ಮಂಗ, ಹಂದಿ, ಮುಂತಾದ ಕಾಡು ಪ್ರಾಣಿಗಳ ಉಪಟಳಕ್ಕೆ ಶಾಶ್ವತ ಪರಿಹಾರ.
ಕಾಡು ಪ್ರಾಣಿಗಳನ್ನು ಓಡಿಸುವುದಲ್ಲ, ಮೂಲ ಕಾರಣವನ್ನು ಮನಗಂಡು ಅದನ್ನು ಪರಿಹರಿಸಬೇಕು. ಇದು ಅಹಿಂಸಾತ್ಮಕ ಶಾಶ್ವತ ಪರಿಹಾರ. ನಮ್ಮ ದೇಶದ ಕೃಷಿಯು ಸಾವಿರಾರು ವರ್ಷಗಳಿಂದ ಕಾಡಿನೊಂದಿಗೆ ಸಹಜವಾಗಿ ಬೆರೆತು ಬದುಕಿದೆ. ಹಿಂದೆ ರೈತರು ಕೃಷಿ ಮಾಡುತ್ತಿದ್ದರು, ಕಾಡುಪ್ರಾಣಿಗಳು ಕಾಡಿನಲ್ಲಿಯೇ ಆಹಾರವನ್ನು ಪಡೆದು ಬದುಕುತ್ತಿದ್ದವು. ಕೆಲವೊಮ್ಮೆ ಮಾತ್ರ ಬೆಳೆಗಳಿಗೆ ಹಾನಿಯಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ಕೋತಿಗಳು, ನವಿಲುಗಳು, ಕಾಡುಹಂದಿಗಳು, ಮುಳ್ಳುಹಂದಿಗಳು, ಜಿಂಕೆಗಳು, ಆನೆಗಳು ಸೇರಿದಂತೆ ಅನೇಕ ಕಾಡುಪ್ರಾಣಿಗಳು ಪ್ರತಿದಿನ ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾಳು…
