ಹೀಗೆ ಬೆಳೆ ಬೆಳೆದರೆ ಕೀಟ- ರೋಗ ಇಲ್ಲ.

ಬೆಳೆಗಳ  ಮೇಲೆ  ಬಿಳಿ ಬಟ್ಟೆಯ ತರಹದ ಪಾಲಿಮರ್ ಹೊದಿಕೆಯನ್ನು ಹೊದಿಸಿ ಬೆಳೆ  ಬೆಳೆಸುವುದು ಆಧುನಿಕ ಸಾವಯವ ಬೇಸಾಯ ತಾಂತ್ರಿಕತೆ. ಇಲ್ಲಿ ಹೊರಗಡೆಯಿಂದ ಬರುವ ಕೀಟ – ರೋಗಗಳು ಒಳಗೆ ಸುಳಿಯಲಾರವು. ಇದರೊಳಗಿನ ವಾತಾವರಣ ಸಸ್ಯಗಳಿಗೆ ಅನುಕೂಲವಾಗಿದ್ದು, ಗುಣಮಟ್ಟದ ಇಳುವರಿ ಬರುತ್ತದೆ.


Click to WhatsApp and build your website now!

ಕ್ರಾಪ್ ಕವರ್ ಏನು?

  • ಬೆಳೆ ಬೆಳೆಯುವಾಗ ಸಸ್ಯದ ಮೇಲೆ  ಹೊದಿಸುವ ಒಂದು ಬಟ್ಟೆ ತರಹದ ವಸ್ತು. ನೋಡಲು ಬಟ್ಟೆ ತರಹವೇ ಇರುವ  ಇದನ್ನು spun polyester. ನಿಂದ  ತಯಾರಿಸುತ್ತಾರೆ.
  • ನಾವು ಪ್ಲಾಸ್ಟಿಕ್ ಕೈಚೀಲದ ಬದಲಿಗೆ ಉಪಯೋಗಿಸುವ ಹೊಸ  ರೀತಿಯ ಚೀಲಕ್ಕೆ  ಉಪಯೋಗಿಸುವ ಸಾಮಾಗ್ರಿಯಿಂದ ಇದನ್ನು ತಯಾರಿಸುತ್ತಾರೆ.
  • ಇದು ವಾತಾವರಣದಲ್ಲಿ ಬಿಸಿಲಿಗೆ ನಿಧಾನವಾಗಿ ಹುಡಿಯಾಗಿ  ಕರಗುವಂತದ್ದು.
  • ಇದನ್ನು ಬೆಳೆ ಬೆಳೆಯುವಾಗ ಸಸ್ಯದ ಮೇಲೆ, ಫಲದ ಮೇಲೆ ಹೊದಿಸಿದರೆ ಕೀಟ ನಿಯಂತ್ರಣ ಕಷ್ಟವಿಲ್ಲ.
  • ಸನ್ ಸ್ಕೋರ್ಚ್, ಇಬ್ಬನಿಯ ಹಾನಿ  ಹಾಗೆಯೇ ಇನ್ನಿತರ  ಗಾಳಿ ಮೂಲಕ ಹರಡುವ ರೋಗಗಳಿಂದ ಯಾವುದೇ ಕೀಟ ನಾಶಕ , ರೋಗ ನಾಶಕಗಳಿಲ್ಲದೆ ರಕ್ಷಣೆ ಪಡೆಯಬಹುದು.

ಇದು ಅನಿವಾರ್ಯ:

  • ರೈತರಿಗೆ ರಾಸಾಯನಿಕ ಕೀಟನಾಶಕ , ರೋಗ ನಾಶಕ ಬಳಸಬೇಡಿ ಎಂದು ಸರಕಾರವೂ ಸೇರಿದಂತೆ ಬುದ್ಧಿ ಜೀವಿಗಳೆಲ್ಲಾ ಉಪದೇಶ ಮಾಡುತ್ತಾರೆ.
  • ಆದರೆ ಅದನ್ನು ಬಳಸದೆ ಹೇಗೆ ಬೆಳೆ ಸಂರಕ್ಷಣೆ  ಮಾಡುವುದು ಎಂದು ಹೇಳಲು ಎಲ್ಲರೂ ವಿಫಲರಾಗುತ್ತಾರೆ.
  • ರೈತರು ಉಪದೇಶ ಮಾಡುವವರ ಸ್ವರಕ್ಕೆ ಸುಳ್ಳು ತಾಳ ಹಾಕುತ್ತಾರೆ.

ವಾಸ್ತಾವವಾಗಿ ಬೆಳೆ ಬೆಳೆಸಿ ಅದರಲ್ಲೇ ಅವನು ಬದುಕು ಕಾಣಬೇಕಾದರೆ ಕೀಟ ನಾಶಕ, ರೋಗನಾಶಕ, ರಸಗೊಬ್ಬರ ಬಳಸಲೇ ಬೇಕಾಗುತ್ತದೆ.  ಹೇಳುವುದಕ್ಕೂ ಮಾಡುವುದಕ್ಕೂ  ಯಾವಾಗಲೂ ಭಿನ್ನತೆ ಇದ್ದೇ ಇರುತ್ತದೆ.

  • ರೈತರು ಬೆಳೆ ಬೆಳೆಸುವಾಗ ಎದುರಿಸುವ ಕೀಟ ಸಮಸ್ಯೆ ಹಲವಾರು.
  • ಸಣ್ಣ ಸಣ್ಣ ನೊಣಗಳಿಂದ ಹಿಡಿದು ಪತಂಗ , ಹಕ್ಕಿಗಳ ವರೆಗೂ ರೈತನು ಬೆಳೆದ ಬೆಳೆಯಲ್ಲಿ ಪಾಲು ಕೇಳುವವುಗಳು.
  • ಇವುಗಳ ನಷ್ಟವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಬೆಳೆ ಹೊದಿಕೆಗಳು ನೆರವಾಗುತ್ತವೆ.

ಬೆಳೆಗಳಿಗೆ ಹೊದಿಕೆ ಬಳಕೆ ಮಾಡಿದಾಗ ಅದರ ಒಳಗೆ ಯಾವುದೇ ಸಣ್ಣ – ದೊಡ್ದ ಕೀಟ ಒಳಗೆ  ಹೋಗುವುದಿಲ್ಲ.   ಇದು ಬಿಳಿ ಬಣ್ಣದಲ್ಲಿದ್ದು  ಬೆಳೆಗಳಿಗೆ  ಸೂರ್ಯ ಕಿರಣದ ಘಾಸಿಯನ್ನು ತಡೆಯುತ್ತವೆ.

  • ಕೆಲವು ಗಾಳಿಯ ಮೂಲಕ ಹರಡುವ ರೋಗಗಳಿವೆ.
  • ಅದನ್ನು ಸಸ್ಯಗಳಿಗೆ ಸೋಂಕದಂತೆ  ಇದು ತಡೆಯುತ್ತದೆ.
  • ಇಬ್ಬನಿ ಬೀಳುವುದರಿಂದ ಬೆಳೆಗಳಲ್ಲಿ ಎಲೆ ಮುರುಟುವಿಕೆ, ಕೊಳೆಯುವಿಕೆ ಮುಂತಾದ ಕೆಲವು ಸಮಸ್ಯೆಗಳು ಉಂಟಾಗುತ್ತವೆ.
  • ಈ ಇಬ್ಬನಿಯನ್ನು  ಸಸ್ಯದ ಮೇಲೆ ಬೀಳದಂತೆ ತಡೆಯಲು ಸಹ ಈ ಬೆಳೆ ಹೊದಿಕೆಗಳು ರಕ್ಷಣೆ  ನಿಡುತ್ತವೆ.

ಈ ಹೊದಿಕೆಯನ್ನು ಹಾಕಿ ಬೆಳೆ ಬೆಳೆದರೆ ಕೀಟ ನಾಶಕ ಬಳಸಬೇಕಾಗಿಲ್ಲ. ರೋಗನಾಶಕ ಬಳಸಬೇಕಾಗಿಲ್ಲ. ನುಶಿ, ಹೇನು ಮುಂತಾದ  ಕೀಟಗಳು ಫಲದ ಮೇಲೆ ಕುಳಿತಾಗ ಆಗುವ  ಅಂದ  ಕೆಡುವಿಕೆ ಉಂಟಾಗುವುದಿಲ್ಲ. ಆದ ಕಾರಣ ಉತ್ಪನ್ನಗಳ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ.

ಖರ್ಚು ಎಷ್ಟು?

  • ಕ್ರಾಪ್ ಕವರ್ ಗಳು ಮೀಟರಿಗೆ 5 -6- 7  ರೂ ಬೆಲೆಯಲ್ಲಿ ಲಭ್ಯವಿದೆ. ಅಳತೆ 1ಮೀಟರು,  5ಅಡಿ , 8 ಅಡಿ ಮುಂತಾದ  ಅಳತೆಯಲ್ಲಿ  ಲಭ್ಯವಿರುತ್ತದೆ.
  • ಇದನ್ನು ಒಂದು ಎಕ್ರೆಗೆ ಹೊದಿಸಲು ಬೆಳೆ ಹೊಂದಿ ಸುಮಾರು 10-15  ಸಾವಿರ ತನಕ ಖರ್ಚು ಬೀಳುತ್ತದೆ.
  • ಅಷ್ಟು ಬಂಡವಾಳವನ್ನು ಕೀಟನಾಶಕ ಮತ್ತು ಹಾನಿಯಾಗದೆ ಉಳಿಯುವ ಬೆಳೆಗಳಿಂದ ಪಡೆಯಬಹುದು ಎಂಬುದು ತಂತ್ರಜ್ಞರ ಅಭಿಪ್ರಾಯ.
  • ಇದನ್ನು ಪುನರ್ ಬಳಕೆ ಮಾಡಬಹುದು ಕೂಡಾ.
  • ಇದರಲ್ಲಿ ಬಿಳಿ ಬಣ್ಣ ಅಲ್ಲದೆ ನೀಲಿ  ಹಾಗೂ ಹಳದಿ ಬಣ್ಣದವುಗಳೂ ಲಭ್ಯವಿದೆ.

ಯಾವ ಯಾವ ಬೆಳೆಗೆ ಹೊದಿಸಬಹುದು;

  • ಬಾಳೆ ಗೊನೆಗೆ ಇದನ್ನು ಹೊದಿಸಿದರೆ ರಪ್ತು ಯೋಗ್ಯ ಕಾಯಿ ದೊರೆಯುತ್ತದೆ. ಯಾವುದೇ ಕಲೆಗಳು ಇರುವುದಿಲ್ಲ.
  • ದಾಳಿಂಬೆ ಗಿಡಗಳಿಗೆ ಹೊದಿಸಿದರೆ ಪತಂಗದ ತೊಂದರೆ ಇಲ್ಲ. ಸನ್  ಸ್ಕಾರ್ಚ್ ಇಲ್ಲ, ಮೈಟ್, ಹಿಟ್ಟು ತಿಗಣೆ  ಇಲ್ಲದೆ ಆಕರ್ಷಕವಾದ ಹಣ್ಣು ದೊರೆಯುತ್ತದೆ. ಗಿಡಕ್ಕೇ ಹೊದಿಸಬಹುದು. ಕ್ಕಾಅಯಿಗೂ ಕಟ್ಟಬಹುದು.
  • ಮಾವು, ಅಂಜೂರ, ದ್ರಾಕ್ಷಿ ಬೆಳೆಯಲ್ಲೂ  ಇದನ್ನು ಬಳಕೆ ಮಾಅಡುತ್ತರೆ.
  • ತರಕಾರಿ ಬೆಳೆಗಳಲ್ಲಿ ಸ್ವ ಪರಾಗ ಸ್ಪರ್ಷದ ತಳಿಗಳನ್ನು ಬೆಳೆಸಿದರೆ ದುಪ್ಪಟ್ಟು ಇಳುವರಿ ಪಡೆಯಬಹುದು.
  • ಕಲ್ಲಂಗಡಿ ಬೆಳೆಯಲ್ಲೂ ಇದನ್ನು  ಬಳಸುತ್ತಾರೆ.

ಇದರ ಒಳಗೆ ಬೆಳೆದ  ಉತ್ಪನ್ನ ಶುದ್ಧ ಸಾವಯವ  ಉತ್ಪನ್ನವಾಗಿರುತ್ತದೆ.  ನಿಜವಾಗಿಯೂ ಕೀಟ – ರೋಗ ನಾಶಕ ಬಳಕೆ ಮಾಡದೇ ಉತ್ತಮ ಇಳುವರಿ ಪಡೆಯಲು ಈ ತಂತ್ರಜ್ಞಾನ ಸಹಾಯಕ. ಮಹಾರಾಷ್ಟ್ರದಲ್ಲಿ ಹಲವಾರು ರೈತರು ಇದರನ್ನು ಬಳಸಿ ಬೆಳೆ ಬೆಳೆಯುತ್ತಿದ್ದಾರೆ.

 
 

Leave a Reply

Your email address will not be published. Required fields are marked *

error: Content is protected !!