ರೋಗ-ಕೀಟ ನಿರೋಧಕ ತಳಿಗಳು ನಿಮ್ಮ ಬಳಿಯಲ್ಲೇ ಇರಬಹುದು. ಹೇಗೆ ಹುಡುಕುವುದು?
ರೋಗ ನಿರೋಧಕ ಶಕ್ತಿ ಎಂಬುದು ಕೆಲವು ತಳಿಗಳ ವಂಶ ಗುಣ. ಇದನ್ನು ಕೃಷಿ ವಿಜ್ಞಾನ ಅಧ್ಯಯನ ಮಾಡಿದವರೇ ಹುಡುಕಿ ಅಭಿವೃದ್ದಿಪಡಿಸಬೇಕಾಗಿಲ್ಲ. ಸಾಮಾನ್ಯ ರೈತರೂ ಅದನ್ನು ಅಭ್ಯಸಿಸಿ ತಮ್ಮ ಬಳಕೆಗಾದರೂ ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಬೆಳಕು ಚೆಲ್ಲುವ ಒಂದು ಅಪರೂಪದ ಲೇಖನ ಇಲ್ಲಿದೆ. ಕೆಲವು ರೈತರ ಅಡಿಕೆ ತೋಟದಲ್ಲಿ ಪ್ರತೀ ವರ್ಷ ಕೊಳೆ ಬರುತ್ತದೆ. ಹಾಗೆಂದು ಎಲ್ಲಾ ಮರಗಳಿಗೂ ಕೊಳೆ ಬರುವುದಿಲ್ಲ. ಹಾಗೆಯೇ ಕರಿಮೆಣಸು, ತೆಂಗು, ಏಲಕ್ಕಿ, ನೆಲಕಡ್ಲೆ, ಹತ್ತಿ, ದಾಳಿಂಬೆ, ಎಲ್ಲಾ ಕೃಷಿ, ತೋಟಗಾರಿಕೆ, ತರಕಾರಿ ,…
