ತೆಂಗಿನ ಸಸಿಯನ್ನು ಹೀಗೆ ನೆಡುವುದು ಬಹಳ ಉತ್ತಮ.
ತೆಂಗು ಅಗಲಿ , ಅಡಿಕೆ ಅಗಲಿ, ನೆಡುವಾಗ ಅದರ ಬೇರುಗಳು ಚೆನ್ನಾಗಿ ಬೆಳೆಯುವಂತೆ ಅವಕಾಶ ಮಾಡಿಕೊಟ್ಟು ನೆಡಬೇಕು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಆಗುವಾಗ ಬೇರುಗಳು ತ್ವರಿತವಾಗಿ ಆ ಮಣ್ಣಿಗೆ ಹೊಂದಿಕೊಳ್ಳಬೇಕು. ಹಾಗೆ ಆಗಬೇಕಾದರೆ ಹೀಗೆ ನೆಡಿ. ತೆಂಗಿನ ಸಸಿಯನ್ನು ನೆಡುವಾಗಲೇ ಸರಿಯಾಗಿ ನೆಟ್ಟರೆ ಮಾತ್ರ ತಕ್ಷಣ ಹೊಸ ಎಲೆ ಬಿಡುತ್ತದೆ. ಬೆಳೆಯುತ್ತದೆ ಹಾಗೆಯೇ ಮುಂದೆ ಅದು ಉತ್ತಮ ಇಳುವರಿ ಕೊಡಲು ಸಮರ್ಥವಾಗಿರುತ್ತದೆ. ತೆಂಗಿನ ಮರದ ವಾರ್ಷಿಕ ಸರಾಸರಿ ಇಳುವರಿ ಎಷ್ಟು ? 50-100 ಕಾಯಿಯೇ. …
