ಅಡಿಕೆ ಗರಿ ತಿನ್ನುವ ಹುಳದ ವಾಸಸ್ಥಾನ

ಅಡಿಕೆಗೆ ಹರಿತ್ತು ತಿನ್ನುವ ಹುಳುವಿನ ತೊಂದರೆ ಮತ್ತು ಪರಿಹಾರ.

ಅಡಿಕೆಯ ಮರದ ಗರಿಗಳನ್ನು ಹಾನಿಮಾಡುವ ಕೀಟಗಳಲ್ಲಿ ಮುಖ್ಯವಾಗಿ ಸುಳಿ ತಿಗಣೆ ಒಂದು ಎಂದು ನಾವು ತಿಳಿದಿದ್ದೇವೆ, ಆದರೆ ಇದನ್ನು ಸಿಂಗಾರ ತಿನ್ನುವ  ಹುಳದ ತರಹವೇ ಇರುವ ಇನ್ನೊಂದು ಎಲೆ ತಿನ್ನುವ ಹುಳ ಸಹ ಅಡಿಕೆಯ ಎಳೆಯ ಗರಿಗಳನ್ನು ತಿನ್ನುತ್ತವೆ. ಇದರಿಂದ ಬಹಳ ಹಾನಿ ಉಂಟಾಗುತ್ತಿದೆ. ದಾವಣಗೆರೆ ಸುತ್ತಮುತ್ತ ಹಲವು ರೈತರ ಹೊಲದಲ್ಲಿ ಈ ಕೀಟದ  ಹಾವಳಿ ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಪ್ರದೇಶಕ್ಕೆ ವ್ಯಾಪಿಸುತ್ತಿದೆ. ಅಡಿಕೆಯ ಮರದ ಗರಿಗಳಿಗೆ ಆಗುವ ಹಾನಿ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು…

Read more
ತೆಂಗಿನ ನೈಸರ್ಗಿಕ ಹೈಬ್ರೀಡ್ ತಳಿ

ತೆಂಗು ಬೆಳೆಸುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ವಿಚಾರ.

ಜಗತ್ತಿನ ಸುಮಾರು 80 ಕ್ಕೂ ಹೆಚ್ಚಿನ ದೇಶಗಳಲ್ಲಿ  ಬೆಳೆಸಲ್ಪಡುತ್ತಿರುವ  ತೆಂಗಿಗೆ ಬೆಳೆಯಲ್ಲದೆ ದೈವಿಕ ಸ್ಥಾನವನ್ನೂ ನೀಡಲಾಗಿದೆ. ನಮ್ಮ ಪೂರ್ವಜರಿಂದ ಲಾಗಾಯ್ತು ಈಗಿನವರೆಗೂ ಜನ ತೆಂಗನ್ನು ನಂಬಿದ್ದಾರೆ. ನಂಬಿಕೆಗೆ ಯಾವಾಗಲೂ ಕುಂದು ತಾರದ ಬೆಳೆ ಎಂದರೆ ತೆಂಗು ಎನ್ನಬಹುದು. ತೆಂಗಿನ ಮೂಲ  ಯಾವುದು: ಕೆಲವು ಪ್ರಕೃತಿಯ ನಿಘೂಢಗಳಲ್ಲಿ ತೆಂಗೂ ಒಂದು. ಇದು ಮೂಲತಹ ಎಲ್ಲಿ ಬೆಳೆಯುತ್ತಿತ್ತು, ಹೇಗೆ ಇದು ಬೆಳೆಯ ಸ್ಥಾನವನ್ನು ಪಡೆಯಿತು ಎಂಬ ಬಗ್ಗೆ ನಿಖರ ಉಲ್ಲೇಖ ಇಂದಿನ ತನಕವೂ ಇಲ್ಲ. ಭಾರತ ದೇಶದಲ್ಲಿ ವೇದಗಳ ಕಾಲದಿಂದಲೂ…

Read more

ಬೆಳೆ ದಾಖಲೆ ಮಾಡಿಲ್ಲವೇ? ಮಾಡಿ. ಬಹಳ ಪ್ರಯೊಜನ ಇದೆ.

ರೈತರ ಹೊಲದಲ್ಲಿ ಯಾವ ಬೆಳೆ ಇದೆ, ಎಂಬುದನ್ನು ಅವರವರೇ ದಾಖಲೀಕರಣ ಮಾಡಿದರೆ ಅದೇ ಉತ್ತಮ. ಯಾಕೆಂದರೆ ಬೇರೆಯವರು ಮಾಡುವುದು ಎಷ್ಟಾದರೂ ಅಷ್ಟೇ. ಇದು ಇಂದು ಬೆಳೆ ದಾಖಲೀಕರಣ  ಮಾಡಿದಾಗ ತಿಳಿದ ಸಂಗತಿ. ಸ್ವಲ್ಪ ತರಬೇತಿ ಅಥವಾ ಸ್ವಲ್ಪ ಮೊಬೈಲ್ ಫೋನ್ ಬಳಕೆ ಗೊತ್ತಿದ್ದವರ ಸಹಾಯ ತೆಗೆದುಕೊಂಡರೆ ಇದನ್ನು ಯಾರೂ ಬಳಸಬಹುದು. ಸರಕಾರ ಈ ಕೆಲಸವನ್ನು ರೈತರ ತಲೆಗೇ ಹಾಕಿರುವುದು ಮತ್ತೇನಕ್ಕೂ ಅಲ್ಲ. ಈ ಕೆಲಸಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. GPS  ಸರಿಯಾಗಿ ಸಿಗಬೇಕು. ಕೆಲವೊಮ್ಮೆ ಬೇಗ ಆಗಬಹುದು….

Read more

ರೋಗ ನಿರೋಧಕ ಶಕ್ತಿ ಬೇಕೇ ? ಈ ಮೊಟ್ಟೆ ತಿನ್ನಿ.

ಕೋಳಿ  ಸಾಕುವವರಿಗೆ ಅದರ ಜೊತೆಗೆ ಕೆಲವು ಅಧಿಕ ಬೇಡಿಕೆ ಉಳ್ಳ, ಪಕ್ಷಿಗಳ ಸಾಕಾಣೆ ಮಾಡಬಹುದು. ಇವುಗಳಲ್ಲಿ ಗೌಗುಗನ ಹಕ್ಕಿ ಎಂಬುದು ಒಂದು. ಇದು ಮೊಟ್ಟೆಗೂ ಆಗುತ್ತದೆ. ಮಾಂಸಕ್ಕೂ ಆಗುತ್ತದೆ. ಸಣ್ಣ ಗಾತ್ರದ ಈ ಪಕ್ಷಿ ಅತೀ ಶೀಘ್ರ ಬೆಳವಣಿಗೆಯನ್ನು ಹೊಂದುತ್ತದೆ. ಇದರ ಮೊಟ್ಟೆ- ಮಾಂಸ ಎರಡೂ ಬಹಳ ಔಷದೀಯಗುಣ ಹೊಂದಿದೆ. ಇಂದಿನ  ಸಾಮಾಜಿಕ ಆರೋಗ್ಯ ಸಮಸ್ಯೆಗೆ ಇದು ಪರಿಹಾರವಾಗಬಲ್ಲದು.  ಗೌಜುಗನ ಹಕ್ಕಿ ಕಾಟುರ್ನಿಕ್ಸ್ ಕಾಟುರ್ನಿಕ್ಸ್ ಜಪೋನಿಕಾ (Coturnix Coturnix japonica) ಎಂಬ ಪ್ರಭೇಧಕ್ಕೆ ಸೇರಿದೆ. 11 ನೇ…

Read more

ಹುಳ ಬಿದ್ದ ತರಕಾರಿ ತಿನ್ನುವುದೇ ಆರೋಗ್ಯಕ್ಕೆ ಉತ್ತಮ- ಯಾಕೆ?

ನಾವು ತರಕಾರಿ ಖರೀದಿ ಮಾಡುವಾಗ ನೋಟ ಚೆನ್ನಾಗಿರುವ, ಹುಳ ಬಾರದೇ ಇರುವಂತದ್ದನ್ನು ಆರಿಸಿ ಕೊಳ್ಳುತ್ತೇವೆ. ಒಂದು ವೇಳೆ ನಾವು ತಂದದ್ದರಲ್ಲಿ ಗಮನಿಸದೆ ಹುಳ ಇದ್ದರೆ ಅದನ್ನು ತೆಗೆದು ಬಿಸಾಡಿ, ಅಂಗಡಿಯವನಿಗೆ ಹಿಡಿ ಶಾಪ ಹಾಕುತ್ತೇವೆ. ವಾಸ್ತವವಾಗಿ  ಹುಳ ಇರುವ ತರಕಾರಿ ಹಣ್ಣು ಹಂಪಲುಗಳಿದ್ದರೆ ಅದನ್ನು ಬಿಸಾಡದಿರಿ. ಹುಳ ತೆಗೆದು ದೂರ ಇಟ್ಟು ಅದನ್ನು ಬಳಸಿ. ಅದು ಆರೋಗ್ಯಕ್ಕೆ ಉತ್ತಮ. ಹುಳ ಬಾರದಂತೆ ಮಾಡಲು ಬಳಸುವ ಕೀಟನಾಶಕಗಳ ಉಳಿಕೆ ತರಕಾರಿಗಳಲ್ಲಿ ಉಳಿದಿರುತ್ತದೆ. ಆದ ಕಾರಣ ಬಳಕೆದಾರರು ಅತಿಯಾಗಿ ನೋಟ…

Read more

ಇಪಿಎನ್ (EPN) ಸಿಂಪಡಿಸಿ- ಬೇರು ಹುಳ ನಿಯಂತ್ರಿಸಿ.

ಬೇರು ಹುಳ ಎಂಬುದು ಪ್ರಕೃತಿಯಲ್ಲಿಯೇ ಇರ್ವ ಒಂದು ಜೀವಿ. ನಿಸರ್ಗದಲ್ಲಿರುವ ಬೇರೆ ಬೇರೆ ಸಸ್ಯಗಳಿಗೆ  ಬೇರೆ ಬೇರೆ ನಮೂನೆಯ ಬೇರು ಹುಳಗಳು ತೊಂದರೆ ಮಾಡುತ್ತವೆ. ಹಾಗೆಯೇ ಪ್ರಕೃತಿಯಲ್ಲಿ ಅದನ್ನು ನಾಶಮಾಡುವ ಜೀವಿಯೂ ಇದೆ. ಅಂತಹ ಒಂದು ಜೀವಿ EPN. ಇದನ್ನು ಹೊಲದಲ್ಲಿ ಬಿಡುವುದರಿಂದ ಅವು ನೈಸರ್ಗಿಕವಾಗಿ ಬೇರು ಹುಳವನ್ನು ನಾಶ ಮಾಡುತ್ತವೆ.   ಇದು ಸಕಾಲ: ಮೇ ತಿಂಗಳಲ್ಲಿ ಬೇರು ಹುಳದ ದುಂಬಿ ಭೂಮಿಯಿಂದ ಹೊರಬಂದು ಗಂಡು ಹೆಣ್ಣು ಜೋಡಿಯಾಗಿ ಮತ್ತೆ ಮಣ್ಣಿಗೆ ಸೇರಿ ಅಲ್ಲಿ ಮೊಟ್ಟೆ…

Read more

ಕಪ್ಪು ಗೋಧಿ- ಇದು ಬಲು ಅಪರೂಪ

ಅಕ್ಕಿಯಲ್ಲಿ ಕಪ್ಪಕ್ಕಿ ಬಗ್ಗೆ ಬಾರೀ ಪ್ರಚಾರ ಇದೆ. ಕಪ್ಪಕ್ಕಿ ಬೆಳೆಯುವ ಕೆಲವು ರೈತರು ನಮ್ಮಲ್ಲಿದ್ದಾರೆ. ಅದೇ ರೀತಿಯಲ್ಲಿ ಸಾಂಪ್ರದಾಯಿಕ ಕಪ್ಪು ಗೋಧಿ ತಳಿಯೂ ಇದೆ. ಇದನ್ನು ಉಳಿಸಿ ಸಂರಕ್ಷಿಸುವ ಕೆಲಸವನ್ನು ಕೆಲವು ರೈತರು ಮಾಡಿದ್ದಾರೆ. ಅವರಲ್ಲಿ ಒಬ್ಬರು ಮಧ್ಯಪ್ರದೇಶದ  ಬೋರೇಂದ್ರ ಸಿಂಗ್. ಸುಮಾರು 25 ವರ್ಷಗಳಿಂದ ಇವರು ಕಪ್ಪು ಗೋಧಿಯನ್ನು ಬೆಳೆಸುತ್ತಾ ಬಂದಿದ್ದಾರಂತೆ. ಇದು ಒಂದು ಸಾಂಪ್ರದಾಯಿಕ ಅಪರೂಪದ ತಳಿಯಾಗಿದ್ದು, ದೇಶದಲ್ಲಿ ಬಹಳ ಅಪರೂಪದಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ನಮ್ಮಲ್ಲಿ ಮಾನವನ ನಾಗರೀಕತೆಯ ಕಾಲದಿಂದ ಲಾಗಾಯ್ತು ಬೆಳೆಯಲಾಗುತ್ತಿದ್ದ ಅಹಾರ…

Read more

ತರಕಾರಿ ಬೀಜಗಳು ಈಗ ತ್ವರಿತವಾಗಿ ಲಭ್ಯ

ರೈತರ ಬದುಕು ಸಕಾಲದಲ್ಲಿ ಮಳೆ ಮತ್ತು ಸಕಾಲದಲ್ಲಿ ಬೀಜದ ಲಭ್ಯತೆ ಮೇಲೆ ನಿಂತಿದೆ. ಗುಣಮಟ್ಟದ ಬೀಜಗಳನ್ನು ತ್ವರಿತವಾಗಿ ತಲುಪಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ  ಜೊತೆಯಾಗಿ ಹೊಸ ವ್ಯವಸ್ಥೆಯನ್ನು ಹಾಕಿಕೊಂಡಿದೆ. ಭಾರತದಲ್ಲೇ ಪ್ರಥಮ ಬಾರಿಗೆ ಎಂಬಂತೆ ಬೆಂಗಳೂರಿನ ಹೇಸರಘಟ್ಟದಲ್ಲಿರುವ  ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ   IIHR ತನ್ನ ಸೀಡ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದನ್ನು  ರೈತರಿಗೆ ನೇರವಾಗಿ ತಲುಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಯೇನೋ ಅಗ್ರಿಕಲ್ಚರ್  ಜೊತೆ…

Read more

ಕೊಕ್ಕೋ ಗಿಡ – ಪ್ರೂನಿಂಗ್ ಮಾಡುವ ವಿಧಾನ.

ಕೊಕ್ಕೋ ಸಸ್ಯ ಬೆಳೆಯಲು ಬಿಟ್ಟರೆ ಮರವೇ ಆಗಬಹುದು. ಹಾಗೆಂದು ಯಾವ ಬೆಳೆಗೂ ತೊಂದರೆ ಇಲ್ಲವಾದರೆ  ಅದನ್ನು ಅದರಷ್ಟಕ್ಕೇ ಬೆಳೆಯಲು ಬಿಡಿ. ಇಳುವರಿ ಹೆಚ್ಚುತ್ತದೆ. ಮಿಶ್ರ ಬೆಳೆಯಾಗಿ ಅಡಿಕೆ ತೋಟದಲ್ಲಿ ಬೆಳೆಸುವಾಗ ನಿಮ್ಮ ಒಡಾಟಕ್ಕೆ,ನೀರಾವರಿ, ಕೊಯಿಲು ಮತ್ತು ಇನ್ನಿತರ ಅನುಕೂಲಕ್ಕೆ ಸಮರ್ಪಕವಾಗಿ ಪ್ರೂನಿಂಗ್ ಮಾಡಬೇಕು. ಕೊಕ್ಕೋ ಬೆಳೆ ಕರಾವಳಿ, ಮಲೆನಾಡು, ಅರೆ ಮಲೆನಾಡು, ಹಾಗೆಯೇ  ಅಡಿಕೆ ತೆಂಗು ಬೆಳೆಯುವ ಬಯಲು ನಾಡಿಗೂ ಇದು  ಉತ್ತಮ ಅದಾಯದ  ಬೆಳೆ. ಕೊಕ್ಕೋವನ್ನು  ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಕೊಕ್ಕೋ…

Read more
ರೋಗ ಸೋಂಕು ರಹಿತ ಬಳ್ಳಿ

ಕರಿಮೆಣಸು – ಯಾವ ಬಳ್ಳಿ ಸಾಯುತ್ತದೆ- ಯಾವುದನ್ನು ಉಳಿಸಬಹುದು?

ಮಳೆಗಾಲ ಮೆಣಸಿನ ಬಳ್ಳಿಗೆ ತೀವ್ರವಾದ ತೊಂದರೆಯನ್ನು ಉಂಟು ಮಾಡುತ್ತದೆ. ಮಳೆಗಾಲ ಪ್ರಾರಂಭವಾದಾಗಿನಿಂದ ಮುಗಿಯುವ ತನಕ ಯಾವಾಗಲೂ ಬರಬಹುದಾದ ಬಳ್ಳಿ ಕೊಳೆ ರೋಗವನ್ನು (Phytophthora foot rot) ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಬಳ್ಳಿಯನ್ನು ಬದುಕಿಸಬಹುದು. ರೋಗ  ಪ್ರಾರಂಭವಾಗುವಾಗ ಬಳ್ಳಿ ಯಾವ ಲಕ್ಷಣಗಳನ್ನು ತೋರಿಸುತ್ತದೆ ಎಂಬುದನ್ನು ನಮಗೆ ಗುರುತಿಸಲು ಸಾಧ್ಯವಿದ್ದರೆ ಮಾತ್ರ ನಿವಾರಣೆ ಮಾಡಲು ಸಾಧ್ಯ. ಬುಡ ಭಾಗದಲ್ಲಿ ಎಲೆ ಉದುರಿದೆಯೇ: ಆದಾರ ಮರಕ್ಕೆ ಹಬ್ಬಿದ ಬಳ್ಳಿಯ ಎಲೆಗಳಲ್ಲಿ ಮೊದಲ ಲಕ್ಷಣ ಕಂಡು ಬರುತ್ತದೆ. ರೋಗವು ಮೊದಲಾಗಿ ಬಳ್ಳಿಯ ಬೇರಿಗೆ…

Read more
error: Content is protected !!