ಎರಡು ನೀರಿನ ಅಡಿಕೆ ಸಸಿ ನಾಟಿ – ಎಷ್ಟು ಸರಿ? ಬೇಗ ಬೆಳೆಯುವ ಆಸೆಯಲ್ಲಿ ತಪ್ಪು ಮಾಡಬೇಡಿ!
ಅಡಿಕೆ ತೋಟ ನಿರ್ಮಿಸುವಾಗ ರೈತರು ಎದುರಿಸುವ ಪ್ರಮುಖ ಪ್ರಶ್ನೆಗಳಲ್ಲಿ ಒಂದು, ಎಷ್ಟು ವಯಸ್ಸಿನ ಸಸಿಗಳನ್ನು ನಾಟಿ ಮಾಡಬೇಕು ಎಂಬುದು. ಕೆಲವರು ಮೊಳಕೆ ಒಡೆದ ಆರು–ಎಂಟು ತಿಂಗಳ ಗಿಡಗಳನ್ನು ನಾಟಿ ಮಾಡಲು ಬಯಸಿದರೆ, ಇನ್ನು ಕೆಲವರು ಎರಡು ನೀರಿನ, ಅಂದರೆ ಸುಮಾರು ಎರಡು ವರ್ಷದ ಗಿಡಗಳನ್ನು ನಾಟಿ ಮಾಡಲು ಆಸಕ್ತಿ ತೋರಿಸುತ್ತಾರೆ. ಎರಡು ವರ್ಷದ ಗಿಡಗಳನ್ನು ನೆಟ್ಟರೆ ಅವು ಬೇಗ ಬೆಳೆಯುತ್ತವೆ, ತೋಟವೂ ಬೇಗ ಅಭಿವೃದ್ಧಿಯಾಗುತ್ತದೆ ಎಂಬುದು ಅವರ ನಿರೀಕ್ಷೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಈ ನಿರ್ಧಾರ ಸರಿಯಾಗಿರಬಹುದು….
