ಬೆಳೆಗಳಿಗೆ ಹಾನಿ ಮಾಡುವ ಮಂಗ

ಕಾಡುಪ್ರಾಣಿಗಳಿಂದ ಬೆಳೆಹಾನಿ- ಪರಿಹಾರಕ್ಕೆ ಸರ್ಕಾರದ ವಿಮೆ.

ಈ ವರ್ಷದಿಂದ  ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ರೈತರಿಗೆ ಕಾಡು ಪ್ರಾಣಿಗಳಿಂದಾಗುವ ನಷ್ಟಕ್ಕೆ ಪರಿಹಾರ ಕೊಡುವ ಬಗ್ಗೆ ವಿಮೆ ಮಾಡುವ  ವ್ಯವಸ್ಥೆ ಬರಲಿದೆ. ಮಾನ್ಯ ಸಭಾಪತಿಗಳು  ಮೊನ್ನೆ ಕೃಷಿಕರ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ ಇದಕ್ಕೆ ಪರಿಹಾರವಾದರೂ ಕೊಡಿ ಎಂದು ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದು ಕಾರ್ಯಗತವಾಗಲು ರೈತರೂ ತಮ್ಮ ಕೆಲಸ ಮಾಡಬೇಕು. ಕಾಡುಪ್ರಾಣಿ ಯಾವುದೇ ಇದ್ದರೂ ಅದನ್ನು ಕೊಲ್ಲುವುದು ಅಪರಾಧ. ಕೊಲ್ಲಲು ಅದು ಎದೆಯೊಡ್ಡಿ ಬರುವುದೂ ಇಲ್ಲ. ಮಂಗಗಳು ತೆಂಗಿನಕಾಯಿ , ಹಣ್ಣು ಹಂಪಲುಗಳನ್ನು…

Read more
Mite infection

ತರಕಾರಿ ಬೆಳೆಗಳಲ್ಲಿ ಎಲೆ ಮುರುಟುವುದಕ್ಕೆ ಸುರಕ್ಷಿತ ಪರಿಹಾರ.

ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಈ ಎಲೆ ಮುರುಟುವ ಸಮಸ್ಯೆಗೆ ಕಾರಣ ಏನು ಮತ್ತು ಸುರಕ್ಷಿತ ಪರಿಹಾರ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ತರಕಾರಿ  ಬೆಳೆ ವಾಣಿಜ್ಯಿಕವಾಗಿ ಮಾಡಿದರೂ ಈ ಸಮಸ್ಯೆ ಇದೆ.  ಮನೆಬಳಕೆಗೆ ಬೇಕಾದಷ್ಟೇ ಮಾಡಿದರೂ ಈ ಸಮಸ್ಯೆ  ಬೆನ್ನು ಬಿಡುವುದಿಲ್ಲ. ತರಕಾರಿ ಬೆಳೆಗಳು ವಿಶೇಷವಾಗಿ ರಾಸಾಯನಿಕ ಮುಕ್ತವಾಗಿದ್ದರೆ ಬೆಳೆಗಾರರಿಗೂ ಒಳ್ಳೆಯದು. ಬಳಕೆದಾರರಿಗೂ  ಒಳ್ಳೆಯದು. ಕೃಷಿಕರು ಕೀಟನಾಶಕ ಬಳಸುವುದರಿಂದ ಮೊದಲಾಗಿ ದೊಡ್ಡ ದುಷ್ಪರಿಣಾಮ ಉಂಟಾಗುವುದು ಸಿಂಪಡಿಸಿದವರಿಗೆ. ಅದನ್ನು ಉಸಿರಾಡಿದವರಿಗೆ, ಮೈಗೆ ಕೈಗೆ ತಾಗಿಸಿಕೊಂಡವರಿಗೆ ಪ್ರಾಥಮಿಕ…

Read more
ಡ್ರಿಪ್ - ಕಟ್ಟಿಕೊಳ್ಳುವಂತೆ ಮಾಡುವ ಕಶ್ಮಲಗಳನ್ನು ನಿವಾರಿಸುವ ವ್ಯವಸ್ಥೆ

ಡ್ರಿಪ್ – ಕಟ್ಟಿಕೊಳ್ಳುವಂತೆ ಮಾಡುವ ಕಶ್ಮಲಗಳು.

ಬಹಳಷ್ಟು ಜನ ರೈತರು ಡ್ರಿಪ್ ನೀರಾವರಿಯಲ್ಲಿ ಕಟ್ಟಿಕೊಳ್ಳುವ ಸಮಸ್ಯೆ ರಗಳೆ ಎಂದು ಒಮ್ಮೆ ಅಳವಡಿಸಿ ನಂತರ ಕಿತ್ತು ಬಿಸಾಡುತ್ತಾರೆ. ಹೀಗೆ ಆಗುವುದು ಕಶ್ಮಲಗಳು  ಸೇರಿಕೊಂಡು. ಒಂದು ದಿನದ ಕೆಲಸ ಮತ್ತು ಸ್ವಲ್ಪ ತಾಳ್ಮೆ ಇದ್ದರೆ ಅದನ್ನು ಸ್ವಚ್ಚ ಮಾಡುವುದು ತುಂಬಾ ಸುಲಭ. ಹನಿ ನೀರಾವರಿ ವ್ಯವಸ್ಥೆಯಲ್ಲಿ ನೀರಿನ ಗುಣ ಹೊಂದಿಕೊಂಡು ಕಟ್ಟಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ.ಇದನ್ನು ನಿವಾರಿಸಲು ಸೂಕ್ತ ಫಿಲ್ಟರ್ ಮತ್ತು ಆಗಾಗ ಪೈಪನ್ನು  ಪ್ಲಶ್ ಮಾಡುವುದು ವರ್ಷಕ್ಕೊಮ್ಮೆ , ಆಮ್ಲ ಉಪಚಾರ ಮಾಡುವುದು ಪರಿಹಾರ. ಹನಿ ನೀರಾವರಿಗೆ …

Read more
banana plantation

ಬಾಳೆ ಬೆಳೆಯುವಾಗ ಕಂದುಗಳನ್ನು ನಿಯತ್ರಿಸುವುದು ಹೇಗೆ?

ಬಾಳೆ ಬೆಳೆಗಾರರಿಗೆ ಕಂದುಗಳ ನಿಯಂತ್ರಣ ಒಂದು ದೊಡ್ಡ ಸಮಸ್ಯೆ. ಕಂದುಗಳು ಕಡಿಮೆಯಾದಷ್ಟೂ ಬಾಳೆ ಗೊನೆ ಚೆನ್ನಾಗಿ ಬರುತ್ತದೆ. ಬಾಳೆ ನೆಟ್ಟು ಸುಮಾರು 5-6 ತಿಂಗಳಿಗೆ ಕಂದುಗಳು ಬರಲಾರಂಭಿಸುತ್ತವೆ. ಕಂದುಗಳು ಬಂದ ನಂತರ ಇರುವ ಆಹಾರ ಅವುಗಳಿಗೂ ಹಂಚಿಕೆಯಾಗಬೇಕು. ಆಗ ಹೆಚ್ಚು ಹೆಚ್ಚು ಗೊಬ್ಬರಗಳನ್ನು ಕೊಡಬೇಕು. ಕಂದುಗಳನ್ನು ನಿಯಂತ್ರಿಸಿಕೊಂಡರೆ ಬಾಳೆಗೆ ಪೋಷಕಾಂಶ ಹಾಗೂ ನೀರಾವರಿ ಕಡಿಮೆ ಸಾಕಾಗುತ್ತದೆ. ಬಾಳೆ ಗೊನೆ ಪುಷ್ಟಿಯಾಗಿ ಬೆಳೆಯುತ್ತದೆ.  ಹಾಗಾದರೆ ಬಾಳೆಯಲ್ಲಿ ಕಂದುಗಳನ್ನು ತೆಗೆಯುವ ವಿಧಾನ ಹೇಗೆ? ಕಂದುಗಳ ನಿಯಂತ್ರಣಕ್ಕೂ ಬಾಳೆಯ ಅಧಿಕ ಇಳುವರಿಗೂ…

Read more
Wilt damage

ಬದನೆಯ ಕಾಯಿ ಕೊಳೆಯಲು ಕಾರಣ ಮತ್ತು ಪರಿಹಾರ.

ಬದನೆ ಬೆಳೆಯುವವರು ಎದುರಿಸುತ್ತಿರುವ ಕಾಯಿ ಕೊಳೆಯುವ ಸಮಸ್ಯೆ ಒಂದು ರೋಗವಾಗಿದ್ದು, ಇದಕ್ಕೆ ಸಮರ್ಪಕ ಪರಿಹಾರ ನೈರ್ಮಲ್ಯ ಮಾತ್ರ. ಬದನೆ ಬೆಳೆಗಾರರ ಹೊಲದಲ್ಲಿ ನೋಡಿದರೆ ಕೊಯಿದ ಬದನೆಯ ಅರ್ಧ ಪಾಲು ಹೊಲದ ಮೂಲೆಯಲ್ಲಿ ಬಿಸಾಡಿದ್ದು ಸಿಗುತ್ತದೆ. ಬದನೆ ಎಲ್ಲಿ ಬೆಳೆದರೂ ಪರಿಸ್ಥಿತಿ ಹೀಗೆಯೇ. ಇದು ಒಂದು ಸೊರಗು ರೋಗ.  ಇದಕ್ಕೆ ಬೇಸಾಯ ಪದ್ದತಿಯಲ್ಲಿ ಮಾರ್ಪಾಡು ಮತ್ತು ನೈರ್ಮಲ್ಯ ಮಾತ್ರ ಸೂಕ್ತ ಪರಿಹಾರ. ಬದನೆ  ಬೆಳೆ ಎಷ್ಟು ಇಳುವರಿ ಬಂದರೂ  ಬೆಳೆಗಾರರಿಗೆ ಸಿಗುವುದು ಅರ್ಧ ಮಾತ್ರ. ಉಳಿದವು ಕೊಳೆಯುತ್ತದೆ. ಇತ್ತೀಚಿನ…

Read more
cashew un productive

ಗೇರು ಮರದ ಚಿಗುರು ಹೀಗೆ ಆಗುವುದಕ್ಕೆ ಕಾರಣ.

ಗೇರು ಮರಗಳ ಎಲ್ಲಾ  ಎಳೆ ಚಿಗುರು ಒಣಗುವ ಈ ಸಮಸ್ಯೆ ಯಾಕೆ ಆಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಇತ್ತೀಚೆಗಿನ ಗೇರು ತೋಟಗಳಲ್ಲಿ ಇಂತಹ ಸಸ್ಯಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ಸಸ್ಯಾಭಿವೃದ್ದಿ ಮಾಡುವಾಗ ಸೂಕ್ತ ಸಸ್ಯ ಮೂಲದಿಂದ ಕಸಿ ಕಡ್ಡಿಗಳನ್ನು ಆಯ್ಕೆ ಮಾಡದೆ ಇರುವುದು. ಸಸಿಗಳಿಗೆ ಬೇಡಿಕೆ ಇದೆ ಎಂದು ಬೆಳೆಗಾರರ ಶ್ರಮದ ಮೇಲೆ ಆಟ ಆಡುವ ಮನೋಸ್ಥಿತಿ ಇದು ಎಂದರೂ ತಪ್ಪಾಗಲಾರದು. ಗೇರು ಮರದ ವಿಶೇಷ ಎಂದರೆ ಅದು ಚಿಗುರಿದಾಗ ಹೂವಾಗುತ್ತದೆ. ಚಿಗುರು ಬಂದು…

Read more
Good yield in Arecanut

ನಿರೀಕ್ಷಿಸಿದಂತೆ ಇಳುವರಿ ಪಡೆಯಬೇಕೇ? ರಸಾವರಿ ಮಾಡಿ.

ನೀರಾವರಿಯೊಂದಿಗೆ ಪೊಷಕಗಳನ್ನು ಕೊಡುವ ಕ್ರಮಕ್ಕೆ ರಸಾವರಿ ಎನ್ನುತ್ತಾರೆ. ಕರಾರುವಕ್ಕಾಗಿ ಇಷ್ಟು ಇಳುವರಿ ಪಡೆಯುತ್ತೇನೆ ಎಂಬವರಿಗೆ ಇದು ಕೈಹಿಡಿಯುತ್ತದೆ. ಸಸ್ಯಗಳು ಯಾವುದೇ ಇರಲಿ. ಅವು ಪೊಷಕಗಳನ್ನು ಬಳಸಿಕೊಳ್ಳಬೇಕಾದರೆ ಜೊತೆಗೆ ನೀರು ಬೇಕು. ನೀರು ಮಣ್ಣನ್ನು ತೇವ ಮಾಡುತ್ತದೆ.  ತೇವ ಇರುವ ಇರುವಲ್ಲಿ  ಪೊಷಕಗಳು ಲಭ್ಯವಿದ್ದರೆ ಅದನ್ನು ಸಸ್ಯಗಳು ತಮ್ಮ  ಬೇರಿನ ಮೂಲಕ ಬಳಸಿಕೊಳ್ಳುತ್ತವೆ. ತೇವಾಂಶ ಇಲ್ಲದಲ್ಲಿ ನಾವು ಎಷ್ಟೇ ಪೋಷಕಾಂಶ ಸುರಿದರೂ ಅದು ಪ್ರಯೋಜನಕ್ಕೆ ಬರಲಾರದು. ಇದರಿಂದಾಗಿ ನಾವು ಪೋಷಕಗಳನ್ನು ಹೆಚ್ಚು ಹೆಚ್ಚು ಬಳಸಿದರೂ  ಅದರ ಫಲ ಚೆನ್ನಾಗಿ…

Read more
banana bunch

ಬಾಳೆ ನೆಡುವಾಗ ಥಿಮೆಟ್ ಬದಲು ಇದನ್ನು ಹಾಕಿ.

ಬಾಳೆ ಬೆಳೆಯಲ್ಲಿ  ಪ್ರಮುಖ ಸಮಸ್ಯೆಯಾದ ಕಾಂಡ – ಗಡ್ಡೆ  ಕೊರಕ ಹುಳದ ನಿಯಂತ್ರಣಕ್ಕೆ ಫೋರೇಟ್ ಮುಂತಾದ ವಿಷದ ಬದಲು ಜೈವಿಕ ಪರಿಹಾರ ಸುರಕ್ಷಿತ.  ಬಾಳೆ ಗೊನೆ ಹಾಕುವ ಸಮಯದಲ್ಲಿ ಅದಕ್ಕೆ ದಿಂಡು ಹುಟ್ಟಿಕೊಳ್ಳುತ್ತದೆ.  ದಿಂಡು ಬರುವ ತನಕ ಬಾಳೆಗೆ ಅಂತಹ ಕೀಟ ಸಮಸ್ಯೆ ಇಲ್ಲ. ಯಾವಾಗ ಗೊನೆ ಹಾಕುತ್ತದೆಯೋ ಆಗ ಮುನ್ಸೂಚನೆ ಇಲ್ಲದೆ ಕಾಂಡ ಕೊರಕ ಹುಳದ ತೊಂದರೆ ಉಂಟಾಗುತ್ತದೆ. ಈ ಕಾಂಡ ಕೊರಕ ಹುಳ ಬಾಧೆ ಇಲ್ಲದ ಬಾಳೆ ತಳಿಗಳೇ ಇಲ್ಲ. ಇದಕ್ಕೆ ಎಲ್ಲರೂ ವಿಷ…

Read more
ಡ್ರಿಪ್ ವ್ಯವಸ್ಥೆಯಲ್ಲಿ ಅಡಿಕೆ ಬೆಳೆ

ಡ್ರಿಪ್ ಸಮಸ್ಯೆ ಕೊಡುತ್ತಿದೆಯೇ ? ಕಾರಣ ಇಲ್ಲಿದೆ.

ಸರಕಾರ ಡ್ರಿಪ್ ನೀರಾವರಿಗೆ  ಸಹಾಯಧನ ಕೊಡುತ್ತದೆ ಎಂದು ಹನಿ ನೀರಾವರಿ ಮಾಡಿಸಿಕೊಳ್ಳಬೇಡಿ. ನಿಮಗೆ ಅದರ ಮೇಲ್ವಿಚಾರಣೆ ಮಾಡಲು ಜ್ಞಾನ  ಇದ್ದರೆ ಮಾತ್ರ ಮಾಡಿಕೊಳ್ಳಿ. ಗರಿಷ್ಟ ಪ್ರಮಾಣದಲ್ಲಿ ನೀರು ಉಳಿಸುವ ನೀರಾವರಿ ವ್ಯವಸ್ಥೆ ಎಂದರೆ ಹನಿ ನೀರಾವರಿ. ಇದು ಸಸ್ಯಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಒದಗಿಸಿಕೊಡುವ ವ್ಯವಸ್ಥೆ. ಗಂಟೆಗೆ ಕೆಲವೇ ಲೀಟರುಗಳಷ್ಟು  ನೀರನ್ನು ಸಸ್ಯದ ಬೇರು ವಲಯದ ಒಂದು ಅಥವಾ ಎರಡು ಕಡೆಗೆ ತೊಟ್ಟಿಕ್ಕುವ ಈ ವ್ಯವಸ್ಥೆ ಉತ್ತಮ ಹೌದು ಆದರೆ ಮಣ್ಣು, ನೀರು  ಮುಂತಾದವುಗಳನ್ನು …

Read more
egg fruit

ಇದು ಎಲ್ಲಾ ವರ್ಗದವರೂ ತಿನ್ನಬಹುದಾದ ಮೊಟ್ಟೆ ಹಣ್ಣು.

ಮೊಟ್ಟೆಯನ್ನು ಎಲ್ಲರೂ ತಿನ್ನುವುದಿಲ್ಲ. ಆದರೆ ಈ ಮೊಟ್ಟೆ ಹಣ್ಣು ತಿಂದರೆ ಮೊಟ್ಟೆಯಲ್ಲಿರುವುದಕ್ಕಿಂತ ಹೆಚ್ಚು  ಸತ್ವಗಳು ದೊರೆಯುತ್ತದೆ. ಇದು ಮಾಂಸಾಹಾರ ಅಲ್ಲ. ಸಸ್ಯಾಹಾರ. ಎಗ್ ಪ್ರುಟ್ ಎಂದು ಕರೆಯಲಾಗುವ ಈ ಹಣ್ಣು ಅತ್ಯುತ್ತಮ ಪೌಷ್ಟಿಕಾಂಶ (8 ಮೀ. ತನಕ) ಈ ಸಸ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಕಾಯಿಗಳಾಗುತ್ತದೆ. ಹಣ್ಣಾದಾಗ ಕಡು ಹಳದಿ ಬಣ್ಣ ಬರುತ್ತದೆ. ಹಣ್ಣಿನ ಒಳ ತಿರುಳು ಭಾಗ ಮೊಟ್ಟೆಯಲ್ಲಿ ಹಳದಿ ಭಾಗ ಇದ್ದಂತೆ ಕಾಣುತ್ತದೆ. ಅದಕ್ಕಾಗಿ ಮೊಟ್ಟೆ ಹಣ್ಣು ಎಂದು ಕರೆದಿರಬೇಕು. ಉಷ್ಣ ವಲಯದ ಈ ಹಣ್ಣಿನ…

Read more
error: Content is protected !!