ಎತ್ತರದಲ್ಲಿ ಬಲೆ ಕಟ್ಟುವ ಭೇಟೆಗಾರ ಜೇಡ

ಜೇಡಗಳನ್ನು ಕೊಲ್ಲದಿರಿ -ಇವು ರೈತರ ಮಿತ್ರರು.

ಜೇಡರ ಬಲೆ ಕಂಡರೆ ಸಾಕು ಕೋಲು ಹಿಡಿದು ಆದನ್ನು ಬಿಡಿಸಿ  ಅವುಗಳ ಬದುಕಿನಲ್ಲಿ  ಆಟವಾಡುವವರೇ ಹೆಚ್ಚು.  ಯಾರ ಹೊಲದಲ್ಲಿ ಇವು ಹೆಚ್ಚಾಗಿ ಬಲೆ ಕಟ್ಟಿ ಇರುತ್ತದೆಯೋ ಅಲ್ಲಿ ಕೀಟಗಳು ಹೆಚ್ಚು ಇವೆ ಎಂದೂ ಅಲ್ಲಿ ಕಡಿಮೆ ವಿಷ ರಾಸಾಯನಿಕ ಬಳಸಲಾಗಿದೆ ಎಂಡು ಹೇಳಬಹುದು. ಮಳೆಗಾಲ ಮುಕ್ತಾಯದ ಸಮಯದಲ್ಲಿ ಬಿಸಿಲು ಇದ್ದಾಗ ನಿಮ್ಮ ಹೊಲದಲ್ಲಿ ಅಸಂಖ್ಯಾತ ಸಣ್ಣ ದೊಡ್ಡ ಜೇಡಗಳು ಬಲೆಕಟ್ಟಿಕೊಂಡು ಕಾಣಬಹುದು. ಕಾರಣ ಈ ಸಮಯದಲ್ಲಿ ಹುಳ ಹುಪ್ಪಟೆಗಳು ಅಧಿಕ ಸಂಖ್ಯೆಯಲ್ಲಿ ಇರುತ್ತವೆ. ಜೇಡಗಳಿಗೆ ಆ ಹುಳ…

Read more
ತೆಂಗಿನ ಸಸಿಯನ್ನು ಹೀಗೆ ನೆಡುವುದು ಬಹಳ ಉತ್ತಮ.

ತೆಂಗಿನ ಸಸಿಯನ್ನು ಹೀಗೆ ನೆಡುವುದು ಬಹಳ ಉತ್ತಮ.

ತೆಂಗು ಅಗಲಿ , ಅಡಿಕೆ ಅಗಲಿ, ನೆಡುವಾಗ ಅದರ ಬೇರುಗಳು ಚೆನ್ನಾಗಿ ಬೆಳೆಯುವಂತೆ ಅವಕಾಶ ಮಾಡಿಕೊಟ್ಟು ನೆಡಬೇಕು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಆಗುವಾಗ ಬೇರುಗಳು ತ್ವರಿತವಾಗಿ ಆ ಮಣ್ಣಿಗೆ ಹೊಂದಿಕೊಳ್ಳಬೇಕು. ಹಾಗೆ ಆಗಬೇಕಾದರೆ ಹೀಗೆ ನೆಡಿ. ತೆಂಗಿನ ಸಸಿಯನ್ನು ನೆಡುವಾಗಲೇ  ಸರಿಯಾಗಿ ನೆಟ್ಟರೆ ಮಾತ್ರ  ತಕ್ಷಣ ಹೊಸ ಎಲೆ ಬಿಡುತ್ತದೆ. ಬೆಳೆಯುತ್ತದೆ ಹಾಗೆಯೇ ಮುಂದೆ ಅದು ಉತ್ತಮ ಇಳುವರಿ ಕೊಡಲು ಸಮರ್ಥವಾಗಿರುತ್ತದೆ. ತೆಂಗಿನ ಮರದ ವಾರ್ಷಿಕ  ಸರಾಸರಿ ಇಳುವರಿ ಎಷ್ಟು ? 50-100 ಕಾಯಿಯೇ. …

Read more
ನೀರಾವರಿಯೊಂದಿಗೆ ಗೊಬ್ಬರ ಕೊಟ್ಟು ಇಳುವರಿ

ನೀರಾವರಿಯೊಂದಿಗೆ ಗೊಬ್ಬರ ಕೊಟ್ಟರೆ ದುಪ್ಪಟ್ಟುಇಳುವರಿ .

ಒಮ್ಮೆಲೇ ತಿನ್ನುವುದಕ್ಕಿಂತ ಹಸಿವಾದಾಗ ತಿಂದರೆ ಅದು ದೇಹಕ್ಕೆ ಸಮರ್ಪಕವಾಗಿ  ಬಳಕೆಯಾಗುತ್ತದೆ. ಈ ಸಿದ್ದಾಂತ ಸಸ್ಯಗಳಿಗೂ ಅನ್ವಯ. ಈ ಸಿದ್ದಾಂತದ ಮೇರೆಗೆ ಬೆಳೆಗಳಿಗೆ ಬೇರಿನ ಸನಿಹಕ್ಕೆ, ಕ್ರಿಯಾತ್ಮಕ ಬೇರುಗಳು ಇರುವಲ್ಲಿಗೆ,  ಬೇಕಾದಾಗ ಬೇಕಾಗುವುದನ್ನೇ, ಬೇಕಾದಷ್ಟೇ  ಪ್ರಮಾಣದಲ್ಲಿ ಕೊಡುವ ಪದ್ದತಿಯನ್ನು ಪ್ರಚಲಿತಕ್ಕೆ ತರಲಾಗಿದೆ. ಇದಕ್ಕೆ ನೀರಿನ ಜೊತೆಗೆ ಗೊಬ್ಬರ ಕೊಡುವುದು ಅಥವಾ ರಸಾವರಿ ಎಂಬ ಹೆಸರನ್ನು ಕೊಡಲಾಗಿದೆ. ದುಪ್ಪಟ್ಟು ಇಳುವರಿ: ತರಕಾರಿ ಮುಂತಾದ ಅಲ್ಪಾವಧಿ ಬೆಳೆಗಳಿಗೆ ತಕ್ಷಣ ಪೋಷಕಾಂಶಗಳು ದೊರೆತು, ಉತ್ತಮ ಇಳುವರಿ ಪಡೆಯಲು ಈ ತಂತ್ರಜ್ಞಾನ ಪ್ರಾರಂಭವಾಯಿತು. ಇದರ…

Read more
ರಸಾವರಿ ವ್ಯವಸ್ಥೆಗಳು

ರಸಾವರಿಯಿಂದ 50% ಕೆಲಸ ಉಳಿತಾಯವಾಗುತ್ತದೆ.

ಬೆಳೆಗಳಿಗೆ ನೀರನ್ನು ಹಾಯಿಸುವಾಗ ಅದರ ಜೊತೆಗೆ ಪೋಷಕಗಳನ್ನು ಸೇರಿಸಿ ಕೊಡಲು ಕೆಲವು ವಿಧಾನಗಳಿವೆ. ಅದನ್ನು ಇಂಜೆಕ್ಟಿಂಗ್ ಎನ್ನುತ್ತಾರೆ.ಅದರಲ್ಲಿ ಅನುಕೂಲಕ್ಕಾಗಿ ರೈತರೇ ಮಾಡಿಕೊಂಡ ಕೆಲವು ವಿಧಾನಗಳಿದ್ದರೆ, ಮತ್ತೆ  ಕೆಲವು ನೀರಾವರಿ ವ್ಯವಸ್ಥೆ ತಯಾರಕರ ವಿನ್ಯಾಸವಾಗಿರುತ್ತದೆ. ವೆಂಚುರಿ ವ್ಯವಸ್ಥೆ: ಇದು ಮುಖ್ಯ ಕೊಳವೆಯಲ್ಲಿ ನೀರಿನ ಹರಿವನ್ನು ವಾಲ್ವ್ ಹಾಕಿ ಮಿತಿಗೊಳಿಸಿ, ಸ್ವಲ್ಪ ನೀರನ್ನು ಪಥ ಬದಲಿಸಿ  ಹರಿಸಿದಾಗ ಗ್ರಾವಿಟಿ ನಿಯಮದಂತೆ  ಪೋಷಕಗಳು ಹೀರಲ್ಪಡುವ ವ್ಯವಸ್ಥೆ. ಯಾವ ದ್ರವ ಇದೆಯೋ ಅದನ್ನು ಹೀರಿಕೊಳ್ಳುತ್ತದೆ. ಇದಕ್ಕೆ ಬೇಕಾದುದು ವೆಂಚುರಿ ಇಂಜೆಕ್ಟರ್ ಮತ್ತು ಪೈಪು…

Read more
ಬಾಳೆಯ ನಂಜಾಣು ರೋಗ

ಬಾಳೆ- ಈ ರೀತಿ ಆದರೆ ಆ ಬಾಳೆಯನ್ನು ತೆಗೆದು ಬಿಡಿ

ಬಾಳೆಯನ್ನು ಎಲ್ಲರೂ ಬೆಳೆಯುತ್ತಾರೆ.ಕೆಲವರು ಮನೆ ಹಿತ್ತಲಿನ ಬೆಳೆಯಾಗಿ ಬೆಳೆದರೆ ಮತ್ತೆ ಕೆಲವರು ವಾಣಿಜ್ಯಿಕವಾಗಿ ತೋಟ ಮಾಡಿ ಬೆಳೆಯುತ್ತಾರೆ. ಇವರೆಲ್ಲರಿಗೂ ಅತೀ ದೊಡ್ದ ಸಮಸ್ಯೆ ಎಂದರೆ ಬಾಳೆ ಸಸ್ಯದ ಎಲೆ ಗುಛ್ಛವಾಗುವಿಕೆ. ಇದರ ಪ್ರಾರಂಭಿಕ ಚಿನ್ಹೆ ಮತ್ತು ಪತ್ತೆ ಹೀಗೆ. ನಮ್ಮಲ್ಲಿ ಬಹಳಷ್ಟು ಜನ ಕೇಳುವುದುಂಟು. ಈ ರೀತಿ ಗುಚ್ಚ ತಲೆ ಅದದ್ದಕ್ಕೆ  ಏನು ಪರಿಹಾರ ಎಂದು? ಇದಕ್ಕೆ  ಪರಿಹಾರ ಇಲ್ಲ. ಇದು ಒಂದು ವೈರಾಣು ರೋಗವಾಗಿದೆ. ಇದು ಬಂದರೆ ತಕ್ಷಣ ಗುರುತಿಸಿ ಆ ಬಾಳೆಯ ಎಲ್ಲಾ ಬಾಗಗಳನ್ನೂ…

Read more
ಹಸು , ಕರು ಜೊತೆಯಾಗಿದ್ದ ಕಾಲವಿತ್ತು. ಈಗ ಕರು ಔಟ್

ಗೋವು ರಾಷ್ಟ್ರೀಯ ಪ್ರಾಣಿ ಎಂದು ಕೋರ್ಟು ಘೋಷಿಸಿದೆಯೇ ?

ಅಲಹಾಬಾದ್ ಹೈಕೋರ್ಟ್ ಗೋವುಗಳ ಕುರಿತಾಗಿ ಸ್ಪಷ್ಟವಾಗಿ ಹೇಳಿದೆ. ಆದರೆ ಅದನ್ನು ಕೆಲವರು ತಿರುಚಿ ತಮ್ಮ ಮನಸ್ಸಿಗೆ ತೋರಿದಂತೆ ಹೇಳುತ್ತಿದ್ದಾರೆ. ನಿಜವಾಗಿಯೂ ಕೋರ್ಟು ಹೇಳಿದ್ದೇನು?   ಗೋವನ್ನು  ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಪರಿಗಣಿಸಬೇಕು.  ಗೋವುಗಳ  ಸಂರಕ್ಷಣೆ ಹಿಂದುಗಳ ಮೂಭೂತ ಹಕ್ಕು ಎಂದು ಘೋಷಿಸಬೇಕು.  ಗೋವುಗಳು ನಮ್ಮ ದೇಶದ ಸಂಸ್ಕೃತಿ ಮತ್ತು ಅದು ಮಾತೃ ಸಮಾನ. ವೇದ ಪುರಾಣಗಳ ಕಾಲದಿಂದಲೂ ಮಾನವನ  ಅದರಲ್ಲೂ ಹಿಂದುಗಳ  ಪೂಜನೀಯ ಸಾಕುಪ್ರಾಣಿಯಾಗಿ ಇದ್ದುದು ಗೋವು. ದೇಶದ ಸಾಂಸ್ಕೃತಿಕ ಮತ್ತು ನಂಬಿಕೆಯ ವಿಷಯದಲ್ಲಿ ನಾವು…

Read more
ಅಣಬೆ ರೋಗದ ಅಂತಿಮ ಚಿನ್ಹೆ

ಅಡಿಕೆ ಮರದ ಅಣಬೆ ರೋಗ- ನಿಯಂತ್ರಣ.

ಇತ್ತೀಚೆಗೆ ಅಡಿಕೆ ಮರಗಳು ಅಣಬೆ ರೋಗ ಎಂಬ ಖಾಯಿಲೆ ಯಿಂದಾಗಿ ಕಾಂಡದಲ್ಲಿ ರಸ ಸೋರಲು ಪ್ರಾರಂಭವಾಗಿ ನಿಧಾನವಾಗಿ ಮರದ ಗರಿ ಹಳದಿಯಾಗುತ್ತಾ ಕಾಂಡದ ಬುಡ ಭಾಗದಲ್ಲಿ ಅಣಬೆ ಬೆಳೆದು ಮರ ಸಾಯುತ್ತಿದೆ. ಇದು ಒಂದು ಶಿಲೀಂದ್ರ ಸೋಂಕು ಆಗಿದ್ದು, ಇದು ಹರಡುತ್ತದೆ. ಇಂತಹ ಚಿನ್ಹೆ ಕಂಡು ಬಂದಾಗ ಮೊದಲ ಹಂತದಲ್ಲಿ ಉಪಚಾರ  ಮಾಡಬೇಕು. ತಡವಾದರೆ ಪ್ರಯೋಜನ ಇಲ್ಲ. ಯಾವುದೇ ಒಂದು ಮರದಲ್ಲಿ ಅಣಬೆ ಬೆಳೆಯಬೇಕಾದರೆ ಅದರ ಅಂಗಾಂಶ ಸತ್ತಿರಬೇಕು. ಅಣಬೆ ಬೆಳೆಯುವುದು ಸೆಕೆಂಡರಿ( ದ್ವಿತೀಯ ಹಂತದ ಹಾನಿ)….

Read more
ಸಿಂಗಾರ ತಿನ್ನುವ ಹುಳ ಮುಟ್ಟಿದ ಹೂ ಗೊಂಚಲು

ಅಡಿಕೆ – ಹೂ ಗೊಂಚಲು ಒಣಗಲು ಯಾವ ಕೀಟ ಕಾರಣ ಮತ್ತು ಪರಿಹಾರ ಏನು?.

ಶುಷ್ಕ ವಾತಾವರಣದ ವ್ಯತ್ಯಾಸವೋ ಏನೋ , ಈಗೀಗ ಅಡಿಕೆ -ಹೂ ಗೊಂಚಲು ಬಹಳ ಪ್ರಮಾಣದಲ್ಲಿ  ಒಣಗಿ ಹಾಳಾಗುತ್ತಿದೆ. ಒಂದು ಕಾಲದಲ್ಲಿ  ಮೈನರ್ ಪೆಸ್ಟ್ ಆಗಿದ್ದ ಈ ಕೀಟ, (ಹುಳ) ಈಗ ಮೇಜರ್ ಪೆಸ್ಟ್ ಆಗುತ್ತಿದೆ. ಇತ್ತೀಚೆಗೆ ಎಲ್ಲಾ ಅಡಿಕೆ ಬೆಳೆಗಾರರಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಅಪಾರ ಬೆಳೆ ನಷ್ಟ ಉಂಟಾಗುತ್ತಿದೆ. ಮಳೆಗಾಲ ಕಳೆದ ತಕ್ಷಣ ಅಡಿಕೆ ಮರದಲ್ಲಿ ಗೊಂಚಲು ಬಿಡಲು ಪ್ರಾರಂಭವಾಗುತ್ತದೆ. ಹೊಸತಾಗಿ ಬರುವ ಬಹುತೇಕ ಹೂ ಗೊಂಚಲುಗಳಲ್ಲಿ ಈ ಹುಳದ  ಬಾಧೆ ಇದೆ. ಮಳೆಗಾಲದಲ್ಲಿ ಸಂಖ್ಯಾಭಿವೃದ್ದಿಯಾದ ಕೀಟ ಅಡಿಕೆಯಲ್ಲಿ…

Read more
ಒಣಗುತ್ತಿರುವ ಚಿನ್ನ- ರಾಶಿ ಅಡಿಕೆ

ಅಡಿಕೆ ಧಾರಣೆ ಏರಿಕೆಯಾಗುತ್ತಿರುವಾಗ ಬೆಳೆಗಾರರ ನಡೆ ಹೇಗಿರಬೇಕು?

 ಒಂದು ವಾರದ ಅವಧಿಯಲ್ಲಿ ನಾಗಾಲೋಟದಲ್ಲಿ ಏರಿಕೆಯಾಗುತ್ತಿರುವ ಕೆಂಪಡಿಕೆ ಧಾರಣೆ, ಚಾಲೀ ಧಾರಣೆಯಿಂದ ರೈತರಿಗೆ ಒಂದೆಡೆ ಖುಷಿ ಮತ್ತೊಂದೆಡೆ ಆತಂಕ. ಕಡಿಮೆ ಬೆಲೆಗೆ ಕೊಟ್ಟೆ ಎಂಬ ಪಶ್ಚಾತ್ತಾಪ ಇಲ್ಲದೆ  ಉತ್ತಮ ದರ ಪಡೆಯುವ ತಂತ್ರ ಯಾವುದು? ಬೆಳೆಗಾರ ಅಡಿಕೆ ಮಾರಿದ ಮರುದಿನ ಬೆಲೆ ಏರಿಕೆಯಗುತ್ತದೆ. ಅಡಿಕೆ ನಾಳೆ ಮಾರೋಣ ಎಂದು ಇಟ್ಟರೆ ಮರುದಿನ ಬೆಲೆ ಇಳಿಕೆಯಾಗುತ್ತದೆ.  ಯಾರಿಗೂ ತಿಳಿಯದ ಈ ಮಾರುಕಟ್ಟೆ ಇಷ್ಟೊಂದು ಜಟಿಲವೇ?ಹೌದು. ಅಡಿಕೆ ಮಾರುಕಟ್ಟೆಯ  ಯಾವ ಲಯವನ್ನೂ ಕೆಲವೇ ಕೆಲವರನ್ನು ಬಿಟ್ಟು ಉಳಿದವರಿಗೆ ಅಂದಾಜು ಮಾಡುವುದು…

Read more
ಸಾವಯವ ಬೆಲ್ಲ

ಬೆಲ್ಲ – ಯಾವುದರಲ್ಲಿ ರಾಸಾಯನಿಕ ಇದೆ – ಇಲ್ಲ.

ನಾವೆಲ್ಲಾ ಅಂಗಡಿಯಿಂದ ಕೊಳ್ಳುವ ಆಕರ್ಷಕ ಹಳದಿ ಮಡಿ ಬಣ್ಣದ ಬೆಲ್ಲಕ್ಕೂ, ನೈಜ ಬೆಲ್ಲದ ಬಣ್ಣಕ್ಕೂ ಅಜಗಜಾಂತರ ವೆತ್ಯಾಸ ಇದ್ದು, ಅಂಗಡಿಯ ಈ ಬೆಲ್ಲದಲ್ಲಿ ಏನಿದೆ ಎಂಬುದನ್ನು ಆಹಾರ ಇಲಾಖೆ  ಪರಿಶೀಲಿಸುವುದು ಅಗತ್ಯ. ಆದರೂ ಕಡಿಮೆ ರಾಸಾಯನಿಕ ಬಳಸಿ ತಯಾರದ ಬೆಲ್ಲವನ್ನು ಗುರುತಿಸುವುದು ಕಷ್ಟವಲ್ಲ. ಬೆಲ್ಲ ಎಂಬುದು ಕಬ್ಬಿನ ರಸವನ್ನು ಕುದಿಸಿ ಅದರ ನೀರಿನ ಅಂಶವನ್ನು ತೆಗೆದು ಸಿಹಿ ಅಂಶವನ್ನು ಉಳಿಸಿ ಪಡೆಯುವ ವಸ್ತು. ಇದರ ನೈಜ ಸ್ಥಿತಿ ದ್ರವ ರೂಪ. ಇದನ್ನು ಗ್ರಾಹಕರ ಇಷ್ಟಕ್ಕೆ ಮತ್ತು ದಾಸ್ತಾನು,…

Read more
error: Content is protected !!