ಹಬ್ಬದ ದಿನಗಳು ಮತ್ತು ಅದರ ಮಹತ್ವ
ಪ್ರಪಂಚದಾದ್ಯಂತ ಹಬ್ಬಗಳನ್ನು ಆಚರಿಸುತ್ತಾರೆ. ಭಾರತದಲ್ಲಿ ಸಹ ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಹೆಚ್ಚಿನೆಲ್ಲಾ ಹಬ್ಬ ಹರಿದಿನಗಳು ವಿಶೇಷ ಸಂದೇಶವನ್ನು ದ್ವನ್ಯಾರ್ಥದಲ್ಲಿ ಕೊಡುವಂತವುಗಳು. ಇಂತಹ ಹಬ್ಬಗಳ ಮಹತ್ವ ಅರಿತು ಅವುಗಳನ್ನು ಆಚರಿಸಿದರೆ ಅದಕ್ಕೆ ಗೌರವ ಹೆಚ್ಚುತ್ತದೆ. ನಮ್ಮ ಮಕ್ಕಳಿಗೆ ಹಬ್ಬ ಹರಿದಿನಗಳಾದರೂ ಒಂದೆ ಶೋಕದ ದಿನಗಳಾದರೂ ಒಂದೇ. ಒಂದು ಮೊಬೈಲ್ ಫೋನು ಹಿಡಿದುಕೊಂಡು ತಮ್ಮಷ್ಟಕ್ಕೇ ತಾವೇ ಏನೋ ವಿಚಾರದಲ್ಲಿ ಮಗ್ನರಾಗಿರುತ್ತಾರೆ. ಇವರಿಗೆ ಹಿರಿಯರು ಆಚರಿಸುವ ಶುಭ ದಿನಗಳ ಬಗ್ಗೆ ಒಂದು ರೀತಿಯಲ್ಲಿ ತಾತ್ಸಾರ. ಇದಕೆಲ್ಲಾ ಕಾರಣ ಅವರಿಗೆ ಆ ಶುಭ…
