ಪೊಟ್ಯಾಶ್ ಗೊಬ್ಬರ ಯಾಕೆ ಸಿಗುತ್ತಿಲ್ಲ. ಕಾರಣ ಏನು ಗೊತ್ತೇ?
ಎಲ್ಲಾ ಬೆಳೆಗಳಿಗೂ ಈ ಸಮಯದಲ್ಲಿ ಅಗತ್ಯವಾಗಿ ಬೇಕಾಗುವ ಮ್ಯುರೇಟ್ ಆಫ್ ಪೊಟ್ಯಾಶ್ ಗೊಬ್ಬರ ಈಗ ಮಾರುಕಟ್ಟೆಯಲ್ಲಿ ಯಾಕೆ ಸಿಗುತ್ತಿಲ್ಲ ? ಕಾರಣ ಮತ್ತೇನೂ ಅಲ್ಲ. ವಿದೇಶದಿಂದ ತರಿಸಲು ಅವರು ಹಣ ಹೆಚ್ಚು ಕೇಳುತ್ತಿದ್ದಾರೆ. ಅವರ ದರವನ್ನು ಕೊಟ್ಟು ಖರೀದಿಸಿದರೆ ಇಲ್ಲಿ ಈಗಿನ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾಟ ಮಾಡಬೇಕಾಗುತ್ತದೆಯಂತೆ. ಹಾಗಾಗಿ ಪೊಟ್ಯಾಶ್ ಮುಂದಿನ ವಾರ ಬರುತ್ತದೆ ಎನ್ನುತ್ತಾ ಈಗಾಲೇ ಒಂದು ತಿಂಗಳು ಮುಂದೂಡಿ ಆಗಿದೆ. ಇನ್ನೆಷ್ಟು ಕಾಯಬೇಕೊ ತಿಳಿಯದು. ಮ್ಯುರೇಟ್ ಅಫ್ ಪೊಟ್ಯಾಶ್ ಗೊಬ್ಬರ ಕೆನಡಾ, ರಶಿಯಾ,…
