ನಿಜವಾದ ತಪ್ಪಿತಸ್ಥ ಯಾರು — ರೈತನಾ ಅಥವಾ ವ್ಯವಸ್ಥೆಯಾ?
ಭಾರತೀಯ ಕೃಷಿ ಉತ್ಪನ್ನಗಳು ರಫ್ತು ಮಾರುಕಟ್ಟೆಯಲ್ಲಿ ತಿರಸ್ಕೃತವಾದಾಗ, ನಿಜವಾದ ತಪ್ಪಿತಸ್ಥ ಯಾರು? ರೈತನನ್ನೇ ದೂಷಿಸಬೇಕೇ, ಅಥವಾ ವ್ಯವಸ್ಥೆ ಎಲ್ಲಿ ವಿಫಲವಾಗಿದೆ ಎಂದು ಮೊದಲು ಪ್ರಶ್ನಿಸಬೇಕೇ? ಭಾರತದ ಅಕ್ಕಿ, ಮಾವು, ಮಸಾಲೆ, ತರಕಾರಿ ಸೇರಿದಂತೆ ಹಲವು ಕೃಷಿ ಉತ್ಪನ್ನಗಳು ಕೆಲವೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಕಾರಣ ತಿರಸ್ಕೃತವಾಗುತ್ತವೆ. ಅದರಲ್ಲೂ ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಕೀಟನಾಶಕ ಅಥವಾ ಶಿಲೀಂಧ್ರನಾಶಕದ ಅವಶೇಷಗಳು ಪ್ರಮುಖ ಕಾರಣವಾಗಿರಬಹುದು. ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅತಿಥಿಯೊಬ್ಬರು, ಇಂತಹ ರಫ್ತು ತಿರಸ್ಕಾರಗಳಿಗೆ…
