brinja

ಬಿಟಿ ಬದನೆ ಬಂದರೆ ಕೀಟನಾಶಕ ಬಳಸದ ಬದನೆ ತಿನ್ನಬಹುದು.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಟಿ ಬದನೆಯ ಬೇಸಾಯ ಸದ್ದಿಲದ್ದೆ ಕರ್ನಾಟಕದಲ್ಲಿ ರೈತರು ಎಚ್ಚರದಿಂದಿರಿ ಎಂಬ    ವಿರೋಧಿ ಹೋರಾಟದ ಸಂದೇಶಗಳು ರವಾನೆಯಾಗುತ್ತಿವೆ. ಯಾಕೆ ಬಿಟಿ ಬದನೆ ಬೇಡ ಎಂದು ತಿಳಿಯುತ್ತಿಲ್ಲ. ವೈಜ್ಞಾನಿಕ ಮೂಲಗಳು ಬಿಟಿಯಿಂದ ತೊಂದರೆ ಇಲ್ಲ ಎಂಬುದನ್ನು ಆದಾರ ಸಹಿತ ಹೇಳಿದರೆ  ಬಿಟಿ ಬೇಡ ಎನ್ನುವವರು ತಮ್ಮದೇ ಆದ ವಾದಗಳಿಂದ ಜನರನ್ನು ಅಂಜಿಸುತ್ತಿದ್ದಾರೆ. ವಿಜ್ಞಾನ ಹೇಳುತ್ತದೆ ಹೀಗೆ: ಬಿಟಿ ಎಂದರೆ ವಂಶವಾಹಿ ಮಾರ್ಪಾಡು ಮಾಡಲಾದ ತಳಿ. ಮಾರ್ಪಾಡು ಎಂದರೆ ಕೆಲವು ಅವಗುಣಗಳನ್ನು ತೆಗೆದು ಅಗತ್ಯ ಗುಣಗಳನ್ನು ಅದರ…

Read more

ರೈತರಿಗೆ ಕೇಂದ್ರ ಸರಕಾರದಿಂದ ಮುಷ್ಟಿ ಸಹಾಯ.

ಇಂದು ಗ್ರಾಮೀಣ ಭಾಗದ ಸಣ್ಣ – ಅತೀ ಸಣ್ಣ ರೈತರು, ಈಗಾಗಲೇ ಸರಾಸರಿ ತಲಾ 1 ಲಕ್ಷಕ್ಕೂ ಹೆಚ್ಚಿನ ಸಾಲದಲ್ಲಿ ಮುಳುಗಿದ್ದಾರೆ. ದೊಡ್ಡ ರೈತರ ಬದುಕೇ ಸಾಲ. ಇದರ ಮೇಲೆ ಇವರಿಗೆ ಮತ್ತೆ ಸಾಲ ಕೊಡುವ ಪ್ಲಾನ್ ನಲ್ಲಿದೆ ಕೇಂದ್ರ ಸರಕಾರ. ವಿಶೇಷ ಪ್ಯಾಕೇಜ್ ಮೂಲಕ ಸಾಲಕೊಟ್ಟು ಭಾರತದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಸಾಧ್ಯವೇ ? ಇದರ ಪರಿಣಾಮ ಏನಾಗಬಹುದು? ಕೇಂದ್ರ ಸರಕಾರ ರೈತರ ಕಲ್ಯಾಣಕ್ಕಾಗಿ ಭಾರೀ ಸವಲತ್ತುಗಳನ್ನು ನೀಡಲಿದೆ ಎಂಬ  ಪ್ರತೀಯೊಬ್ಬ ರೈತರ ಆಶಯ …

Read more
weed and its root zone

ಹೊಲದಲ್ಲಿ ಕಳೆ ಬೇಕು ? ಬೇಡ? ಈ ಸಂದೇಹಕ್ಕೆ ಉತ್ತರ.

ಬೆಳೆ ಬೇಕಾದರೆ ಕಳೆಗಳನ್ನು ಹತ್ತಿಕ್ಕಲೇ ಬೇಕು. ಕಳೆಗಳಿಂದ ಬೆಳೆ ಇಳುವರಿಯಲ್ಲಿ 33% ಕಡಿಮೆಯಾಗುತ್ತದೆ ಎಂಬುದಾಗಿ ಅಧ್ಯಯನ ಹೇಳುತ್ತದೆ.ಇನ್ನೂ ಮುಂದುವರಿದು ಕೆಲವು ತೊಂದರೆ ರಹಿತ ಕಳೆಗಳು ಇದ್ದರೆ ಮಣ್ಣು ಸಂರಕ್ಷಣೆ ಆಗುತ್ತದೆ ಎನ್ನುತ್ತಾರೆ. ಹೊಲದಲ್ಲಿ ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಕಳೆ ಬೇಕು. ಮಳೆಗಾಲದಲ್ಲಿ ಮಣ್ಣು ಸಂರಕ್ಷಣೆಗೆ ಬೇಕು. ಹಾನಿಮಾಡುವ ಕಳೆ ಬೇಡ.                ಬೆಳೆಗಳೊಂದಿಗೆ ಬದುಕುವ ಕೆಲವು  ಸಸ್ಯಗಳು ಬೆಳೆಸಿದ ಬೆಳೆಗಿಂತ  ವೇಗವಾಗಿ ಬೆಳೆಯುತ್ತಾ  ಸ್ಪರ್ಧಿಸಿ ಬೆಳೆಯ ಇಳುವರಿಯನ್ನು ಕಡಿಮೆ ಮಾಡುತ್ತವೆ. ನಮ್ಮ ದೇಶದಲ್ಲಿ  ಕಳೆಗಳಿಂದಾಗಿ  ಒಟ್ಟು ಶೇಕಡ.33…

Read more

ಗುಳ್ಳಕ್ಕೆ ಇದು ಬದಲಿ ತಳಿ.

ಬದನೆ ಬೆಳೆಸುವ ರೈತರು ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಮಾಡುವ ಖರ್ಚು ಅತೀ ಹೆಚ್ಚು. ಸಾಕಷ್ಟು ಕೀಟನಾಶಕ – ರೋಗ ನಾಶಕ ಬಳಸಿ  ಬೆಳೆ ಉಳಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಖರ್ಚು ಮಾಡಿದಾಗ ರೈತರಿಗೆ ಉಳಿಯುವುದು ಅಷ್ಟಕ್ಕಷ್ಟೇ.  ಖರ್ಚು ಕಡಿಮೆ ಮಾಡಿ ಬೆಳೆ ಬೆಳೆಸಬೇಕಿದ್ದರೆ ಇರುವುದು ರೋಗ ನಿರೋಧಕ ಶಕ್ತಿ ಪಡೆದ ತಳಿಯನ್ನು ಆಯ್ಕೆ ಮಾಡುವುದು ಒಂದೇ. ಗುಳ್ಳ ಬದನೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಆದರೆ ಈಗಿತ್ತಲಾಗಿ ಗುಳ್ಳ ಬದನೆ ಬೆಳೆಸುವುದೇ ಕಷ್ಟವಾಗುತ್ತಿದೆ. ಬೆಳೆಸು ರೈತರು ಗುಳ್ಳ ತಿನ್ನುವುದನ್ನೇ ಕಡಿಮೆ ಮಾಡಿದ್ದೂ ಇದೆ….

Read more
ನಾಗನಿಗೆ ಹಾಲೆರೆಯುವುದರಿಂದ ಏನೇನು ಲಾಭವಿದೆ?

ನಾಗನಿಗೆ ಹಾಲು ಎರೆಯುವುದರಿಂದ ಏನೇನು ಲಾಭವಿದೆ?

ಆಷಾಡ ಮಾಸದ  ಅಮಾವಾಸ್ಯೆ ಕಳೆದು ತಕ್ಷಣ ಬರುವ ವಿಷೇಶ ದಿನಗಳಲ್ಲಿ ನಾಗರ ಪಂಚಮಿ  ಮೊದಲನೆಯದ್ದು.  ಇದು ದಕ್ಷಿಣಾಯನದ ಮೊದಲ ವಿಷೇಷ ದಿನ ಎನ್ನಲಾಗುತ್ತದೆ.ಇದರ ನಂತರ ಚೌತಿ, ಅಷ್ಟಮಿ, ನವರಾತ್ರೆ, ದೀಪಾವಳಿ ಮುಂತಾದ ವಿಷೇಷ ದಿನಗಳು ಬರುತ್ತವೆ. ಎಲ್ಲದಕ್ಕೂ ನಾಗರ ಪಂಚಮಿ ಮುಹೂರ್ತ. ಪಂಚಮಿಯಂದು ನಾಗನಕಲ್ಲಿಗೆ  ಅವರವರ ಶಕ್ತಿಯನುಸಾರ ಹಾಲೆರೆಯುತ್ತಾರೆ. ಹೂವು ಹಾಕುತ್ತಾರೆ. ಅರಶಿನ ಲೇಪಿಸುತ್ತಾರೆ. ಸಮರ್ಪಣೆ ಮಾಡುತ್ತಾರೆ. ನೈವೇದ್ಯ ಮಾಡುತ್ತಾರೆ. ಆರತಿ ಎತ್ತುತ್ತಾರೆ. ಧನ್ಯತಾ ಭಾವದಿಂದ ಕಲ್ಲಿನ ಮೂಲಕ ಹರಿದುಬಂದನ್ನು ತೀರ್ಥ ರೂಪದಲ್ಲಿ ಸೇವಿಸಿ ತಮ್ಮ ಮನೆ,…

Read more
ಬೀಜದ ಕಾಯಿ ಆಯ್ಕೆಗೆ ಸೂಕ್ತವಾದ ಲಕ್ಷಣವುಳ್ಳ ತಾಯಿ ಮರ

ಬೀಜದ ತೆಂಗಿನ ಕಾಯಿ- ನಿಮ್ಮದೇ ಮರದಿಂದ ಆಯ್ಕೆ ಹೇಗೆ?

ತೆಂಗು ಬೆಳೆಯಯಲ್ಲಿ ಬೀಜದ ಆಯ್ಕೆ ಪ್ರಾಮುಖ್ಯ ಹಂತ. ಬೀಜದ ತೆಂಗಿನ ಕಾಯಿ ಅವರವರ  ತೋಟದ ಮರಗಳಿಂದ ಆಯ್ಕೆ ಮಾಡಿಕೊಂಡರೆ ಬಹಳ ಉತ್ತಮ. ತೆಂಗಿನ ಕುರಿತಾಗಿ ಯಾವುದೇ ಲೇಖನಗಳು ಹಾಕಿದಾಗಲೂ ಇದರ ಬೀಜ ಎಲ್ಲಿ ಸಿಗುತ್ತದೆ ಎಂಬುದಾಗಿ ಕೇಳುತ್ತಾರೆ. ಇವರಿಗೆಲ್ಲಾ ನಾವು ಹೇಳುವುದು ನಿಮ್ಮ ಮನೆಯಲ್ಲಿರುವ ಅಥವಾ ನಿಮ್ಮ ಪರಿಚಯಸ್ಥರ ಮನೆಯಿಂದ ಬೀಜ ತಂದು ನೀವೇ ಸಸಿ ಮಾಡಿ ಎಂದು. ಇದು ಧೀರ್ಘಾವಧಿಯ ಬೆಳೆ ಆದ ಕಾರಣ ನೀವು ಆಯ್ಕೆ ಮಾಡಿದ ಬೀಜವೇ ಆಗಬೇಕು.ನಿಮ್ಮ ಕಣ್ಣೆದುರೇ ಇದ್ದ  ಮರದ…

Read more
ಎಲೆ ಚುಕ್ಕೆ ರೋಗ ಔಷದೋಪಚಾರ – ತಿಳಿದು ಮಾಡದಿದ್ದರೆ ಸಮಸ್ಯೆ ಇನ್ನೂ ಹೆಚ್ಚಾಗಬಹುದು

ಎಲೆ ಚುಕ್ಕೆ ರೋಗ ಉಪಚಾರ – ತಿಳಿದು ಮಾಡದಿದ್ದರೆ ಸಮಸ್ಯೆ ಇನ್ನೂ ಹೆಚ್ಚಾಗಬಹುದು.

ಎಲೆ ಚುಕ್ಕೆ ರೋಗಕ್ಕೆ ಸಿಕ್ಕ ಸಿಕ್ಕ ಔಷದೋಪಚಾರ ಮಾಡಬೇಡಿ. ಯಾರೋ ಹೇಳಿದರು ಎಂದು ಅದನ್ನು ಸಿಂಪಡಿಸುವುದು, ಅಥವಾ ನಾವೇ ಪ್ರಯೋಗ ಮಾಡಿ ನೋಡುವುದು ಮಾಡುವುದರ ಬದಲು ಸ್ವಲ್ಪ ಯೋಚಿಸಿ ಅಥವಾ ಈ ಬಗ್ಗೆ ಸ್ವಲ್ಪ ತಿಳಿದವರಲ್ಲಿ ಕೇಳಿಕೊಳ್ಳಿ. ರೋಗಗಳಿಗೆ ಕೆಲವು ಔಷಧಿಗಳು ನಿರೋಧಕ ಶಕ್ತಿ ಪಡೆದಿರಬಹುದು ಅಥವಾ ಅದು ಸಂಬಂಧಿಸಿದ ರೋಗಾಣುವಿಗೆ ಸೂಕ್ತ ಔಷದೋಪಚಾರ ಆಗಿರದೇ ಇರಬಹುದು. ಹಾಗಾಗಿ ಹುರುಳಿಲ್ಲದ ಸಲಹೆಗಳಿಗೆ ಮಾನ್ಯತೆ ಕೊಡುವ ಬದಲು ಸ್ವಲ್ಪ ನೀವೇ ವಿಮರ್ಶೆ ಮಾಡಿಕೊಳ್ಳಿ. ಒಬ್ಬರು ಎಲೆ ಚುಕ್ಕೆ ರೋಗ…

Read more
“ಬಾಳೆದಂಡು” ಯಾವ ಆರೋಗ್ಯ ಸಮಸ್ಯೆಗೆ ಔಷಧಿ

“ಬಾಳೆದಂಡು” ಯಾವ ಆರೋಗ್ಯ ಸಮಸ್ಯೆಗೆ ಔಷಧಿ?

ನಮ್ಮ ಪೂರ್ವಜರ ಆಹಾರ ಜ್ಞಾನದಲ್ಲಿ ಅಡಗಿರುವ ಬಾಳೆದಂಡು ಇದರ ಅಡುಗೆ  ಬಹುತೇಕ ಎಲ್ಲರೂ ಅನುಭವಿಸುವ ಆನಾರೋಗ್ಯ ನಿವಾರಣೆಗೆ ಪರಿಹಾರವಾಗಿದೆ. ನಮ್ಮ ಸುತ್ತಮುತ್ತಲಿನ ಕೃಷಿಯಲ್ಲಿ ಅನೇಕ ವಸ್ತುಗಳನ್ನು ನಾವು “ತ್ಯಾಜ್ಯ” ಎಂದು ಭಾವಿಸುತ್ತೇವೆ. ಆದರೆ ನಮ್ಮ ಪೂರ್ವಜರಿಗೆ ಅವುಗಳಲ್ಲಿ ಹಲವಾರು ಉಪಯೋಗಗಳು ತಿಳಿದಿದ್ದವು. ಬಾಳೆಗಿಡದ ವಿಷಯವೂ ಇದಕ್ಕೆ ಒಂದು ಉತ್ತಮ ಉದಾಹರಣೆ. ಬಾಳೆಹಣ್ಣು, ಬಾಳೆಹೂವು ಮತ್ತು ಬಾಳೆ ಎಲೆಗಳ ಬಳಕೆ ನಮಗೆ ಗೊತ್ತೇ ಇದೆ. ಆದರೆ ಬಾಳೆಗಿಡದ ಕಾಂಡದ ಒಳಗಿನ ಮೃದುವಾದ ಭಾಗವನ್ನೂ ತರಕಾರಿಯಾಗಿ ಬಳಸುವ ಪದ್ಧತಿ ನಮ್ಮ…

Read more
water recharge

ಬೋರ್ವೆಲ್ ರೀಚಾರ್ಜ್ ಎಲ್ಲಿ ಮಾಡಬಹುದು?

ಅಂತರ್ಜಲ ಎಂಬ ಕರೆನ್ಸಿ ಅತಿಯಾಗಿ ಬಳಕೆ ಮಾಡಿ ಮುಗಿಯುತ್ತಿದೆ.ಅದಕ್ಕೆ  ಮತ್ತೆ  ರೀ ಚಾರ್ಜ್ ಮಾಡಬಹುದು ಎನ್ನುತ್ತಾರೆ ಸ್ವಘೋಷಿತ ತಜ್ಞರು. ಇದನ್ನು ಹಲವಾರು ಜನ ಮಾಡಿದ್ದಾರೆ.  ಕೆಲವರು ಒಳ್ಳೆಯದಾಗಿದೆ ಎನ್ನುತ್ತಾರೆ ಕೆಲವರು ನಿರಾಶರಾದದ್ದೂ ಇದೆ. ಒಟ್ಟಿನಲ್ಲಿ ನಿಮ್ಮ ಕೊಳವೆ ಬಾವಿ ಮಳೆಗಾಲದಲ್ಲಿ ನೀರನ್ನು ಕುಡಿಯುವ ಸ್ಥಿತಿಯಲ್ಲಿದ್ದರೆ ಅದಕ್ಕೆ ಸೋಸು ವ್ಯವಸ್ಥೆಗಳ ಮೂಲಕ ನೀರನ್ನು ಮರು ಪೂರಣ ಮಾಡುವುದರಲ್ಲಿ ತಪ್ಪಿಲ್ಲ. ಅಂತರ್ಜಲಕ್ಕೆ ಮರು ಪೂರಣ ಸಾಧ್ಯವೇ: ಭೂಮಿಯ ಒಳಗೆ ಶಿಲಾ ಪದರಗಳ ಕೆಲವು ಬಿರುಕುಗಳಲ್ಲಿ ನೀರು ಇರುತ್ತದೆ. ಇನ್ನು ಕೆಲವು…

Read more
error: Content is protected !!