ಪನ್ನಿಯೂರು-9: ರೈತರ ಅನುಭವದಲ್ಲಿ ಉತ್ತಮ ಇಳುವರಿ ನೀಡುತ್ತಿರುವ ಮೆಣಸಿನ ತಳಿ
ಪನ್ನಿಯೂರು ಶ್ರೇಣಿಯ ವಿವಿಧ ತಳಿಗಳ ಪೈಕಿ ಪನ್ನಿಯೂರು-9 ತಳಿಯ ಕರಿಮೆಣಸು, ಹವಾಮಾನದಲ್ಲಿ ವ್ಯತ್ಯಯ ಕಂಡುಬಂದಿರುವ ಈ ವರ್ಷದಂತಹ ಪರಿಸ್ಥಿತಿಯಲ್ಲಿಯೂ ಉತ್ತಮ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕೃಷಿಕ ಜೋಸೆಫ್ ಚಾಕೋ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಗೆ ಕ್ಷೇತ್ರ ಭೇಟಿಗಾಗಿ ತೆರಳಿದ ಸಂದರ್ಭದಲ್ಲಿ, ಪ್ರಗತಿಪರ ಮೆಣಸು ಬೆಳೆಗಾರರಾದ ಶ್ರೀ ಜೋಸೆಫ್ ಚಾಕೋ ಅವರ ತೋಟಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಸಿಲ್ವರ್ ಓಕ್ ಮರಗಳನ್ನು ಆಧಾರವಾಗಿಸಿಕೊಂಡು ಮೆಣಸನ್ನು ಮುಖ್ಯ ಬೆಳೆಯಾಗಿ ಬೆಳೆಸುತ್ತಿರುವ…
