ಒಂದು ನಾಟಿ ಹಸು ಖರೀದಿಗೆ 25000 ಸಹಾಯಧನ !
ನಾಟಿ ಹಸುಗಳ ಸಂತತಿ ಕಡಿಮೆಯಾಗುತ್ತಿದೆ. ಸಾವಯವ ವಸ್ತುಗಳಿಲ್ಲದೆ ಕೃಷಿ ಕೃತಕವಾಗುತ್ತಿದೆ. ಹಾಗಾಗಿ ನಮ್ಮ ಕೃಷಿ ಪದ್ದತಿ ಇನ್ನು ಸ್ವಲ್ಪ ಹಿಂದಿನ ಕಾಲದತ್ತ ಹೋಗಬೇಕಾಗಬಹುದು. ನಮ್ಮ ಹಿರಿಯರು ಸೊಪ್ಪು ಸದೆ, ಸಗಣಿ ಗೊಬ್ಬರ ಮುಂತಾದವುಗಳ ಮೂಲಕ ಕೃಷಿ ಮಾಡುತ್ತಿದ್ದರೋ ಅದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಅದಕ್ಕೆ ನಮ್ಮಲ್ಲಿ ಈಗ ಕೊರತೆ ಎಂದರೆ ಹಸುಗಳು. ಸಿಹಿ ಇದ್ದಲ್ಲಿ ಇರುವೆ ಬರುತ್ತದೆ ಎಂಬಂತೆ ಹಸು ಸಾಕಬೇಕಿದ್ದರೆ ಅದರಲ್ಲಿ ಸಾಕುವವರಿಗೆ ಲಾಭ ಬೇಕು. ಈ ಅಂಶವನ್ನು ಮನಗಂಡು ಹರ್ಯಾಣ ಸರಕಾರ ದೇಶದಲ್ಲೇ ಮೊದಲಬಾರಿಗೆ ಕೃಷಿಕರು…
