ಮದುವೆಯ ಸಂಧರ್ಭ

ಕೃಷಿಕರ ಮಕ್ಕಳಿಗೆ ಮದುವೆ ಭಾಗ್ಯ- ಯಾಕೆ ಕಷ್ಟವಾಗುತ್ತಿದೆ? ಪರಿಹಾರ ಏನು?

ಬಹಳ ಜನ ಯುವಕರಿಗೆ ಕೃಷಿ ವೃತ್ತಿಯೇ ಆಗಬಹುದು ಎಂಬ ಆಸೆ ಇದೆ. ಅದರೆ ನಮಗೆ ಹೆಣ್ಣು ಸಿಗದೆ ಮದುವೆ ಭಾಗ್ಯದಿಂದ ವಂಚಿತರಾದೇವೋ ಏನೋ ಎಂಬ ಆತಂಕದಿಂದ, ಬೇರೆ ಉದ್ಯೋಗವನ್ನೇ  ಹುಡುಕುತ್ತಿದ್ದಾರೆ.ವಾಸ್ತವಾಗಿ ಪರಿಸ್ಥಿತಿಯೂ ಹೀಗೇ ಇದೆ. ಬರೇ ಕೃಷಿಕರಿಗೆ ಮಾತ್ರವಲ್ಲ. ಸಮಾಜದಲ್ಲಿ ಯಾರಿಗೆ ಖಾತ್ರಿಯ ಸಂಪಾದನೆ ಮೂಲ ಇಲ್ಲವೋ,ಯಾರಿಗೆ ಮೈ ಕೈ ಕೊಳಕು ಆಗದ ಬಿಳಿಕಾಲರಿನ ಉದ್ಯೋಗ ಇಲ್ಲವೋ, ಅವರಿಗೆಲ್ಲಾ ಈಗ ಮದುವೆಯೆಂಬ ಜೀವನದ ಅತ್ಯಂತ ಪ್ರಮುಖ ಘಟ್ಟ ಅನಿಶ್ಚಿತ. ಸರಕಾರಿ ಉದ್ಯೋಗ, ಸಾಪ್ಟ್ವೇರ್ ಮಂತಾದ ಅಧಿಕ ಸಂಪಾದನೆಯ…

Read more
ಸಾವಯವ ಕೃಷಿಕ -Organic farmer -

ಸಾವಯವ ಬೇಸಾಯ ರಾಷ್ಟ್ರೀಯ ನಷ್ಟಕ್ಕೆ ಒಂದು ಕೊಡುಗೆಯೇ?.

ಬಹಳ ಜನ ಸಾವಯವ ಬೇಸಾಯ ಕ್ರಮವನ್ನು ತಮ್ಮ ಮೈಮೇಲೆ ಎಳೆದುಕೊಂಡವರಂತೆ ವರ್ತಿಸುತ್ತಾರೆ. ಇವರಲ್ಲಿ ಗರಿಷ್ಟ ಜನ ರಜಾ ಕಾಲದ ಕೃಷಿಕರು. ಮತ್ತೆ ಕೆಲವರು ಕಾಟಾಚಾರಕ್ಕೆ ಕೃಷಿ ಮಾಡುವವರು. ನಾನು ಸುಮಾರು 20 ವರ್ಷಕ್ಕೆ ಹಿಂದೆ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಸಾಲದ ಹಣ. ಭೂಮಿಯ ಬೆಲೆ ಆಗಲೇ ದುಬಾರಿಯಾಗಿತ್ತು. ನನಗೆ ಭೂಮಿಗೆ ಹಾಕಿದ ಹಣ , ನನ್ನ ಬೇಸಾಯದ ಖರ್ಚನ್ನು ಹಿಂಪಡೆಯುವ ಬಯಕೆ ಸಹಜವಾಗಿ ಎಲ್ಲರಿಗೂ ಇದ್ದಂತೆ ಇತ್ತು. ನಾನು ಸಾವಯವ ಕೃಷಿ ಎಂದು ಅದರ…

Read more

ನಮ್ಮ ಕೃಷಿ ವ್ಯವಸ್ಥೆಯಲ್ಲಿ ಮಹಾನ್ ಸಂಚಲನ ಇದರಿಂದ ಮಾತ್ರ ಸಾಧ್ಯ.

ತಜ್ಞರು ಕ್ಷೇತ್ರ  ಜ್ಞಾನ ಇಲ್ಲದೆ ಏನೋನೋ ಸುಧಾರಣೆಗಳನ್ನು ಸರಕಾರಕ್ಕೆ ಶಿಫಾರಸು ಮಾಡುತ್ತಾರೆ. ಇದು ಕೃಷಿಕರ ಬದುಕನ್ನು ಉತ್ತಮಪಡಿವುದು ಅಷ್ಟಕ್ಕಷ್ಟೇ. ನಿಜವಾಗಿ ಮೂಲಭೂತ ಅಗತ್ಯ ಬೇರೆಯೇ ಇದೆ. ಭಾರತ ದೇಶದ ರೈತ ತನ್ನ ಜೀವಮಾನದಲ್ಲಿ  ನೆಮ್ಮದಿಯ ಜೀವನವನ್ನು ಕಳೆಯುವುದು ಬರೇ ಮಕ್ಕಳಾಟಿಕೆಯ ವಯಸ್ಸಿನಲ್ಲಿ ಮಾತ್ರ. ಜವಾಬ್ಧಾರಿ ಬಂದ ನಂತರ ತನ್ನ ಕೊನೇ ಉಸಿರಿನ ತನಕವೂ ರೈತ ನೆಮ್ಮದಿಯ ಜೀವನ ನಡೆಸಲಾರ. ಒಂದಿಲ್ಲೊಂದು ತಲೆಬಿಸಿಯಲ್ಲೇ (Tension)ಅವನು ಅಲ್ಪಾಯುಷಿಯಾಗಿ ಅಂತ್ಯವನ್ನು ಕಾಣುತ್ತಾನೆ. ವ್ಯಕ್ತಿಯೊಬ್ಬನಿಗೆ ಬದುಕುವ ಹಕ್ಕು ಇರುವಾಗ ನೆಮ್ಮದಿಯ ಬದುಕಿಗೆ ಬೇಕಾಗುವ…

Read more
Farmer harvesting the watermelon

ರೈತರೇ ಹೆಚ್ಚು ಬೆಳೆಸಲು ಹೋಗದಿರಿ- ಪರಿಸ್ಥಿತಿ ಸರಿಯಾಗಿಲ್ಲ…

ಹಿರಿಯರು ಒಂದು ಮಾತು ಹೇಳುತ್ತಾರೆ, ನಿಮ್ಮ ತಲೆಗೆ ನಿಮ್ಮದೇ ಕೈ ಎಂದು. ನಾವು ಬದುಕಲು ನಾವೇ ದುಡಿಯಬೇಕು. ಇದು ಸರಿ ಎಲ್ಲಾ ಕ್ಷೇತ್ರಗಳಲ್ಲೂ ಹೀಗೇನೇ. ಆದರೆ ಕೃಷಿ ಕ್ಷೇತ್ರ ಇದಕ್ಕಿಂತ ಭಿನ್ನ. ಇಲ್ಲಿ ನಾವು ಎಷ್ಟೂ ದುಡಿಯಬಹುದು. ಆದರೆ ಆ ದುಡಿಮೆಗೆ  ಪ್ರತಿಫಲ ಕೊಡುವವರು ಬೇರೆಯವರು. ಇದರಿಂದಾಗಿ ಕೃಷಿ ಕ್ಷೇತ್ರ ಇನ್ನು ಕೆಲವು ವರ್ಷ ಕಾಲ ಮಂಕಾಡೆ ಮಲಗುವ ಸಾಧ್ಯತೆ ಇದೆ. ಕೊರೋನಾ ಉಳಿದೆಲ್ಲಾ ಕ್ಷೇತ್ರಗಳನ್ನು ಬಾದಿಸಿದ್ದು, ಅತ್ಯಲ್ಪ. ಒಂದು ಉದ್ದಿಮೆ ಉತ್ಪಾದನೆ ಮಾಡದಿದ್ದರೆ, ಏನೂ ಆಗುವುದಿಲ್ಲ….

Read more
ಹೂ ಬೆಳೆದವರಿಗೂ ನಷ್ಟ ಮಾರುವವರಿಗೂ ನಷ್ಟ

ಕೃಷಿ ಕ್ಷೇತ್ರವನ್ನು ಬಗ್ಗು ಬಡಿಯಲಿದೆ ಕೊರೋನಾ ಮಹಾಮಾರಿ.

ಈಗಾಗಾಲೇ ಹಣ್ಣು ಹಂಪಲು, ಹೂವು, ತರಕಾರಿ ಬೆಳೆದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯವೇ ಹಾಲಿಗೆ ಬೇಡಿಕೆ ಕಡಿಮೆಯಾದ ಕಾರಣ ಹಾಲಿನ ಬೆಲೆಯೂ ಇಳಿಮುಖವಾಗುವ ಸೂಚನೆ ಇದೆ. ನಷ್ಟ ಭರ್ತಿಗಾಗಿ ಮತ್ತೆ ಅದೇ ಬೆಳೆ ಬೆಳೆಯುವ ಬದಲು ಆಹಾರ ಬೆಳೆಗಳ ಕಡೆಗೆ ಗಮನಹರಿಸುವುದು ಉತ್ತಮ. ಪರಿಸ್ಥಿತಿ ಸುಧಾರಣೆಯಾದ ನಂತರ ಇಂತಹ ಬೆಳೆಗಳನ್ನು ಬೆಳೆಸುವುದು ಸೂಕ್ತ.  ಕೊರೋನಾ ಮಹಾಮಾರಿ ಪ್ರಾರಂಭವಾಗಿ 3 ತಿಂಗಳು ಕಳೆದಿದೆ ಅಷ್ಟೇ . ಈ ತನಕ ಕೆಲವು ಬೆಳೆಗಾರರಿಗೆ ನಷ್ಟವಾಯಿತು. ಅದು ಮುಗಿದ ಸುದ್ದಿಯಾಯಿತು….

Read more

ಕೃಷಿಗೆ ಎಲ್ಲವೂ ಇದೆ- ಅದರೆ ನಮಗಲ್ಲ.– ಎನ್ ಸಿ ಪಠೇಲ್.

ಸದ್ಯದ ಪರಿಸ್ಥಿತಿಯಲ್ಲಿ ಕೃಷಿಕರು ಅವರ ತಿಳುವಳಿಕೆಯ ಜ್ಞಾನದಲ್ಲೇ ಕೃಷಿ ಮಾಡುತ್ತಿದ್ದಾರೆ. ಸರಕಾರ ಕೋಟ್ಯಾಂತರ ರೂಪಾಯಿಗಳನ್ನು ಕೃಷಿ ಸಂಶೋಧನೆ ಮತ್ತು ವಿಸ್ತರಣೆಗೆ ಕೊಡುತ್ತಿದೆ. ಇದು ಎಲ್ಲಿಗೆ ಹೋಗುತ್ತದೆಯೋ ಗೊತ್ತಾಗುವುದಿಲ್ಲ. ಶ್ರೀಯುತ ನಾಗದಾಸನ ಹಳ್ಳಿಯ ಪ್ರಗತಿಪರ ಕೃಷಿಕ ಎನ್ ಸಿ ಪಠೇಲ್ ರವರು ವಯಸ್ಸಿನಲ್ಲಿ ಹಿರಿಯರು. ಜೊತೆಗೆ ಬಹಳ ಹಿರಿಯ ಕೃಷಿಕರು. 1990 ಇಸವಿಯಲ್ಲಿ  ಬೆಂಗಳೂರಿನ ಜಿಂದಾಲ್ ಕಂಪೆನಿಯ  ಆಸ್ಪತ್ರೆಯೊಂದರ ಉಧ್ಗಾಟನೆಗೆ ಬಂದಿದ್ದ, ಆಗಿನ ಉಪ ಪ್ರಧಾನಿ  ಶ್ರೀ ದೇವೀ ಲಾಲ್ ಇವರ ಹೊಲಕ್ಕೆ ಭೇಟಿಕೊಟ್ಟಿದ್ದರು. ಅಂದು ಸ್ಥಳದಲ್ಲೇ  ನಾವೆಲ್ಲಾ…

Read more

ವಿದ್ಯುತ್ ಶಕ್ತಿ ಕೊಟ್ಟರೆ ಕೃಷಿ ದೇಶಕ್ಕೆ ಅನ್ನ ಕೊಡುತ್ತದೆ.

ಒಬ್ಬನಿಗೆ ತಾನು  ಮಹಾಮಂತ್ರಿ ಆಗೇ ಬಿಟ್ಟೆ ಎಂಬ ಭ್ರಮೆ ಉಂಟಾಯಿತು. ತಕ್ಷಣ ವಿಧಾನ ಸೌಧದ ಒಳ ಹೋಗಿ ಮುಖ್ಯಮಂತ್ರಿ  ಆಸನದಲ್ಲಿ ಕುಳಿತು ತಕ್ಷಣ ಮಾಡಿದ್ದು, ರೈತರ  ಎಲ್ಲಾ ಸಾಲ ಮನ್ನಾ. ರೈತರ ಮೇಲಿನ ಮೊಕದ್ದಮೆ ವಜಾ. 24 ಗಂಟೆ ವಿದ್ಯುತ್, ರೈತರಿಗೆ ಪೆನ್ಶನ್. ಇದೆಲ್ಲಾ ಮಾಡಿದ್ದು ಬರೇ ಶಯನದ ಕನಸಿನಲ್ಲಿ. ಕನಸಿನಿಂದೇಳುವಾಗ ಮುಖ್ಯ ಮಂತ್ರಿಗಿರಿ ಅವರದ್ದಾಗಿರಲಿಲ್ಲ.   ಒಂದು ವೇಳೆ ಅದೇ ರಾಜಕಾರಣಿ ಮುಂದೆ ಮುಖ್ಯ ಮಂತ್ರಿಯೇ ಆದನೆಂದಿಟ್ಟುಕೊಳ್ಳೋಣ. ಆಗ ಈ ಹಿಂದೆ ಮಾಡಿದಂತೆ ಸಾಲಮನ್ನಾ ಮಾಡಲು ಮನಸ್ಸು…

Read more
ಬೆಳೆಗಳಿಗೆ ಹಾನಿ ಮಾಡುವ ಮಂಗ

ಮಂಗಗಳ ಹಾವಳಿ ಹೆಚ್ಚಾಗಲು ಕಾರಣ ಇದು.

ಪರಿಸರದಲ್ಲಿ ಯಾವುದು ಇದ್ದರೆ ಎಲ್ಲದಕ್ಕೂ ಒಳ್ಳೆಯದು ಎಂಬುದು ಪ್ರಕೃತಿಗೆ ಗೊತ್ತಿದೆ. ನಾವು ಪ್ರಕೃತಿಗೆ ಪಾಠ ಕಲಿಸಲು ಹೋಗಿ ಅದು ನಮಗೆ ಪಾಠ ಹೇಳಿದೆ. ತಿನ್ನಲು ಅಹಾರವಿಲ್ಲದೆ ಮಂಗಗಳು ತೋಟಕ್ಕೆ ಬಂದಿವೆ. ಇನ್ನಾದರೂ ಅಕೇಶಿಯಾ, ಮಹಾಘನಿ, ಮಾಂಜಿಯಂ ಮುಂತಾದ ಮರಮಟ್ಟು ಬೆಳೆಸುವುದನ್ನು ಬಿಟ್ಟು ಬಿಡಿ. ಈ ಮರಗಳಿದ್ದಲ್ಲಿ ಮಂಗಗಳಿಗೆ ಆಹಾರ ಇಲ್ಲ. ಅವು ನಮ್ಮತೋಟಕ್ಕೆ ಧಾಳಿ ಮಾಡುತ್ತವೆ.  ಏನು ನಡೆಯುತ್ತಿದೆ: ಕೃಷಿಕರು ಬದುಕಿಗಾಗಿ ಕೃಷಿ ಮಾಡುವವರು. ಅವರ ತಾಳ್ಮೆಗೂ ಒಂದು ಮಿತಿ ಇದೆ. ಇಗ ಮಾನವೀಯತೆಯನ್ನು ಬದಿಗಿಟ್ಟು ಕೃಷಿಕರು…

Read more
error: Content is protected !!