ಕೆಂಪಡಿಕೆ- ಸುಪಾರಿ ಎರಡೂ ಏರಿಕೆ- ಸೋಮವಾರ 06-12-2021 ರ ಧಾರಣೆ.
ಕರಾವಳಿಯಲ್ಲಿ ಅಡಿಕೆ ಖರೀದಿಯ ಪ್ರಮುಖ ಸಂಸ್ಥೆ ಕ್ಯಾಂಪ್ಕೋ ಇಂದು ಹಳೆ ಸುಪಾರಿ, ಡಬ್ಬಲ್ ಚೋಲ್ ಗಳಿಗೆ ಏಕಾಏಕಿ 10 ರೂ. ಏರಿಸಿ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನವನ್ನು ಉಂಟುಮಾಡಿದೆ. ಖಾಸಗಿಯವರು ನಾವೂ ಸ್ಪರ್ಧೆಗೆ ಸಿದ್ದರಿದ್ದೇವೆ ಎಂದು ತೋರಿಸಿದ್ದಾರೆ. ಕ್ಯಾಂಪ್ಕೋ ಹೊಸ ಸುಪಾರಿ ಕ್ವಿಂಟಾಲಿಗೆ 43,500, ಖಾಸಗಿ 45,000, ಹಳೆ ಅಡಿಕೆ ಕ್ಯಾಂಪ್ಕೋ 42,500- ಡಬ್ಬಲ್ ಚೋಲ್ 43,000 ಖಾಸಗಿ 54,000 ದರದಲ್ಲಿ ಖರೀದಿ ನಡೆದಿದೆ. ಶಿರಸಿಯಲ್ಲಿ ಕೆಂಪಡಿಕೆ (ರಾಶಿ) ಮತ್ತೆ ಬೆಲೆ ಏರಿಕೆಯಾಗಿದೆ. ಬಹುಷಃ ಈ ವಾರ ಮತ್ತೆ…
