Crop Management (ಬೆಳೆ ನಿರ್ವಹಣೆ)
ಅಂತರ್ಜಲ ಬಳಕೆಗೂ ಬೇಕು – ಲಾಕ್ ಡೌನ್ .
ಒಂದುವರೆ ತಿಂಗಳ ಕಾಲ ಅಂತರ್ಜಲದೊಂದಿಗಿನ ಅತ್ಯಾಚಾರಕ್ಕೆ ಸ್ವಲ್ಪ ಬಿಡುವಾಗಿತ್ತು. ಆದರೂ ರಾತ್ರೆ ಹೊತ್ತು ಹಳ್ಳಿಯ ಮೂಲೆಗಳಲ್ಲಿ ವ್ಯವಹಾರ ನಡೆಯುತ್ತಿತ್ತು. ಈಗ ಮತ್ತೆ ಅತ್ಯಾಚಾರ ಪ್ರಾರಂಭವಾಗಿದೆ. ಹಳ್ಳಿಯ ಪೆಟ್ರೋಲ್ ಪಂಪುಗಳ ಮುಂದೆ ಮೂರು ನಾಲ್ಕು ಬೋರ್ ಲಾರಿಗಳು ಮೊಕ್ಕಾಂ ಹೂಡಿವೆ. ಒಂದು ತಿಂಗಳು ಅಂತರ್ಜಲಕ್ಕೆ ಬಿಡುಗಡೆ ಸಿಕ್ಕಿದೆ. ಹಾಗೆಯೇ ವರ್ಷದಲ್ಲಿ 2-3 ತಿಂಗಳು ಬಿಡುವು ಕೊಟ್ಟರೆ ಅದೆಷ್ಟೋ ಅಂತರ್ಜಲ ಶೋಷಣೆ ಕಡಿಮೆಯಾಗಬಹುದು. ಅಂತರ್ಜಲದ ಕ್ಷೀಣಿಸುತ್ತಿದೆ: ನಮ್ಮಲ್ಲಿ ಒಂದಷ್ಟು ಜನ ಬೆಳೆಗಳ ಅವಶ್ಯಕತೆಗೆ ಬೇಕಾದಷ್ಟೇ ಬಳಸಲು ಅಂತರ್ಜಲವನ್ನು ಆವಲಂಭಿಸಿಲ್ಲ. ಅದನ್ನು…
ತೆಂಗಿನ ತೋಟದಲ್ಲಿ ಗರಿಷ್ಟ ಆದಾಯ ಕೊಡಬಲ್ಲ ಮಿಶ್ರ ಬೆಳೆ.
ಮಿಶ್ರ ಬೆಳೆ ಬೆಳೆಸಲು ಅತೀ ಸೂಕ್ತ ವಾದ ತೋಟ ಎಂದರೆ ತೆಂಗಿನ ತೋಟ. ಇದರ ಮಧ್ಯಂತರದಲ್ಲಿರುವ ಸ್ಥಳಾವಕಾಶ ಬೇರೆ ಯಾವ ಬೆಳೆಯಲ್ಲೂ ಸಿಗದು. ಆದ ಕಾರಣ ತೆಂಗನ್ನು ಏಕ ಬೆಳೆಯಾಗಿ ಉಳಿಸಿಕೊಳ್ಳದೆ ಸಾಧ್ಯವಾದಷ್ಟು ಮಿಶ್ರ ಬೆಳೆಗಳನ್ನು ಬೆಳೆಸಿರಿ. ಒಂದು ತೆಂಗಿನ ತೋಟದಲ್ಲಿ ಮರವೊಂದರಲ್ಲಿ 100 ಕಾಯಿ ಸಿಕ್ಕರೂ ಸಹ ಒಂದು ಎಕ್ರೆಯಲ್ಲಿ ಸುಮಾರು 8000 ಕಾಯಿಗಳು. ಇದರ ಮಾರಾಟದಿಂದ ಸಿಗಬಹುದಾದ ಸರಾಸರಿ ಉತ್ಪತ್ತಿ, ಸುಮಾರು 80,000 ರೂ. ಗಳು. ಒಂದು ಎಕ್ರೆಗೆ ಇಷ್ಟು ಉತ್ಪತ್ತಿ ಸಾಕೇ? ಖಂಡಿತವಾಗಿಯೂ …
ಅಡಿಕೆ – ಅಧಿಕ ಇಳುವರಿಗೆ ಹೀಗೆ ಗೊಬ್ಬರ ಕೊಡಿ.
ಬಹಳ ಜನ ಅಡಿಕೆ ಬೆಳೆಯಲ್ಲಿ ಭವಿಷ್ಯ ಕಾಣುವವರಿದ್ದಾರೆ. ಅಧಿಕ ಇಳುವರಿ ಬೇಕು, ಯಾವ ಗೊಬ್ಬರ ಕೊಡಬೇಕು ಎಂಬ ಮಾಹಿತಿಗೆ ಕಾಯುತ್ತಿದ್ದಾರೆ. ಇಂಥ ಮಾಹಿತಿ ಇಲ್ಲಿದೆ. ಒಂದು ಅಡಿಕೆ ಮರದ ಗರಿಷ್ಟ ಉತ್ಪಾದಕತೆ ಸುಮಾರು ಮೂರು ಗೊನೆ. ಒಂದು ಗೊನೆಯಲ್ಲಿ ಸರಾಸರಿ 1 ಕಿಲೋ ಅಡಿಕೆ. ನಾಲ್ಕು ಕಿಲೋ ಅಡಿಕೆ ಬರುವುದು ಅಪರೂಪ. ಸುಮಾರು 2 -3 ಕಿಲೋ ಅಡಿಕೆ ಉತ್ಪಾದನೆ ಪಡೆಯಲು ವ್ಯವಸ್ಥಿತವಾದ ಬೇಸಾಯ ಕ್ರಮ ಮತ್ತು ಪೋಷಕಾಂಶ ನಿರ್ವಹಣೆ ಅಗತ್ಯ. ಯಾವ ನಿರ್ವಹಣೆ: ಅಡಿಕೆ ಮರಗಳ…
ತೆಂಗಿನ ಸಸಿ ಬೆಳವಣಿಗೆಗೆ ಇದು ದೊಡ್ದ ತಡೆ.
ಮುಸ್ಸಂಜೆ ಮತ್ತು ಕತ್ತಲೆಗೆ ದೀಪದ ಬೆಳಕಿಗೆ ಬಂದು ಬಿಳುವ ದುಂಬಿಗಳಲ್ಲಿ ಕುರುವಾಯಿ ಕೀಟ ಒಂದು.ಈ ದುಂಬಿ ತೆಂಗಿನ ಬೆಳೆಗಾರರ ಅತೀ ದೊಡ್ದ ಶತ್ರು. ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು. ಯಾಕೆಂದರೆ ಕುರುವಾಯಿ ಅಷ್ಟು ಹಾನಿ ಮಾಡುತ್ತದೆ.. ಆದ ಕಾರಣ ವೃಕ್ಷಕ್ಕೆ ತೊಂದರೆ ಕೊಡುವ ಕೀಟ ಎಂಬ ಭಾವನೆಯಿಂದಲಾದರೂ ಅದು ನಶಿಸಲಿ ಎಂದು ಹಾಗೆ ಹೇಳಿರಬೇಕು. ಬಾಧೆಯ ಲಕ್ಷಣ: ತೆಂಗಿನ ಸಸಿಯ/ಮರದ ಮೂಡುತ್ತಿರುವ ಇನ್ನೂ ಅರಳಿರದ ಸುಳಿಯ…
ಪೊಟ್ಯಾಶಿಯಂ ಫೋಸ್ಫೋನೇಟ್- ಶಿಲೀಂದ್ರ ರೋಗಕ್ಕೆ ರಾಮಬಾಣ.
ಪೊಟ್ಯಾಶಿಯಂ ಫೋಸ್ಫೋನೇಟ್ ಅಥವಾ ಪೊಟಾಶಿಯಂ ಸಾಲ್ಟ್ ಆಫ್ ಫೋಸ್ಫೊರಸ್ ಅಸಿಡ್, ಅಥವಾ ಫೊಟ್ಯಾಶಿಯಂ ಸಾಲ್ಟ್ ಆಫ್ ಫೊಸ್ಫೋನಿಕ್ ಅಸಿಡ್ ಇದು ನೀರಿನಲ್ಲಿ ಕರಗುವ ಒಂದು ಅಂತರ್ ವ್ಯಾಪೀ ಶಿಲೀಂದ್ರ ನಾಶಕ. ಇದು ನೋಡಲು ಬಿಳಿ ಹರಳು ರೂಪದಲ್ಲಿರುತ್ತದೆ. ಇದರ ಪಿಎಚ್ ಮೌಲ್ಯ 5.29 ರಷ್ಟು ಇರುತ್ತದೆ. ಇದು ವಿಶ್ವದಾದ್ಯಂತ ಬಳಕೆಯಲ್ಲಿರುವ ಒಂದು ಪರಿಣಾಮಕಾರೀ ಅಂತರ್ ವ್ಯಾಪೀ ಶಿಲೀಂದ್ರ ನಾಶಕ. ಅಡಿಕೆ, ದ್ರಾಕ್ಷಿ, ಕಾಳುಮೆಣಸು ಬೆಳೆಗಳ ಶಿಲೀಂದ್ರ ರೋಗಕ್ಕೆ ಇದು ಪರಿಣಾಮಕಾರೀ ಎಂದು ನಮ್ಮಲ್ಲೂ ಸಾಬೀತಾಗಿದೆ. ಇದರ…
ಬಾಳೆ ಜೊತೆ ಮಿಶ್ರ ಬೆಳೆ – ಎಕ್ರೆಗೆ 5 ಲಕ್ಷದಷ್ಟು ಆದಾಯ.
ಬಾಳೆ 9-11 ತಿಂಗಳ ಬೆಳೆ. ಈ ಅವಧಿಯಲ್ಲಿ ಕೆಲವು ಲೆಕ್ಕಾಚಾರ ಹಾಕಿಕೊಂಡು ಮಿಶ್ರ ಬೆಳೆಯನ್ನು ಬೆಳೆಸಲಿಕ್ಕಾಗುತ್ತದೆ. ಕೆಲವು ಬೆಳೆಗಳ ಜೊತೆಗೆ ಬಾಳೆ ಮಿಶ್ರ ಬೆಳೆಯೂ ಆಗುತ್ತದೆ. ಇದನ್ನು ಹಲವು ರೈತರು ಮಾಡುತ್ತಾರೆ.ಬಾಳೆ ನಾಟಿ ಮಾಡಿ 3-4 ತಿಂಗಳ ತನಕ ಮಧ್ಯಂತರದಲ್ಲಿ ಸಾಕಷ್ಟು ಬೆಳೆಕು ಇರುತ್ತದೆ. ಈ ಸಮಯದಲ್ಲಿ ಅಲ್ಪಾವಧಿ ಬೆಳೆಗಳನ್ನು ಎಡೆಯಲ್ಲಿ ಬೆಳೆಸಬಹುದು. ಕೆಲವು ಬೆಳೆಗಳನ್ನು ಮುಂಚೆಯೇ ಬೆಳೆಸಿ ಅದು ಕಠಾವಿಗೆ 3-4 ತಿಂಗಳು ಇರುವಾಗ ಬಾಳೆ ಹಾಕಿದರೆ ಅದನ್ನು ಕಠಾವು ಅಥವಾ ಒಕ್ಕಣೆ ಮಾಡುವಾಗ ಅದರ…
ಅಡಿಕೆ ಯಾಕೆ ಸುರಿ ಬೀಳುತ್ತದೆ? – ಪರಿಹಾರ.
ದಾಸ್ತಾನು ಇಟ್ಟ ಧವಸ ಧಾನ್ಯ ಏನೇ ಇದ್ದರೂ ಸಮರ್ಪಕವಾಗಿ ಇಲ್ಲದಿದರೆ ಅದಕ್ಕೆ ದಾಸ್ತಾನು ಕೀಟ (Storage pest) ಬಂದು ಸುರಿ ಬೀಳುವುದು ಸಾಮಾನ್ಯ. ಈ ಕೀಟಗಳಲ್ಲಿ ಹಲವು ವಿಧಗಳು ಇದ್ದು, ಅಕ್ಕಿಗೆ ಬರುವ ಗುಗ್ಗುರು,ಅಡಿಕೆಗೆ ಬರುವ ಡಂಕಿ ಬೇರೆ ಹೀಗೆ ಬೇರೆ ಬೇರೆ ಇದೆ. ಸಾಮಾನ್ಯವಾಗಿ ಸುಲಿದು ದಾಸ್ತಾನು ಇಡುವ ಅಡಿಕೆಗೆ ಈ ಸಮಸ್ಯೆ ಹೆಚ್ಚು. ಹಾಗೆಂದು ಸುಲಿಯದೇ ಇಡುವಲ್ಲಿಯೂ ಇಲ್ಲದಿಲ್ಲ. ಇದು ಮಹಾ ಮಾರಿ ಶತೃ ಎಂತಲೇ ಹೇಳಬಹುದು. ಒಮ್ಮೆ ಈ ಕೀಟ ಬಂದರೆ ಅದನ್ನು ಓಡಿಸುವುದೂ…
ಹೀಗೆ ಮಾಡಿದರೆ ನೀರು ತುಂಬಾ ಕಡಿಮೆ ಸಾಕು.
ಕೆಲವು ಮಣ್ಣಿನಲ್ಲಿ ಮಳೆ ಬಂದರೆ ನೀರು ವಾರಗಟ್ಟಲೆ ಆರುವುದೇ ಇಲ್ಲ. ಬಿಸಿಲು ಬಂದರೆ ನೆಲ ಟಾರು ರಸ್ತೆ ತರಹ. ಇಂತಲ್ಲಿ ಇಬ್ಬನಿ ರೂಪದಲ್ಲಿ ಬಿದ್ದ ನೀರೂ ಸಹ ಪೋಲಾಗದೆ ಬೆಳೆಗೆ ದೊರೆಯುವಂತಾಗಲು ರೈತರು ಕಂಡುಕೊಂಡ ವಿಧಾನ ಉಸುಕು ಹಾಕುವಿಕೆ. ಕಪ್ಪು ಹತ್ತಿ ಮಣ್ಣು ಒಂದು ಮಳೆ ಬಂದರೆ ಅಂಟು ಅಂಟಾಗುತ್ತದೆ. ಇದಕ್ಕೆ ಮಳೆ ಹನಿ ಬಿದ್ದಾಗ ಮಣ್ಣು ಕರಗಿ ಹೋಗುತ್ತದೆ. ನೀರು ಕಡಿಮೆಯಾದಾಗ ಮಣ್ಣು ಒಡೆದು ಹೂಗುತ್ತದೆ. ರಾಜ್ಯದಲ್ಲಿ ಬಿಜಾಪುರ, ಗದಗ, ನರಗುಂದ ಧಾರವಾಡದ ಕೆಲ…
ಬಾಳೆಯ ಕಾಂಡದ ಈ ರೋಗಕ್ಕೆ ಪರಿಹಾರ ಇದು.
ಬಾಳೆಯಲ್ಲಿ ಕಾಂಡ ಎಂಬುದು ಎಲೆಯ ಕವಚಗಳು ಪರಸ್ಪರ ಒತ್ತೊತ್ತಾಗಿ ಸೇರಿದಾಗ ಉಂಟಾಗುತ್ತದೆ. ಬಾಳೆಗೆ ಕಾಂಡ ಎಂಬುದು ಇಲ್ಲ. ಇದನ್ನು ಹುಸಿ ಕಾಂಡ ಎನ್ನುತ್ತಾರೆ. ಹುಸಿ ಕಾಂಡ ಉಂಟಾಗಬೇಕಾದರೆ ಎಲೆಯ ತೊಟ್ಟಿನ ಭಾಗ (petiole)ಗಳು ಪರಸ್ಪರ ಅಂಟಿಕೊಂಡು ಬೆಳೆಯಬೇಕು. ಅದು ಬಿಚ್ಚಿಕೊಂಡಿದ್ದರೆ ಅದು ಒಂದು ರೋಗ. ಇದು ಒಂದು ನಂಜಾಣು ರೋಗದ ಲಕ್ಷಣ. ಬಾಳೆ ಸಸ್ಯ 2-3 ತಿಂಗಳ ಬೆಳೆವಣಿಗೆಯಲ್ಲಿ ಇದು ಜಾಸ್ತಿ. ಪ್ರಾರಂಭದಲ್ಲಿ ಎಲೆದಂಟು ಕಾಂಡದಿಂದ ಬೇರ್ಪಟ್ಟು ಕಾಂಡ ಸಪುರವಾಗುತ್ತಾ ಹೋಗುತ್ತದೆ. ಇಂತಹ ಬಾಳೆ ಕೆಲವೊಮ್ಮೆ…
