ಗುಲಗುಂಜಿ ಹುಳ ಕೀಟ ಭಕ್ಷಕ

ಈ ಕೀಟಗಳಿದ್ದರೆ ಕೀಟನಾಶಕ ಬೇಕಾಗಿಲ್ಲ.

ನಮಗೆಲ್ಲಾ ಗೊತ್ತಿರುವಂತೆ ಗುಡ್ದಕೆ ಗುಡ್ಡ ಅಡ್ದ ಇದ್ದೇ ಇದೆ. ಪ್ರತೀಯೊಂದು ಜೀವಿಗೂ ಮತ್ತೊಂದು ವೈರಿ ಜೀವಿ ಇರುತ್ತದೆ. ಇದನ್ನು ಪ್ರಕೃತಿ ಸೃಷ್ಟಿ ಮಾಡಿರುತ್ತದೆ. ಯಾವುದು ಪ್ರಭಲವಾಗುತ್ತದೆಯೋ ಆಗ  ಅದರ ವೈರಿ ಜೀವಿ ಕಾಣಿಸಿಕೊಳ್ಳುತ್ತದೆ. ಇದನ್ನು ನಮ್ಮ ಹಿರಿಯರು ತನ್ನಷ್ಟಕೇ ಕಡಿಮೆಯಾಗುವ  ವಿಧಾನ ಎಂದಿರುವುದು. ನಿಜವಾಗಿ ಇದು ಮಿತಿ ಮೀರುವುದನ್ನು ಪ್ರಕೃತಿ ಹದ್ದುಬಸ್ತಿನಲ್ಲಿಡುವ ವ್ಯವಸ್ಥೆ. ನಮ್ಮಲ್ಲಿ ಹಲವು ಕೀಟಗಳು ಕಣ್ಮರೆಯಾಗಿ ಈಗ ಕೀಟನಾಶಕ ಅನಿವಾರ್ಯವಾಗಿದೆ. ಇಂದಿನ ನಮ್ಮ ಬೇಸಾಯ ಪದ್ದತಿ ಮತ್ತು ವಾತಾವರಣದ ಸ್ಥಿತಿಗತಿಯ ಏರು ಪೇರಿನಿಂದ ಇದೆಲ್ಲವೂ…

Read more

ರೈತರಿಗೆ ಕೇಂದ್ರ ಸರಕಾರದಿಂದ ಮುಷ್ಟಿ ಸಹಾಯ.

ಇಂದು ಗ್ರಾಮೀಣ ಭಾಗದ ಸಣ್ಣ – ಅತೀ ಸಣ್ಣ ರೈತರು, ಈಗಾಗಲೇ ಸರಾಸರಿ ತಲಾ 1 ಲಕ್ಷಕ್ಕೂ ಹೆಚ್ಚಿನ ಸಾಲದಲ್ಲಿ ಮುಳುಗಿದ್ದಾರೆ. ದೊಡ್ಡ ರೈತರ ಬದುಕೇ ಸಾಲ. ಇದರ ಮೇಲೆ ಇವರಿಗೆ ಮತ್ತೆ ಸಾಲ ಕೊಡುವ ಪ್ಲಾನ್ ನಲ್ಲಿದೆ ಕೇಂದ್ರ ಸರಕಾರ. ವಿಶೇಷ ಪ್ಯಾಕೇಜ್ ಮೂಲಕ ಸಾಲಕೊಟ್ಟು ಭಾರತದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಸಾಧ್ಯವೇ ? ಇದರ ಪರಿಣಾಮ ಏನಾಗಬಹುದು? ಕೇಂದ್ರ ಸರಕಾರ ರೈತರ ಕಲ್ಯಾಣಕ್ಕಾಗಿ ಭಾರೀ ಸವಲತ್ತುಗಳನ್ನು ನೀಡಲಿದೆ ಎಂಬ  ಪ್ರತೀಯೊಬ್ಬ ರೈತರ ಆಶಯ …

Read more

ಅಡಿಕೆ ಬೆಲೆ ಕುಸಿಯುವ ಆತಂಕ ಇದೆ.

ಕ್ಯಾಂಪ್ಕೋ ಸಂಸ್ಥೆ, ಹಾಗೂ ಕೆಲವು ಖಾಸಗಿ ವ್ಯಾಪಾರಿಗಳು ಚಾಲಿ ಅಡಿಕೆ ಖರೀದಿಯ ಉತ್ಸಾಹದಲ್ಲಿದ್ದಾರೆ.  ಅತ್ತ ಕೆಂಪಡಿಕೆ ವ್ಯವಹಾರದಲ್ಲಿ ಶಿರಸ್ಸಿಯ TSS  ವ್ಯಾಪಾರಕ್ಕೆ ಇಳಿದು ಚಾಲಿಗೆ 32,000 ದಾಟಿಸಿ ಕೆಲವೇ ದಿನಗಳಲ್ಲಿ ಮತ್ತೆ 26,000 ಕ್ಕೆ ಇಳಿಸಿದೆ. ಎಲ್ಲಿಯೂ ಅಡಿಕೆ ಟೆಂಡರ್ ಆಗಿ ಮಾರಾಟ ಆಗಿಲ್ಲ. ಇದು ಬೆಲೆ ಸ್ಥಿತರೆಯ ಬಗ್ಗೆ ಆತಂಕ ಉಂಟು ಮಾಡುತ್ತಿದೆ. ಕೆಂಪಡಿಕೆಗೆ ನಾಲ್ಕು ದಿನಕ್ಕೆ ಹಿಂದೆ 32,000 ಕ್ಕೆ ಒಂದು ಬಿಡ್ಡಿಂಗ್ ನಡೆಯುವುದರಲ್ಲಿತ್ತು. ಆದರೆ  ಕೆಲವು ದೊಡ್ಡ ವ್ಯಾಪಾರೀ  ಕುಳಗಳ ಒತ್ತಡದಿಂದ ಅದು…

Read more

ಅಂತರ್ಜಲ ಬಳಕೆಗೂ ಬೇಕು – ಲಾಕ್ ಡೌನ್ .

ಒಂದುವರೆ ತಿಂಗಳ ಕಾಲ ಅಂತರ್ಜಲದೊಂದಿಗಿನ  ಅತ್ಯಾಚಾರಕ್ಕೆ ಸ್ವಲ್ಪ ಬಿಡುವಾಗಿತ್ತು. ಆದರೂ ರಾತ್ರೆ ಹೊತ್ತು ಹಳ್ಳಿಯ ಮೂಲೆಗಳಲ್ಲಿ ವ್ಯವಹಾರ ನಡೆಯುತ್ತಿತ್ತು. ಈಗ ಮತ್ತೆ ಅತ್ಯಾಚಾರ ಪ್ರಾರಂಭವಾಗಿದೆ. ಹಳ್ಳಿಯ ಪೆಟ್ರೋಲ್ ಪಂಪುಗಳ ಮುಂದೆ ಮೂರು ನಾಲ್ಕು ಬೋರ್ ಲಾರಿಗಳು ಮೊಕ್ಕಾಂ ಹೂಡಿವೆ. ಒಂದು ತಿಂಗಳು ಅಂತರ್ಜಲಕ್ಕೆ ಬಿಡುಗಡೆ ಸಿಕ್ಕಿದೆ. ಹಾಗೆಯೇ ವರ್ಷದಲ್ಲಿ 2-3 ತಿಂಗಳು ಬಿಡುವು ಕೊಟ್ಟರೆ ಅದೆಷ್ಟೋ ಅಂತರ್ಜಲ ಶೋಷಣೆ ಕಡಿಮೆಯಾಗಬಹುದು. ಅಂತರ್ಜಲದ ಕ್ಷೀಣಿಸುತ್ತಿದೆ: ನಮ್ಮಲ್ಲಿ ಒಂದಷ್ಟು ಜನ ಬೆಳೆಗಳ ಅವಶ್ಯಕತೆಗೆ  ಬೇಕಾದಷ್ಟೇ ಬಳಸಲು ಅಂತರ್ಜಲವನ್ನು ಆವಲಂಭಿಸಿಲ್ಲ. ಅದನ್ನು…

Read more
Suresh nayak on his farm

ರೈತರ ಉದ್ದಾರಕ್ಕೆ ಇದೊಂದೇ ಪರಿಹಾರ.

ರೈತನೊಬ್ಬ ತಾನು ಬೆಳೆದ ಉತ್ಪನ್ನವನ್ನು ತಾನೇ ಮಾರಿ ಸಮಾನ ಮನಸ್ಕರಿಗೂ ಮಾರುಕಟ್ಟೆ ಒದಗಿಸಿಕೊಟ್ಟಿರುವುದು ಬಹುಷಃ  ಇನ್ನೆಲ್ಲೂ ಇರಲಿಕ್ಕಿಲ್ಲ. ಇದು ಈ ಹಿಂದೆಯೂ ಆದ ಉದಾಹರಣೆ ಇಲ್ಲ. ಇದೊಂದು ಹೊಸ ಪರಿಕಲ್ಪನೆ. ಕೊರೋನಾ ಮಹಾಮಾರಿ ದೇಶದ ಅಸಂಖ್ಯಾತ ಜನರಿಗೆ ಬಾರೀ ತೊಂದರೆಯನ್ನು ಉಂಟು ಮಾಡಿತು. ಉದ್ದಿಮೆಗಳು ಮುಚ್ಚಿದವು. ಕೆಲಸಗಾರರು ಕೆಲಸ ಕಳೆದುಕೊಂಡರು. ರೈತರು ಬದುಕಿಗಾಗಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಯಿತು. ಇಂತಹ ಸಂದರ್ಭದಲ್ಲಿ  ಒಬ್ಬ ಕೃಷಿಕ ಮಾಡಿದ ಸಾಧನೆ  ಮಾತ್ರ ಕೃಷಿಕರೆಲ್ಲರಿಗೂ ಅನುಕರಣೀಯ. ಹಿರಿಯಡ್ಕದ…

Read more

ಭೂ ತಾಯಿ ಮುನಿದಿದ್ದಾಳೆ- ನಾವೆಲ್ಲಾ ಒಟ್ಟಾಗಿ ಪ್ರಾರ್ಥಿಸೋಣ.

ಪ್ರತೀ ವರ್ಷ ಎಪ್ರೀಲ್ 22 ದಿನವನ್ನು ಜಾಗತಿಕ ಭೂಮಿಯ ದಿನ ಎಂದು ಆಚರಿಸಲಾಗುತ್ತದೆ. ಪ್ರತೀ ವರ್ಷ ಒಂದೊಂದು ಧ್ಯೇಯಗಳನ್ನು ಇಟ್ಟುಕೊಂಡು ಈ ದಿನವನ್ನು ವಿಶೇಷ ಪ್ರಾತಿನಿಧ್ಯ ಕೊಟ್ಟು ಆಚರಿಸಲಾಗುತ್ತದೆ. ಈ ವರ್ಷ ಹವಾಮಾನ ಬದಲಾವಣೆಯಂತಃ ಗಂಭೀರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅದನ್ನು ಆಚರಿಸಲಾಗುತ್ತದೆ. ಬಹುಷಃ ಈ ವರ್ಷದ  ಆಚರಣೆಗೆ ಪ್ರಕೃತಿಯ ಅಸಮಾಧಾನ ಏನೋ ಇದ್ದಂತಿದೆ. ಕೊರೋನಾ ಎಂಬ ಮಹಾ ಮಾರಿ ರೂಪದಲ್ಲಿ ಮನುಕೂಲದ ಮೇಲೆ ಭೂ ತಾಯಿ ಮುನಿದಂತಿದೆ. ಜಗತ್ತೇ ಮನುಕುಲ ಕಾಣದ ಅನಾಹುತದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಇದು…

Read more
rain water

ಈ ವರ್ಷದ ಮಳೆ ಭವಿಷ್ಯ

ಮಳೆ ಭವಿಷ್ಯವನ್ನು ಹಿಂದೆ ಪಂಚಾಗಕರ್ತರು ಹೇಳುತ್ತಿದ್ದರು. ಈಗ ಅದನ್ನು ಹವಾಮಾನ ಇಲಾಖೆ ಹೇಳುತ್ತದೆ. ಅದು ಪೂರ್ವಭಾವಿಯಾಗಿಯೇ. ಭಾರತೀಯ ಹವಾಮಾನ ಕಚೇರಿ ಈ ವರ್ಷ ಸರಾಸರಿ ಮಳೆಯಾಗುವ ಸೂಚನೆಯನ್ನು ನೀಡಿದೆ. ಮೇ ಕೊನೇ ವಾರ, ಜೂನ್ ಒಂದನೇ ತಾರೀಖಿಗೆ ಕೇರಳ ಪ್ರವೇಶಿಸುವ ಮುಂಗಾರು ಮಳೆ ಸಪ್ಟೆಂಬರ್ ತನಕ ದೇಶದಾದ್ಯಂತ ಏಕ ಪ್ರಕಾರವಾಗಿ ಬೀಳಲಿದ್ದು, ಕೃಷಿಕರ ಬದುಕಿಗೆ ಇದು ನೆಮ್ಮದಿ ತರಲಿದೆ ಎಂಬುದಾಗಿ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಹೇಳುತ್ತಾರೆ. ಈ ವರ್ಷದ ಮುಂಗಾರು ಮಳೆಯನ್ನು ಸರಾಸರಿ ಮಳೆ…

Read more

ಸರಕಾರ ಗುಟ್ಕಾ ನಿಷೇಧ ಮಾಡಲು ಸಾಧ್ಯವೇ ?

ದೇಶದ ಅರ್ಥ ವ್ಯವಸ್ಥೆಗೆ ತಂಬಾಕು, ಮತ್ತು ಅದರ ಉತ್ಪನ್ನಗಳ ಮೂಲಕ ವಾರ್ಷಿಕ 43,000 ಕೋಟಿ ಆದಾಯ ಸಂಗ್ರಹ ಇದೆ. ಸುಮಾರು 4.6 ಕೋಟಿ ಜನ ಈ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಿದೆ. ಈ ಆದಾಯವನ್ನು ಕಳೆದು ಕೊಳ್ಳಲು ಮತ್ತು ಇಷ್ಟು ಕೆಲಸಗಾರರಿಗೆ ಬೇರೆ ಕೆಲಸ ಕೊಡಲು ನಮ್ಮ ಸರಕಾರಕ್ಕೆ  ಸಾಧ್ಯವಿದ್ದರೆ ಮಾತ್ರ ಗುಟ್ಖಾ  ಪಾನ್ ಮಸಾಲ ನಿಷೇಧ ಸಾಧ್ಯ. ಅದೂ ಈಗಿನ ಆರ್ಥ ವ್ಯವಸ್ಥೆಗೆ ಬಿದ್ದ ಹೊಡೆತವನ್ನು ತಡೆಯುವ ಶಕ್ತಿ ಯಾವ ಸರಕಾರಕ್ಕೂ ಇರಲಿಕ್ಕಿಲ್ಲ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕೆಲವು…

Read more

ಕಲ್ಲಿನ ಕೂರೆಯ ಹುಡಿಯೂ ಉತ್ತಮ ಗೊಬ್ಬರ ಗೊತ್ತೇ?

ಸಸ್ಯ ಪೋಷಕವಾಗಿ ನಮಗೆ ರಾಕ್ ಫೋಸ್ಫೇಟ್ ಬಳಕೆ ಗೊತ್ತು.ಇದು ಕಲ್ಲಿನ ಹುಡಿ. ಅದೇ ರೀತಿ ನಮ್ಮ ಸುತ್ತಮುತ್ತ ಬೇರೆ ಬೇರೆ  ಶಿಲೆಗಳನ್ನು ಕಾಣಬಹುದು. ಶಿಲೆಗಳೆಲ್ಲವೂ ಜ್ವಾಲಾಮುಖಿಯ ಮೂಲಕ ಸೃಷ್ಟಿಯಾದವುಗಳು. ಅದರಲ್ಲಿ ಬೆಳೆ ಪೋಷಣೆಗೆ ಬೇಕಾಗುವ ವಿವಿಧ ಪೋಷಕಾಂಶಗಳು ಇವೆ.  ಇದನ್ನುಮೊತ್ತ ಮೊದಲ ಬಾರಿಗೆ  ಮಂಡ್ಯದ ಕೃಷಿ ಮಹಾವಿಧ್ಯಾಲಯದ  ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಯ ಅಸ್ತಿತ್ವಕ್ಕೆ ಮಣ್ಣೇ ಆಧಾರ. ಬೆಳೆಗಳಿಗೆ ಮರಗಿಡಗಳಿಗೆ ಆಸರೆ ನೀಡುತ್ತದೆ. ಪೋಷಕಾಂಶವನ್ನು ಒದಗಿಸುತ್ತದೆ. ನೀರನ್ನುಹಿಡಿದಿಟ್ಟುಕೊಂಡು ಬೇಕಾದಾಗ ಪೂರೈಸುತ್ತದೆ. ಮಣ್ಣು ಸಕಲ ಪೋಷಕಾಂಶಗಳನ್ನೂ…

Read more

ವಿದ್ಯುತ್ ಶಕ್ತಿ ಕೊಟ್ಟರೆ ಕೃಷಿ ದೇಶಕ್ಕೆ ಅನ್ನ ಕೊಡುತ್ತದೆ.

ಒಬ್ಬನಿಗೆ ತಾನು  ಮಹಾಮಂತ್ರಿ ಆಗೇ ಬಿಟ್ಟೆ ಎಂಬ ಭ್ರಮೆ ಉಂಟಾಯಿತು. ತಕ್ಷಣ ವಿಧಾನ ಸೌಧದ ಒಳ ಹೋಗಿ ಮುಖ್ಯಮಂತ್ರಿ  ಆಸನದಲ್ಲಿ ಕುಳಿತು ತಕ್ಷಣ ಮಾಡಿದ್ದು, ರೈತರ  ಎಲ್ಲಾ ಸಾಲ ಮನ್ನಾ. ರೈತರ ಮೇಲಿನ ಮೊಕದ್ದಮೆ ವಜಾ. 24 ಗಂಟೆ ವಿದ್ಯುತ್, ರೈತರಿಗೆ ಪೆನ್ಶನ್. ಇದೆಲ್ಲಾ ಮಾಡಿದ್ದು ಬರೇ ಶಯನದ ಕನಸಿನಲ್ಲಿ. ಕನಸಿನಿಂದೇಳುವಾಗ ಮುಖ್ಯ ಮಂತ್ರಿಗಿರಿ ಅವರದ್ದಾಗಿರಲಿಲ್ಲ.   ಒಂದು ವೇಳೆ ಅದೇ ರಾಜಕಾರಣಿ ಮುಂದೆ ಮುಖ್ಯ ಮಂತ್ರಿಯೇ ಆದನೆಂದಿಟ್ಟುಕೊಳ್ಳೋಣ. ಆಗ ಈ ಹಿಂದೆ ಮಾಡಿದಂತೆ ಸಾಲಮನ್ನಾ ಮಾಡಲು ಮನಸ್ಸು…

Read more
error: Content is protected !!