ಕೆಂಫು ಅಡಿಕೆ 11

16/17-10-2021 ಶನಿವಾರ ಮತ್ತು ಭಾನುವಾರದ ಅಡಿಕೆ ಧಾರಣೆ.

ಶನಿವಾರ 16/17-10-2021 ವಿಜಯದಶಮಿ ಹಬ್ಬದ  ಮರುದಿನದ ಮಾರುಕಟ್ಟೆ ಹೆಸರಿಗೆ ಮಾತ್ರ ಎನ್ನಬಹುದು. ಈ ದಿನ ಅಡಿಕೆ ತರುವವರು ತುಂಬಾ ಕಡಿಮೆ. ಬಂರುವ ಅಡಿಕೆಗೆ ಟೆಂಡರ್ ನಡೆಯುತ್ತದೆ. ಅಂತಹ ಯಾವ ದರ ವ್ಯತ್ಯಾಸಗಳು ಈ ದಿನ ಆಗುವುದು ಕಡಿಮೆ. ಭಾನುವಾರ ತೀರ್ಥಹಳ್ಳಿ, ಕೊಪ್ಪ ಮುಂತಾದ ಕಡೆ ಮಾರುಕಟ್ಟೆ ಇರುತ್ತದೆ. ತೀರ್ಥಹಳ್ಳಿಯಲ್ಲೂ ಮಾರುಕಟ್ಟೆ ಯಾವ ಬದಲಾವಣೆಯೂ ಇರಲಿಲ್ಲ. ಈ ವಾರ ಮಾರುಕಟ್ಟೆಯಲ್ಲಿ ಯಾವ ಸ್ಥಿತಿ ನಿಲ್ಲುತ್ತದೆ ಎಂಬುದು ನೋಡಲಿಕ್ಕೆ ಇರುವಂತದ್ದು.  ಮುಂದೆ  ದೀಪಾವಳಿ ಬರಲಿದೆ. ಈಗಾಗಲೇ ಕರ್ನಾಟಕದ ಅಡಿಕೆ ಬೆಳೆಯುವ…

Read more
ಮ್ಯುರೇಟ್ ಆಫ್ ಪೊಟ್ಯಾಶ್ ಎಲ್ಲಾ ಕಡೆ ಸಿಗುವಂತದ್ದು

ಪೊಟ್ಯಾಶ್ ಇಲ್ಲವೇ? ಚಿಂತಿಸಬೇಡಿ. ಪೊಟ್ಯಾಶ್ ಇಲ್ಲದೆಯೂ ಬೆಳೆ ತೆಗೆಯಬಹುದು!

ಮಾರುಕಟ್ಟೆಯಲ್ಲಿ ಪೊಟ್ಯಾಶ್ ಇಲ್ಲ ಎಂದು ಕಾಳಸಂತೆಯಲ್ಲಿ ಸಿಗುವ ಪೊಟ್ಯಾಶ್ ಖರೀದಿಗೆ ಹೋಗಬೇಡಿ. ಪೊಟ್ಯಾಶ್ ಗೊಬ್ಬರ ಶಾಶ್ವತವಾಗಿ  ಲಭ್ಯವಿಲ್ಲ ಎಂದು ಯಾರೂ ಹೇಳಿಲ್ಲ. ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಬರಲಿದೆ. ಆ ತನಕ ರೈತರು ಪೊಟ್ಯಾಶ್ ಗಾಗಿ ಏನು ಮಾಡಬೇಕು ಇಲ್ಲಿದೆ ಮಾಹಿತಿ. ಸಸ್ಯಗಳಿಗೆ ಬೆಳವಣಿಗೆಯ ವಿವಿಧ ಹಂತಕ್ಕನುಗುಣವಾಗಿ ಪೊಟ್ಯಾಶಿಯಂ ಸತ್ವ ಬೇಕಾಗುತ್ತದೆ. ಪೊಟ್ಯಾಶ್ ಬರೇ ಮ್ಯುರೇಟ್ ಆಫ್ ಪೊಟ್ಯಾಶ್ ನಲ್ಲಿ ಮಾತ್ರ ಇರುವುದಲ್ಲ. ಬೇರೆ ಗೊಬ್ಬರಗಳಲ್ಲೂ ಇದೆ. ಹೆಚ್ಚಾಗಿ ನಾವು ಬೆಳೆಗಳಿಗೆ  ಬಳಸುವ ಪೊಟ್ಯಾಶ್ ಗೊಬ್ಬರ…

Read more
ಬಾಟಲಿ, ಕ್ಯಾನುಗಳಲ್ಲಿ ಜೈವಿಕ ಗೊಬ್ಬರ

ಬಾಟಲಿ, ಕ್ಯಾನುಗಳ ಜೈವಿಕ ಗೊಬ್ಬರಗಳು ಮತ್ತು ಅದರ ಉಪಯುಕ್ತತೆ.

ಇತ್ತೀಚೆಗೆ ಸುಮಾರು 10 ವರ್ಷಗಳಾಗಿರಬಹುದು. ಬೇರೆ ಬೇರೆ ತಯಾರಕರು ಲೀಟರು ಬಾಟಲಿಗಳಲ್ಲಿ, 5 ಲೀ. ಕ್ಯಾನುಗಳಲ್ಲಿ ಜೈವಿಕ ಗೊಬ್ಬರ ತುಂಬಿಸಿ ಬೆಳೆ ಪೋಷಕ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾರಭಿಸಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಈ ವ್ಯವಹಾರ ಭಾರೀ ಚುರುಕಾಗಿದೆ.  ಜನ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಗೊಬ್ಬರ ಹಾಕಿ ಬೆಳೆ ಬರುವುದೇ ಆದರೆ ಯಾಕೆ ಬಳಸಿ ನೊಡಬಾರದು ಎಂದು ಎಲ್ಲರೂ ಒಂದೊಂದು ಪ್ರಯತ್ನ ಮಾಡುತ್ತಲೇ ಇದ್ದಾರೆ.  ಹಳೆ ಗಿರಾಕಿ ಹೋದಂತೆ ಹೊಸ ಹೊಸ ಗಿರಾಕಿಗಳು ಸಿಗುತ್ತಾ ಇದ್ದಾರೆ. ಬಾಟಲಿ ಗೊಬ್ಬರಗಳ…

Read more
ಇಂತಹ ಬಳ್ಳಿ ಬೆಟ್ಟರೆ 2 ವರ್ಷಕ್ಕೆ ಇಳುವರಿ

ಇಂತಹ ಬಳ್ಳಿ ನೆಟ್ಟರೆ 2 ವರ್ಷಕ್ಕೇ ಕರಿಮೆಣಸು ಇಳುವರಿ.

ಕರಿಮೆಣಸು ಬೆಳೆಸುವವರು ನೆಡಲು ಉಪಯೋಗಿಸುವ ಬಳ್ಳಿಯನ್ನು ಅವಲಂಭಿಸಿ ಬೇಗ ಇಳುವರಿ ಪಡೆಯಲು ಸಾಧ್ಯವಿದೆ. ಇದು ಹೇಗೆ ಎಂಬುದರ ಪೂರ್ಣ ಪರಿಚಯ  ಇಲ್ಲಿದೆ. ಕರಿಮೆಣಸು ನಾಟಿಮಾಡುವವರು  ಕೆಲವರು ನೇರವಾಗಿ ಬಳ್ಳಿ ತುಂಡುಗಳನ್ನು ನಾಟಿ ಮಾಡುತ್ತಾರೆ. ಕೆಲವರು ಬಳ್ಳಿಯನ್ನು ಪ್ಲಾಸ್ಟಿಕ್ ಕೊಟ್ಟೆಗೆ ಹಾಕಿ ಸಸಿ ಮಾಡಿ ನಾಟಿ ಮಾಡುತ್ತಾರೆ. ಇವೆಲ್ಲಾ ವಿಧಾನಗಳಲ್ಲಿ ಮೆಣಸಿನ ಬಳ್ಳಿ ಇಳುವರಿ ಪ್ರಾರಂಭವಾಗಲು 3 ವರ್ಷ ಬೇಕಾದರೆ ಈ ವಿಧಾನದಲ್ಲಿ ಮಾತ್ರ 1.5 ವರ್ಷಕ್ಕೇ ಇಳುವರಿ ಪ್ರಾರಂಭವಾಗುತ್ತದೆ. ಬುಡದಿಂದಲೇ ಇಳುವರಿ ಪ್ರಾರಂಭವಾಗಿ  ಉತ್ತಮ ಅಡ್ದ ಚಿಗುರುಗಳು…

Read more
ಟೆಂಡರ್ ನಲ್ಲಿ ಅಡಿಕೆ ಪ್ರದರ್ಶನ

12-10-2021 ರ ಅಡಿಕೆ, ಕರಿಮೆಣಸು,ಕೊಬ್ಬರಿ ಕಾಫೀ ಧಾರಣೆ.

ಕಳೆದ ಎರಡು ವಾರದಿಂದ ರಾಶಿ ಅಡಿಕೆ ಮತ್ತು ಚಾಲಿ ದರಗಳು ಇಳಿಮುಖ ಹಾದಿಯಲ್ಲಿ  ಸಾಗುತ್ತಿರುವ ಕಾರಣ, ಬೆಳೆಗಾರರು ಮಾರಾಟಕ್ಕೆ ಮುಂದಾಗಿದ್ದಾರೆ. ಸಹಜವಾಗಿ ಬೆಲೆ ಇಂದು 12-10-2021 ರಂದು ಇಳಿಕೆಯೇ. ಕರಿಮೆಣಸಿನ ಬೆಲೆ ಏರುವ ಕಾರಣ ಕೊಡುವವರು ಕಡಿಮೆ.ಬೆಳೆಗಾರರ ನಡೆಯ ಮೇಲೆ ಮಾತ್ರ ಬೆಲೆ ಸ್ಥಿತರೆ ಹಾಗೂ ಏರಿಕೆ ಆಗಲು ಸಾಧ್ಯ ಇದನ್ನು ಬೆಳೆಗಾರರು ಅರ್ಥ ಮಾಡಿಕೊಳ್ಳಬೇಕಾಗಿದೆ. ದರ ಇಳಿಕೆಯಾದ ತಕ್ಷಣ ಅಧಿಕ ಪ್ರಮಾಣದಲ್ಲಿ  ರೈತರು ಮಾರಾಟಕ್ಕೆ ಮುಂದಾಗುತ್ತಾರೆಯೋ  ತಿಳಿಯುತ್ತಿಲ್ಲ. ಯಾವ ಬೆಳೆಗಾರನಿಗೂ ಮಾರುಕಟ್ಟೆಯಲ್ಲಿ ಗರಿಷ್ಟ ಬೆಲೆ ಬಂದು…

Read more
ಟೆಂಡರ್ ಗೆ ಬಂದ ಅಡಿಕೆ

ಅಡಿಕೆ ಧಾರಣೆ ದಿನಾಂಕ: 11-10-2021.

ದಿನಾಂಕ 10-10-2021 ನೇ ಸೋಮವಾರ ಅಡಿಕೆ ಬೆಳೆಗಾರರಿಗೆ ಶುಭ ದಿನವಾಗಲಿಲ್ಲ. ದರ ಇಳಿಕೆಯ ಹಾದಿಯಲ್ಲೇ ಸಾಗಿದೆ. ಕರಿಮೆಣಸು ಮಾತ್ರ ಸ್ಥಿರವಾಗಿದೆ. ಕೊಬ್ಬರಿಯೂ ಇಳಿಕೆಯಾಗದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ರಾಜ್ಯದ ಎಲ್ಲಾ ಮಾರುಕಟ್ಟೆಗಳಲ್ಲಿ ಚಾಲಿ ಹಾಗೂ ಕೆಂಪಡಿಕೆ ಮಾರುಕಟ್ಟೆ ಕೆಳಮುಖ ಗತಿಯಲ್ಲಿ ಸಾಗಿದೆ. ಕಳೆದ ವಾರ ತೀರ್ಥಹಳ್ಳಿಯ ಮಾರುಕಟ್ಟೆಯಲ್ಲಿ  ವ್ಯವಹಾರ ಇಲ್ಲದ ಕಾರಣ ಅಲ್ಲಿನ ಬೆಲೆ ಹೇಗಿರುತ್ತದೆ ಎಂಬ ಕುತೂಹಲ ಇತ್ತು. ಅಲ್ಲಿಯೂ ದರ ಹಿಂದಿಗಿಂತ ಇಳಿಕೆಯೇ ಆಗಿದೆ. ಅಡಿಕೆ ಮಾರುಕಟ್ಟೆಯಲ್ಲಿ ಖರೀದಿಗೆ ಉತ್ಸಾಹ ಇದ್ದಿದ್ದರೆ, ತೀರ್ಥಹಳ್ಳಿ, ಕೊಪ್ಪ, ಶ್ರಿಂಗೇರಿ…

Read more
ಅಮಾನುಲ್ಲಾ ಅವರ ತೋಟ

1 ಎಕ್ರೆಗೆ 2600 ಫಲ ಕೊಡುವ ಬೆಳೆಗಳು – ನಂಬುತ್ತೀರಾ?

ಹೌದು, ನಂಬಿಕೆ ಬಾರದಿದ್ದರೆ ಒಮ್ಮೆ ಶಿವಮೊಗ್ಗ ಜಿಲ್ಲೆ , ಸಾಗರ ತಾಲೂಕು, ಮಂಕಳಲೆ ಗ್ರಾಮದ ಓರ್ವ ಕೃಷಿಕ, ಶ್ರೀ ಅಮಾನುಲ್ಲಾ ಖಾನ್ ಇವರ   ಹೊಲಕ್ಕೊಮ್ಮೆ ಭೇಟಿ ಕೊಡಿ. ಸುಮಾರು  20 ಎಕ್ರೆಯ ಇವರ ಹೊಲದಲ್ಲಿ 50,000 ಕ್ಕೂ ಹೆಚ್ಚಿನ ಫಲ ಕೊಡುವ ಬೆಳೆಗಳಿವೆ. ಅಂದರೆ ಎಕ್ರೆಗೆ 2600 ಗಿಡಗಳು. ಇದು ಬಹುಶಃ ನಾವು ಯಾರೂ ಕಲ್ಪನೆ ಸಹ ಮಾಡಲಾಗದ ಕೃಷಿ ಕ್ಷೇತ್ರ ಎಂದರೆ ಅತಿಶಯೋಕಿಯಲ್ಲ. ಅದಕ್ಕಾಗಿಯೇ ಈ ಹೊಲವನ್ನು ನೋಡಿದರೆ ನಾವು ವಿಯೆಟ್ನಾಂ ದೇಶದ ಕರಿಮೆಣಸು ಕೃಷಿ…

Read more
ಕಾಲಬದ್ಧ ನಿರ್ವಹಣೆಯ ಉತ್ತಮ ಇಳುವರಿಯ ಅಡಿಕೆ

ಉತ್ತಮ ಇಳುವರಿ ಪಡೆಯಲು ಈ ವಿಧಾನ ಅನುಸರಿಸಿರಿ.

ಯಾವುದೇ ವೃತ್ತಿಯಲ್ಲಿ ನಾವು ಮಾಡಿದ  ಕೆಲಸವನ್ನು ಒಮ್ಮೆ ತಿರುಗಿ ನೋಡಿದರೆ  ನಮಗೆ ತಪ್ಪು ಯಾವುದು ಸರಿ ಯಾವುದು ಎಂದು ತಿಳಿಯುತ್ತದೆ. ಕೃಷಿಯಲ್ಲಿ ನಾವು ಮಾಡಿದ ನಾಲ್ಕು ಐದು ವರ್ಷಗಳ ಬೆಳೆ  ಕ್ರಮವನ್ನು ಅಭ್ಯಸಿದರೆ ನಮಗೆ ಹೇಗೆ ಮಾಡಿದರೆ ಉತ್ತಮ ಎಂಬುದು ತಿಳಿಯುತ್ತದೆ. ನಾವು ಮಾಡುವ ವೃತ್ತಿಯಲ್ಲಿ ಯಾವಾಗ ಏನು ಮಾಡಿದ್ದೇವೆ ಅದರ ಫಲಿತಾಂಶ ಏನಾಗಿದೆ ಎಂಬುದನ್ನು ಪರಾಂಬರಿಸಿ ಗಮನಿಸುತ್ತಿದ್ದರೆ, ತಪ್ಪು ಎಲ್ಲಿ ಅಗಿದೆ, ಸರಿ ಮಾಡುವುದು ಹೇಗೆ ಎಂದು ನಮಗೇ ತಿಳಿಯುತ್ತದೆ.  ಕೃಷಿಯೂ ಹಾಗೆಯೇ? ನಮ್ಮ ಕೃಷಿ…

Read more
ಜೇನು ನೊಣಗಳು

ಜೇನು ನೊಣ ಯಾವ ಸಮಯದಲ್ಲಿ ಹಿಡಿದರೆ ಒಳ್ಳೆಯದು.

ಕಾರ್ತಿಕ ಮಾಸದ ನಂತರ ಜೇನು ಕುಟುಂಬ ಸಂಖ್ಯಾಭಿವೃದ್ದಿಯಾಗುತ್ತದೆ. ಸಂಖ್ಯೆ  ಹೆಚ್ಚಾದಾಗ ಪಾಲಾಗುತ್ತದೆ. ಪಾಲಾದಾಗ ಅರ್ಧ ಪಾಲು ನೊಣಗಳು ವಾಸಸ್ಥಳದಿಂದ ವಿಭಾಗಗೊಂಡು ಹೊರ ಬಂದು ಎಲ್ಲಾದರೂ ವಿಶ್ರಮಿಸಿ ಹೊಸ ವಾಸ ಸ್ಥಳವನ್ನು ಹುಡುಕುತ್ತವೆ. ಆಗ ನಿಮ್ಮ ತೋಟದಲ್ಲಿ ಖಾಲಿ ಜೇನು ಪಟ್ಟಿಗೆ ಇದ್ದರೆ ಅಲ್ಲಿ ಅವು ವಾಸ ಅಯ್ಕೆ ಮಾಡಬಹುದು. ಈ ಸಮಯದಲ್ಲಿ ಜೇನು ಕುಟುಂಬಗಳು ಹೊರಗೆ ಹಾರಾಡುವುದು ಹೆಚ್ಚು. ಈಗ ಅವುಗಳಿಗೆ ಪುಷ್ಪಗಳೂ ಲಭ್ಯ. ಸಾಮಾನ್ಯವಾಗಿ ಅವು ತಂಪು ಇರುವಲ್ಲಿ ವಾಸಸ್ಥಾನ ಹುಡುಕುತ್ತವೆ. ವಿಭಾಗ ಆಗಿ  ಹೊರಟು…

Read more
error: Content is protected !!