ್ಚಾಗಬೇಕಿತ್ತು. ಆದರೆ  ಹಳೇ (ಡಬ್ಬಲ್) ಅಡಿಕೆಗೆ ಬೇಡಿಕೆಯೇ ಇಲ್ಲದ ಸ್ಥಿತಿ ಉಂಟಾಗಿದೆ. ಎಲ್ಲೋ ಒಂದೆಡೆ ಅಡಿಕೆ ಧಾರಣೆ ಕುಸಿಯುವ ಸುಳಿವು…

Read more
sprinkler installation

ಸ್ಪ್ರಿಂಕ್ಲರ್ ನೀರಾವರಿ ಮಾಡುವವರು ತಿಳಿಯಬೇಕಾದ ಮಾಹಿತಿ.

ಬಹುತೇಕ ಕರಾವಳಿ ಮಲೆನಾಡಿನ ಅಡಿಕೆ ತೋಟದ ಬೆಳೆಗಾರರ ಮೊದಲ ಆಯ್ಕೆ ಸ್ಪ್ರಿಂಕ್ಲರ್. ಈ  ವ್ಯವಸ್ಥೆ ಹೇಗಿದ್ದರೆ ಉತ್ತಮ ಇಲ್ಲಿದೆ ಮಾಹಿತಿ. ಸ್ಪ್ರಿಂಕ್ಲರ್ ನೀರಾವರಿ ಎಂದರೆ ಹೇಳಿದಷ್ಟು ಸರಳ ಅಲ್ಲ. ಈ ನೀರಾವರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿದರೆ ಮಾತ್ರ ಅದರಲ್ಲಿ ಫಲ.ಹೆಸರೇ ಹೇಳುವಂತೆ ನೀರು ಮಳೆಯಂತೆ ಎಲ್ಲಾ ಕಡೆಗೂ ಸಿಂಚನವಾಗಬೇಕು. ಎಲ್ಲಾ ಭಾಗವೂ ಒದ್ದೆಯಾಗಬೇಕು. ಹೀಗೆ ಆಗಬೇಕಿದ್ದರೆ ಅದಕ್ಕೂ ಒಂದು ಡಿಸೈನ್ ಎಂಬುದು ಇದೆ. ಆ ಡಿಸೈನ್ ಪ್ರಕಾರ ಮಾಡಿದ್ದೇ ಆದರೆ ಸ್ರಿಂಕ್ಲರ್ ನೀರಾವರಿ ಉತ್ತಮ ಫಲ ಕೊಡುತ್ತದೆ.  ಹರಿ…

Read more
ಕಾಡು ಹಣ್ಣು ತಿನ್ನುತ್ತಿರುವ ಗುಬ್ಬಿ

ಗುಬ್ಬಿಗಳ ನಾಶಕ್ಕೆ ಟವರ್ ಮಾತ್ರ ಕಾರಣವಲ್ಲ.

ಗುಬ್ಬಿಗಳ ಸಂಖ್ಯೆ ಕಡಿಮೆಯಾಗಲು ಒಂದು ಕಾರಣ ಮೊಬೈಲ್ ಟವರ್ ಎನ್ನಲಾಗುತ್ತದೆ. ಆದರೆ ಮೊಬೈಲ್ ಟವರ್ ಬರುವ ಮುಂಚೆಯೇ ಇವು ಕಡಿಮೆಯಾಗಲಾರಂಭಿಸಿವೆ ಗೊತ್ತೇ? ಗುಬ್ಬಿಗಳ ನಾಶಕ್ಕೆ ಮೊಬೈಲ್ ಟವರ್ ಒಂದೇ ಕಾರಣ ಅಲ್ಲ. ನಮ್ಮ ಕೃಷಿ ಚಟುವಟಿಕೆ ಮತ್ತು ಹವಾಮಾನಗಳೂ ಒಂದು ಕಾರಣ. ಗುಬ್ಬಿಗಳು ಹಿಂದೆ ನಾವು ಸಣ್ಣವರಿದ್ದಾಗ ಮನೆಯ ಮಾಡಿನ ಸಂದುಗಳಲ್ಲಿ , ಚಾವಡಿಯ  ಆಡ್ದದ ಎಡೆಯಲ್ಲಿ ಗೂಡು ಕಟ್ಟಿ ಕುಳಿತುಕೊಳ್ಳುತ್ತಿತ್ತು. ಅದು ತನ್ನಷ್ಟಕ್ಕೇ ಅಲ್ಲಿಗೆ ಬಂದು ವಾಸ್ತವ್ಯ ಮಾಡುವುದು ವಾಡಿಕೆ. ಗುಬ್ಬಿಗಳು ಮನೆಯ ಮಕ್ಕಳಂತೆ ಆಗಿದ್ದವು.  ಅದು…

Read more
error: Content is protected !!