ಗುಣಮಟ್ಟದ ಅಡಿಕೆ ಉತ್ಪಾದನೆ ತಾಂತ್ರಿಕತೆ.
ಅಡಿಕೆ ಬೆಳೆಗಾರರು ಕೆಂಪಡಿಕೆ ಮಾಡುವವರು ಆಗಲಿ, ಚಾಲಿ ಮಾಡುವವರೇ ಆಗಲಿ, ಗುಣಮಟ್ಟದ ಅಡಿಕೆ ಉತ್ಪಾದನೆ ಕಡೆಗೆ ಅದ್ಯ ಗಮನಹರಿಸಲೇ ಬೇಕು. ಇದು ನಮ ಸುರಕ್ಷತೆಗಾಗಿ ನಾವು ಮಾಡಬೇಕಾದ ಅಗತ್ಯ ಕೆಲಸ. ಗುಣಮಟ್ಟ ಉಳ್ಳ ಅಡಿಕೆಗೆ ಗರಿಷ್ಟ ಬೆಲೆ. ಅಡಿಕೆಯ ಮಾನ ಉಳಿಯುವುದೂ ಗುಣಮಟ್ಟ ಪಾಲನೆಯಲ್ಲಿ. ಹೀಗಿರುವಾಗ ಅಡಿಕೆ ಬೆಳೆಗಾರರು ತಮ್ಮ ಭವಿಷ್ಯದ ಹಿತ ದೃಷ್ಟಿಯಿಂದ ಗುಣಮಟ್ಟಕ್ಕೆ ಆದ್ಯ ಗಮನ ಕೊಡಲೇ ಬೇಕು. ಅಡಿಕೆಯ ಕುರಿತಾಗಿ ಯಾವಾಗಲೂ ನ್ಯಾಯಾಲಯ ಬೆಳೆಗಾರರ ಮೇಲೆ ತಿರುಗಿ ಬೀಳಬಹುದು. ಯಾರಾದರೂ ಅಡಿಕೆಯಲ್ಲಿ ಆರೋಗ್ಯಕ್ಕೆ…
