ಜೇನುನೊಣಗಳು ಕಡಿಮೆಯಾಗುತ್ತಿರುವುದಕ್ಕೆ ಕೀಟನಾಶಕಗಳೇ ಕಾರಣವೇ? ಅಥವಾ..
ಜೇನುನೊಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳುತ್ತೇವೆ. ಆದರೆ ಅದರ ನಿಜವಾದ ಕಾರಣವೇನು?.ಕೆಲವು ಪರಿಸರವಾದಿಗಳು ಮತ್ತು ರಾಸಾಯನಿಕ ವಿರೋಧಿ ಚಳವಳಿಗಳಲ್ಲಿ ಇರುವವರು ಒಂದು ಮಾತನ್ನು ಪದೇಪದೇ ಹೇಳುತ್ತಾರೆ:“ಕೃಷಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಜೇನುನೊಣಗಳು ನಾಶವಾಗುತ್ತಿವೆ.” ಇದರಲ್ಲಿ ಸ್ವಲ್ಪ ಸತ್ಯವಿದೆ. ಕೆಲವು ಕೀಟನಾಶಕಗಳು, ವಿಶೇಷವಾಗಿ ತಪ್ಪಾಗಿ ಬಳಸಿದಾಗ ಅಥವಾ ಹೂಬಿಡುವ ಸಮಯದಲ್ಲಿ ಜೇನುನೊಣಗಳು ಸಂಪರ್ಕಕ್ಕೆ ಬಂದಾಗ, ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಗಳಿಗೆ ಹಾನಿ ಮಾಡಬಹುದು. ವಿಶ್ವದ ವೈಜ್ಞಾನಿಕ ಅಧ್ಯಯನಗಳೂ ಕೀಟನಾಶಕಗಳನ್ನು ಪರಾಗಸ್ಪರ್ಶಕಗಳ ಕುಸಿತಕ್ಕೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದೆಂದು ಗುರುತಿಸಿವೆ. ಆದರೆ,…
