ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯನ್ನೂ ಮೇಲೆತ್ತಬಹುದು!

ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯೂ ಮೇಲೆ.

ಬಹಳ ಸಮಯದ ತನಕ ಅಲ್ಲಾಡದೆ ಅಸ್ಥಿರವಾಗಿದ್ದ ಕೆಂಪಡಿಕೆ ಧಾರಣೆ ಜೂನ್ ಎರಡನೇ ವಾರ ಮತ್ತೆ ಚೇತರಿಕೆ ಕಾಣಲಾರಂಭಿಸಿದೆ. ಪ್ರತೀ ವರ್ಷದ ಮಾರುಕಟ್ಟೆ ಲಯವನ್ನು ಗಮನಿಸಿದರೆ ಸಾಮಾನ್ಯವಾಗಿ ಜೂನ್ ತಿಂಗಳಿಗೆ ಏರಿಕೆ ಪ್ರಾರಂಭವಾಗುತ್ತದೆ. ನಿಧಾನವಾಗಿ ಏರುತ್ತಾ ಆಗಸ್ಟ್ ಸಪ್ಟೆಂಬರ್ ತಿಂಗಳಿಗೆ ಮತ್ತೆ ಹಿಮ್ಮುಖವಾಗುತ್ತದೆ. ಈ ವರ್ಷವೂ ಅದೇ ಆಗಿದೆ. ಕೆಂಪಡಿಕೆ ದರ ಏರಿದ ಪರಿಣಾಮ ಚಾಲಿ ದರ ಚೇತರಿಕೆ ಆಗಲಾರಂಭಿಸಿದೆ. ಕರಿಕೋಕಾ, ಪಟೋರಾ, ಉಳ್ಳಿಗಡ್ಡೆ ಸಹ ಏರಿಕೆ ಕಂಡಿದೆ. ಇಂದು ಖಾಸಗಿ ವ್ಯಾಪಾರಿಗಳು ಹೊಸ ಅಡಿಕೆ ರೂ.405-410 ಕ್ಕೆ…

Read more
ಮೇ -23 ರ ನಂತರ ಮಳೆ ಪ್ರಾರಂಭವಾಗಲಿದೆ

ಮೇ -23 ರ ನಂತರ ಮಳೆ ಪ್ರಾರಂಭವಾಗಲಿದೆ.

ಈ ವರ್ಷದ ಬರಗಾಲ ಪರಿಸ್ಥಿತಿ ಹೇಳತೀರದು. ಮೇ ತಿಂಗಳು ಬಂದರೂ ಬೇಸಿಗೆ ಮಳೆ (Summer rain)ಆಗಿಲ್ಲ. ಅಲ್ಲಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದರೂ ಬಹಳಷ್ಟು ಕಡೆ ತುಂತುರು ಮಳೆ ಮಾತ್ರ. ಕರಾವಳಿ, ಮಲೆನಾಡು ಬಿಸಿಲ ಬೇಗೆಯಲ್ಲಿ ತತ್ತರಿಸಿ ಹೋಗಿದೆ. ಜನ ಇಂದು ಮಳೆ ಬರಬಹುದು, ನಾಳೆ ಬರಬಹುದು ಎಂದು ಕಾಯುತ್ತಿದ್ದಾರೆ. ಮೋಡಗಳು ಬರುತ್ತವೆ, ಹಾಗೆಯೇ ಮಾಯವಾಗುತ್ತವೆ. ಹಾಗಾದರೆ ಮಳೆ ಯಾವಾಗ ಪ್ರಾರಂಭವಾಗಬಹುದು? ನವೆಂಬರ್ ತನಕ ಒಂದೊಂದು ಮಳೆಯಾಗುತ್ತಿತ್ತು. ಆ ನಂತರ ಹೋದದ್ದು ಮತ್ತೆ ಬರಲೇ ಇಲ್ಲ. ಎಲ್ಲೆಂದರಲ್ಲಿ ನೀರಿನ…

Read more
ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ನಮ್ಮೆಲ್ಲರ ಚಿತ್ತ ಈಗ ಅಡಿಕೆ ಧಾರಣೆಯ ಏರಿಳಿತದ ಮೇಲೆ. ಈ ವರ್ಷದ ಹವಾಮಾನ ಮತ್ತು ಮುಂದಿನ ವರ್ಷದ ರಾಜಕೀಯ ವಿಧ್ಯಮಾನಗಳ ಕೃಪೆಯಿಂದ ಅಡಿಕೆಗೆ ಬೆಲೆ ಏರುವ ಸೂಚನೆಯೇ ಹೆಚ್ಚಾಗಿ ಕಾಣಿಸುತ್ತಿದೆ. ಈಗಾಗಲೇ ರಾಜ್ಯ ಚುನಾವಣೆಯ ಕಾವು ಮುಗಿದಿದೆ. ರಾಜ್ಯದಲ್ಲಿ ಅಧಿಕಾರ ನಡೆಸುವ ಪಕ್ಷ ಬದಲಾಗಿದೆ. ಯಾವುದೇ ಪಕ್ಷವಾದರೂ ರೈತರಿಗೆ ತೊಂದರೆ ಮಾಡಲಾರರು. ಹಣ, ಸ್ವತ್ತು ಯಾವುದೇ ವಸ್ತು ಸಾಗಾಣಿಕೆಗೆ ಇರುವ ಅಡ್ಡಿ ಆತಂಕಗಳು ದೂರವಾಗಿವೆ. ಇದೇ ಕಾರಣದಿಂದ ಧಾರಣೆ ಏರಲು ಪ್ರಾರಂಭವಾಗಿದೆ.ಅಡಿಕೆ ಧಾರಣೆ ಏರಿಕೆಯಾಗಬೇಕೇ? ಹಾಗಾದರೆ ಅದಕ್ಕೆ…

Read more
ಮೊದಲ ಮಳೆಯ ಈ ಕೆನ್ನೀರು ಅಸಾಧಾರಣ ಶಕ್ತಿ ಹೊಂದಿದೆ

ಮೊದಲ ಮಳೆಯ ನೀರಿಗಿದೆ ಅಪರಿಮಿತ ಪೋಷಕ ಶಕ್ತಿ.

ಮೊದಲ ಮಳೆ ಬಂದರೆ ಸಾಕು, ಎಲ್ಲಾ ತರಹದ ಬೀಜಗಳು ಹುಟ್ಟುತ್ತವೆ. ಹುಲ್ಲು ಸಸ್ಯಗಳು ಒಂದೇ ಸಮನೆ ಬೆಳೆಯುತ್ತವೆ. ನೀರಾವರಿಯಲ್ಲಿ ದೊರೆಯದ ಫಲಿತಾಂಶ ಮೊದಲ ಮಳೆ ಸಿಂಚನದಲ್ಲಿ  ದೊರೆಯುತ್ತದೆ. ಆದ ಕಾರಣ  ಮೊದಲ ಮಳೆಯ ನೀರಿನಲ್ಲಿ ಅಗಾಧ ಶಕ್ತಿ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಮೊದಲ ಮಳೆ ಬಂದ ತಕ್ಷಣ ಸಸ್ಯಗಳಿಗೆ ಬೇಸಿಗೆಯ ಬೇಗೆಗೆ ಸಹಜವಾಗಿ ಬರುವ ಹೇನು ತರಹದ ಕಿಟಗಳು ತಕ್ಷಣ ಕಣ್ಮರೆಯಾಗುತ್ತದೆ. ಮಣ್ಣಿನಲಿ ಒಂದು ವಾಸನೆ ಉಂಟಾಗುತ್ತದೆ. ಇದು ಮಣ್ಣಿನಲ್ಲಿರುವ ಜೀವಿಯಾದ ಆಕ್ಟಿನೋಮೈಸಿಟ್ಸ್  ಗಳು…

Read more
ಬೆದರು ಬೊಂಬೆಯ ಮೂಲಕ ಬೆಳೆ ರಕ್ಷಣೆ

ಬೆದರು ಬೊಂಬೆ – ದೃಷ್ಟಿ ಬೊಂಬೆಗಳಿಂದ ಕೃಷಿಗೆ ಲಾಭ ಏನು?

ವಿಜ್ಜಾನ ಕೆಲವೊಂದು ಆಚರಣೆಗಳಿಗೆ ಬೆಲೆ ಕೊಡುವುದಿಲ್ಲ. ವೈದ್ಯಕೀಯದಲ್ಲಿ ಅಗೋಚರ ಶಕ್ತಿಗೆ ಬೆಲೆ ಇಲ್ಲ. ಆದರೆ, ಶಸ್ತ್ರ  ಚಿಕಿತ್ಸೆ ಮಾಡುವ ವೈದ್ಯರು ಕೊನೆಗೆ ಎಲ್ಲಾ ಭಾರವನ್ನೂ ದೇವರ ಮೇಲೆಯೇ  ಹಾಕಿಕೊಳ್ಳಿ ಎಂದು ನಮ್ಮನ್ನು ಸಂತೈಸುತ್ತಾರೆ. ಹೀಗಿರುವಾಗ  ನಂಬುವಂತದ್ದಲ್ಲ ಎಂದು ಯವುದನ್ನೂ ಬದಿಗಿಡುವಂತಿಲ್ಲ.  ಫಲ ಕೊಡಲಿ, ಕೊಡದಿರಲಿ  ನಂಬಿಕೆ ಇಟ್ಟರೆ ನಷ್ಟ ಏನೂ ಇಲ್ಲ. ಸಾಂಪ್ರದಾಯಿಕ ಬೆಳೆ ರಕ್ಷಣೆ: ರೈತರು ತಾವು ಬೆಳೆಯುವ ಬೆಳೆಯನ್ನು ರಕ್ಷಿಸಿಕೊಳ್ಳಲು ಕೆಲವು ಸಾಂಪ್ರದಾಯಿಕ ವಿಧಾನಗಳನ್ನು ಬಹಳ  ಹಿಂದಿನಿಂದಲೂ  ಅನುಸರಿಸುತ್ತಾ ಬಂದಿದ್ದಾರೆ. ಇದನ್ನು ಜನಪದ  ಆಚರಣೆ ಎಂದು…

Read more
ಅಡಿಕೆ ಮಾರುಕಟ್ಟೆ ಕೆಲವೇ ದಿನಗಳಲ್ಲಿ ತೇಜಿಯಾಗಲಿದೆ.

ಅಡಿಕೆ ಮಾರುಕಟ್ಟೆ  ಕೆಲವೇ ದಿನಗಳಲ್ಲಿ ತೇಜಿಯಾಗಲಿದೆ.

ಅಡಿಕೆ ಅಥವಾ ಇನ್ಯಾವುದೇ ಮಾರುಕಟ್ಟೆ ಯಾವಾಗ  ತೇಜಿಯಾಗುತ್ತದೆ, ಯಾವಾಗ ಮಂದಿಯಾಗುತ್ತದೆ ಎಂದು ಯಾರೂ ಊಹಿಸಲೂ ಸಾಧ್ಯವಾಗಲಾರದು.  ಮಾರುಕಟ್ಟೆ ವ್ಯವಹಾರದಲ್ಲಿರುವವರ ಲೆಕ್ಕಾಚಾರಗಳೇ ಬೇರೆ, ಕೃಷಿಕರ ಊಹನೆಯೇ ಬೇರೆ. ಇವಕ್ಕೆರಡಕ್ಕೂ ಹೊಂದಾಣಿಕೆ ಆಗುವುದು ತುಂಬಾ ಕಷ್ಟ. ಈ ವರ್ಷ ನಮ್ಮ ರಾಜ್ಯದಲ್ಲಿ ಚುನಾವಣೆ ಇದ್ದರೂ ಸಹ ದರ ಎರುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಇದರ ಸೂಚನೆ ದೊರೆತಿದೆ. ಕಳೆದ ಒಂದು ವಾರದಿಂದ ಕೆಂಪಡಿಕೆ ಮಾರುಕಟ್ಟೆ ಮಲಗಿದ್ದುದು ಎದ್ದು  ನಿಂತಿದೆ. ಈ ಹಿಂದೆ ಎರಡು ತಿಂಗಳುಗಳ ಕಾಲ ಮಾರುಕಟ್ಟೆಯಲ್ಲಿ ಖರೀದಿದಾರರ…

Read more
ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ

ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ.

ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ತಲ್ಲಣಿಕೆ ಉಂಟಾಗಿದ್ದು, ವ್ಯಾಪಾರಿಗಳಿಗೇ ಅಂಜಿಕೆ ಹುಟ್ಟಿದೆ. ಎಲ್ಲಾ ಅಡಿಕೆ ವರ್ತಕರಿಗೂ ಮುಂದೇನಾಗುವುದೋ ಎಂಬ ಚಿಂತೆ ಉಂಟಾಗಿದೆ. ಇರುವ ದಾಸ್ತಾನನ್ನು ಹೇಗಾದರೂ ವಿಲೇವಾರಿ ಮಾಡುವ ಚಿಂತೆಯಲ್ಲಿದ್ದಾರೆ. ಖರೀದಿದಾರರು ಭಾರೀ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧಾರಣೆ ಕುಸಿತವೂ ಆಗಬಹುದು. ಹೀಗೆಯೇ ಮುಂದುವರಿಯಲೂ ಬಹುದು.   ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಚೋಲ್ ಅಡಿಕೆ ಬೇಡ ಎಂಬ ಸ್ಥಿತಿ ಉಂಟಾಗಿ ಅಘೋಷಿತ ದರ ಕುಸಿತ ಉಂಟಾಗಿದೆ. ಖರೀದಿದಾರರಲ್ಲಿ ಭಾರೀ ಪ್ರಮಾಣದ ಸ್ಟಾಕು ಇದೆ ಎಂಬ ವರ್ತಮಾನ ಇದೆ….

Read more
ಚಳಿ ಇಳಿಮುಖ – ರಾಶಿ - ಚಾಲಿ 50,000!

ಉತ್ತರ ಭಾರತದ ಚಳಿ – ರಾಶಿ 50,000!- ಚಾಲಿ ಅನುಮಾನ.

ಉತ್ತರ ಭಾರತದಲ್ಲಿ ಚಳಿ ಹೆಚ್ಚಾದಾಗ ಸಂಸ್ಕರಣಾ ಉದ್ದಿಮೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯದ ಕಾರಣ ರಾಶಿ ಮತ್ತು ಚಾಲಿ ಎರಡಕ್ಕೂ ಬೇಡಿಕೆ ಕಡಿಮೆಯಾಗಿತ್ತು. ಈಗ  ಚಳಿ ಕಡಿಮೆಯಾಗಲಿಲ್ಲವಾದರೂ ಕೆಂಪಡಿಕೆ ಮತ್ತೆ ಚೇತರಿಸಿಕೊಳ್ಳಲಾರಂಭಿಸಿದೆ. ಚಾಲಿ ಸ್ಟಾಕು ಹೆಚ್ಚು ಇರುವ ಕಾರಣ ತಕ್ಷಣಕ್ಕೆ ಅನುಮಾನ ಎನ್ನುತ್ತಾರೆ. ಚಳಿ ಇದ್ದರೂ ಅಡಿಕೆಗೆ ಮತ್ತೆ ಬೇಡಿಕೆ ಪ್ರಾರಂಭವಾಗಿದೆ. ಬೆಲೆ ಚೇತರಿಕೆಯ  ಹಾದಿಯಲ್ಲಿದೆ. ಗುಟ್ಕಾ ಇತ್ಯಾದಿ ಅಡಿಕೆ ಸೇರಿಸಿದ ಉತ್ಪನ್ನ ತಯಾರಿಸುವಾಗ ಅವು ತೇವಾಂಶ ಎಳೆದುಕೊಳ್ಳಬಾರದು.  ವಿಶೇಷ ಚಳಿ, ಇಬ್ಬನಿ ಇದ್ದಾಗ ಅವುಗಳ ಸಂಸ್ಕರಣೆಗೆ…

Read more
ವ್ಯಾಕ್ಯೂಮ್ ಪ್ಯಾಕ್ ನಲ್ಲಿ ಕೃಷಿ ಉತ್ಪನ್ನಗಳು

ಕೃಷಿ ಉತ್ಪನ್ನಗಳ ರಕ್ಷಕ- ವ್ಯಾಕ್ಯೂಮ್ ಪ್ಯಾಕಿಂಗ್.

ಹಾಳಾಗುವ ಕೃಷಿ ಉತ್ಪನ್ನಗಳನ್ನು ರಕ್ಷಿಸಲು  ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ದೊರೆಯುವಂತೆ ಮಾಡಲು  ವ್ಯಾಕ್ಯೂಮ್ (ನಿರ್ವಾತ) ಪ್ಯಾಕಿಂಗ್ ವ್ಯವಸ್ಥೆ ಎಂಬುದು ಅತೀ ಸೂಕ್ತ. ಇಲ್ಲಿ ದೊಡ್ಡ ಗಾತ್ರದ ಸಾಮಾನುಗಳು ಒತ್ತಲ್ಪಟ್ಟು  ಹದ ಗಾತ್ರಕ್ಕೆ ಬರುತ್ತವೆ. ಸ್ವಚ್ಚತೆ ಮತ್ತು ಆರೋಗ್ಯದ ದೃಷ್ಟಿಯಿಂದ ಇದು ಅತೀ ಅಗತ್ಯ. ಮಾರುಕಟ್ಟೆಯಿಂದ ತರುವ ಬಹಳಷ್ಟು ದಿನಸಿ ಸಾಮಗ್ರಿಗಳು ಅಂಗಡಿಯಿಂದ ತಂದು ಮನೆಯಲ್ಲಿ ಎರಡು ದಿನ ಇಟ್ಟು ಮತ್ತೆ ತೂಕ ಮಾಡಿದರೆ 50-100  ಗ್ರಾಂ ಕಡಿಮೆಯೇ. ಇನ್ನು ಜೀರಿಗೆಯು ಓಮದ ವಾಸನೆಯನ್ನೂ, ಮೆಣಸು ಸಾಬೂನಿನ ವಾಸನೆಯನ್ನೂ…

Read more
ಅಡಿಕೆ ಕ್ರಯ ಏರಲಿದೆ- ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ

ಅಡಿಕೆ ಕ್ರಯ ಏರಲಿದೆ-  ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ.

ಯಾವ ಲೆಕ್ಕಾಚಾರಕ್ಕೂ ಸಿಗದ ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆಯತ್ತ ಮುಖಮಾಡಿದೆ. ಸಾಮಾನ್ಯವಾಗಿ ವಸ್ತುವೊಂದರ ಬೆಲೆ ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಭಿಸಿ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಆದರೆ ಅಡಿಕೆ ಹಾಗಿಲ್ಲ. ಬೆಳೆ ಹೆಚ್ಚಾದರೂ ಬೆಲೆ ಏರಬಹುದು. ಬೆಳೆ ಕಡಿಮೆಯಾದರೂ ಬೆಲೆ ಏರದೆ ಇರಬಹುದು. ಇದೆಲ್ಲಾ ಅಡಿಕೆ ಮಾರುಕಟ್ಟೆಯಲ್ಲಿ ಯಾವಾಗಲೂ ನಡೆಯುತ್ತಿರುವಂತದ್ದು.ವರ್ಷದುದ್ದಕ್ಕೂ ಗುಟ್ಕಾ ಫ್ಯಾಕ್ಟರಿ ನಡೆಯುತ್ತಿರುತ್ತದೆ. ಗುಟ್ಕಾ ತಿನ್ನುವವರು, ಪಾನ್ ತಿನ್ನುವವರು ಅದಕ್ಕೆ ರಜೆ / ವಿರಾಮ ಕೊಡುವ ಕ್ರಮವೇ ಇಲ್ಲ. ಆದರೂ  ಬೆಲೆ ಮಾತ್ರ ಒಮ್ಮೊಮ್ಮೆ ಏರುತ್ತಾ ಹೋಗುತ್ತದೆ….

Read more
error: Content is protected !!