ರೈತರ ಕಲ್ಯಾಣಕ್ಕೆ ಕೇಂದ್ರ ಸರಕಾರದ “ಕೃಷಿ ಸುಧಾರಣಾ ಬಿಲ್”
ದೇಶದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮಾರುಕಟ್ಟೆ ವ್ಯವಸ್ಥೆಗೆ ಭಾರೀ ಸರ್ಜರಿ ಬೇಕು ಎಂದು ಮನಗಂಡ ಕೇಂದ್ರ ಸರಕಾರ ಕಿಸಾನ್ ಬಿಲ್ 2020 ನ್ನು ರಚಿಸಿ ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಮಾಡಿ, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಅಲ್ಲಿ ಅವರ ಅಂಕಿತ ಬಿದ್ದ ನಂತರ ಅದು ಜ್ಯಾರಿಗೆ ಬರಲಿದೆ. ಈ ಬಿಲ್ ಬಗ್ಗೆ ಜನ ಮನಬಂದಂತೆ ಮಾತಾಡುತ್ತಾರೆ. ಆದರೆ ಪ್ರಧಾನಿಗಳು ಅದರ ಬಗ್ಗೆ ಸ್ಪಷ್ಟಣೆಯನ್ನೂ ನೀಡಿದ್ದಾರೆ. ಕೃಷಿ ಕ್ಷೇತ್ರದ ಸುಧಾರಣೆಗೆ ಕೆಲವು ಕಾನೂನಾತ್ಮಕ ಬದಲಾವಣೆ ಬೇಕೇ…
