ಈ ಹಣ್ಣು ತಿಂದರೆ ಆರೋಗ್ಯ ನಿಮ್ಮ ಹತೋಟಿಯಲ್ಲಿರುತ್ತದೆ.

ಪ್ಯಾಶನ್ ಪ್ರುಟ್ Passiflora ಎಂಬ ಹಣ್ಣನ್ನು ಬಹಳ ಹಿಂದಿನಿಂದಲೂ ತಜ್ಞರು ಬಹಳ ಆರೋಗ್ಯಕರ ಹಣ್ಣು ಎಂದು ಹೇಳುತ್ತಾ ಬಂದಿದ್ದಾರೆ. ಇದನ್ನು ಮೈನರ್ ಪ್ರೂಟ್  ವಿಭಾಗದಲ್ಲಿ ಸೇರಿಸಿ ಅದರ ಆರೋಗ್ಯ ಗುಣ, ಬೆಳೆ ಕ್ರಮ, ಮೌಲ್ಯ ವರ್ಧನೆ ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆದಿದೆ. ಬೆಂಗಳೂರಿನ ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಇಲ್ಲಿ ಅರ್ಕಾ ಕಾವೇರಿ ಎಂಬ ನೇರಳೆ ಬಣ್ಣದ  ಹಣ್ಣಿನ ತಳಿಯನ್ನೂ ಅಭಿವೃದಿ ಮಾಡಲಾಗಿದೆ. ಈ ಹಣ್ಣು  ಬೆಳೆಸಲು ಯಾವುದೇ ಕಷ್ಟವಿಲ್ಲ….

Read more
ಸೀತಾಫಲದ ಹಣ್ಣುಗಳು

ಸೀತಾಫಲ ಬೆಳೆ ಜೀವನಕ್ಕೆ ಹೊಸ ತಿರುವು ಕೊಟ್ಟಿತು.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಂಗೊಳಗಿಯ 45 ವಯಸ್ಸಿನ ಸಣ್ಣ ರೈತ ವೆಂಕಟರಾವ ಬಿರಾದಾರ ಒಂದು ಎಕರೆಯಲ್ಲೇ ತರಹೇವಾರಿ ಹಣ್ಣು ತರಕಾರಿ ಬೆಳೆದು ವರ್ಷಕ್ಕೆ ಸುಮಾರು 5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಹಗಲಿರುಳು ಕಠಿಣ ಪರಿಶ್ರಮದಿಂದ ಅರ್ಧ ಎಕರೆಯಲ್ಲಿ ಬೆಳೆದ ಸೀತಾಫಲ ಹಣ್ಣಿನಿಂದ  ತನ್ನ ಆರ್ಥಿಕ ಸ್ಥಿತಿಗತಿಯೇ  ಬದಲಾಯಿತು. ಇದು ಇತರೆ ಸಣ್ಣ ರೈತರಿಗೆ ಮಾದರಿಯಾಗಿದೆ. ಕೃಷಿ ಒಂದೇ ಅವಕಾಶವಾಗಿತ್ತು: ವೆಂಕಟರಾವ್ ಬಡತನದ ಕಾರಣ ಎಸ್.ಎಸ್.ಎಲ್.ಸಿ. ನಂತರ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ…

Read more

ತೆಂಗಿಗೆ ವಿಷ ಕೊಟ್ಟರೆ ಎಳನೀರು ಸಿಹಿಯಾಗುವುದೇ?

ತೆಂಗಿನ ಕಾಯಿಯ, ಎಳೆಕಾಯಿಯ   ನೀರು ಸಿಹಿಯಾಗಿರಲಿ ಅದರ ತಳಿ ಗುಣ ಕಾರಣ ಹೊರತು ಅದನ್ನು ಹೊರ ವಸ್ತುಗಳನ್ನು ಸೇರಿಸಿ ಸಿಹಿ ಮಾಡಲು ಸಾಧ್ಯವಿಲ್ಲ. ತೆಂಗಿನ ಕೆಲವು ತಳಿಗಳು ಸಿಹಿಯಾದ ಎಳನೀರನ್ನು ಕೊಡುತ್ತವೆ. ಮತ್ತೆ ಕೆಲವು ಸ್ವಲ್ಪ ಸಪ್ಪೆ. ಇದು ಯಾರೂ ಮಾಡುವುದು ಅಲ್ಲ. ಅದು ಅದರ ಅಂತರ್ಗತ ಗುಣ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸಿಹಿ ಹೆಚ್ಚಿಸಲು ಸೂಕ್ಷ್ಮ ಪೊಷಕಾಂಶ ಮತ್ತು ಪೊಟ್ಯಾಶಿಯಂ ಬಳಕೆ ನೆರವಾಗುತ್ತದೆಯಾದರೂ  ಯಾವ ಕೀಟನಾಶಕ ರೋಗ ನಾಶಕ ಇದನ್ನು ಹೆಚ್ಚಿಸುವುದಿಲ್ಲ. ಇತ್ತೀಚೆಗೆ ಒಂದು ವಾಟ್ಸ್…

Read more
chines potato

ಈ ಗಡ್ಡೆಗೆ ಬಹಳ ಬೇಡಿಕೆ ಮತ್ತು ಉತ್ತಮ ಬೆಲೆ.

ಗಡ್ಡೆ ಗೆಣಸಿನ ಬೆಳೆಗಳಲ್ಲಿ  ಅಧಿಕ ಬೆಲೆಯ ಬೆಳೆ ಎಂದರೆ ಸಾಂಬ್ರಾಣಿ. ಚೈನೀಸ್ ಪೊಟ್ಯಾಟೋ ಎಂಬ ಈ ತರಕಾರಿ ನಮ್ಮಲ್ಲಿ ಬಹಳ ಪುರಾತನ ಕಾಲದಿಂದಲೂ ಬೆಳೆಯಲ್ಪಡುತ್ತಿತ್ತು. ಈಗ ಇದನ್ನು ಕೆಲವೇ ಕೆಲವು ಜನ ಮಾತ್ರ ಬೆಳೆಯುತ್ತಿದ್ದು, ಸರಾಸರಿ  ಕಿಲೋ 60 ರೂ ತನಕ ಬೆಲೆ ಇದೆ. ಅಪರೂಪದ  ತರಕಾರಿಯಾದ ಕಾರಣ ಬಾರೀ ಬೇಡಿಕೆಯೂ ಇದೆ. ತರಕಾರಿ ಅಂಗಡಿಗೆ ಬರುವುದೇ ಕಡಿಮೆ. ಬಂದರೆ ಕ್ಷಣದಲ್ಲಿ ಖಾಲಿ. ಆಲೂಗಡ್ಡೆಯ ತರಹವೇ ಇರುವ ಈ ಗಡ್ಡೆ ಅದರ ತಮ್ಮ ಎಂದರೂ ತಪ್ಪಾಗದು. ಆಲೂಗಡ್ಡೆಗೂ ಇದಕ್ಕೂ…

Read more
brinjal grower

ಇದು ಭಾರೀ ಬೇಡಿಕೆಯ ಗುಳ್ಳ ಬದನೆ.

ಕರಾವಳಿಯ ಬದನೆ ತಳಿಗಳಲ್ಲಿ ಹೆಸರುವಾಸಿಯಾದ ಮಟ್ಟು ಗುಳ್ಳಕ್ಕೆ ಸರಿಸಾಟಿಯಾದ ಮತ್ತೊಂದು ಗುಳ್ಳ ,ಇದೇ ಉಡುಪಿ ಜಿಲ್ಲೆಯ ಮತ್ತೊಂದೆಡೆಯೂ ಬೆಳೆಯುತ್ತಿದೆ. ಇದರ ಆಕಾರ ಬಣ್ಣ ಎಲ್ಲವೂ ಏಕಪ್ರಕಾರ. ಒಂದೇ ಒಂದು ವ್ಯತ್ಯಾಸ ಎಂದರೆ ಮಟ್ಟು ಗುಳ್ಳಕ್ಕೆ ತೊಟ್ಟಿನಲ್ಲಿ ಮುಳ್ಳು ಇದೆ. ಇದಕ್ಕೆ ಇಲ್ಲ.  ಕರಾವಳಿಯ ಜನರ ಬಲು ಅಚ್ಚುಮೆಚ್ಚಿನ  ಗುಳ್ಳ ಬದನೆಯ ಆಸೆಯನ್ನು ಪೂರೈಸಿದ ಬದನೆಯಲ್ಲಿ ಈ ಊರಿನ ಬದನೆ ಒಂದು. ಕರಾವಳಿಯ ಜನ ಎಲ್ಲೇ ಹೋಗಲಿ ಗುಳ್ಳ ಬದನೆ ಸಿಕ್ಕರೆ ಎಷ್ಟೇ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಾರೆ….

Read more
snail

ಅಡಿಕೆ ಮರದ ಸಿಂಗಾರ ತಿನ್ನುವ ಸಿಂಬಳದಹುಳು ನಿಯಂತ್ರಣ

ಸಿಂಬಳದ ಹುಳುವಿನ ಉಪಟಳ ಇಬ್ಬನಿ ಬೀಳುವ ಚಳಿಗಾಲದಲ್ಲಿ ಹೆಚ್ಚು. ಈ ಹುಳುಗಳು ನೆಲದಲ್ಲಿ ಇರುತ್ತವೆ. ಅವು ಆಹಾರ ಹುಡುಕುತ್ತಾ ಮರವನ್ನು ಏರಿ ಅಲ್ಲಿ ಎಳೆ ಹೂ ಗೊಂಚಲನ್ನು ತಿನ್ನುತ್ತವೆ. ಬರೇ ಅಡಿಕೆ ಹೂ ಗೊಂಚಲು ಮಾತ್ರವಲ್ಲ ಇವು ಆಹಾರವಾಗಿ ಹಣ್ಣು ತರಕಾರಿಗಳನ್ನೂ ತಿನ್ನುತ್ತವೆ. ಇದನ್ನು ನಿಯಂತ್ರಿಸದೆ ಇದ್ದರೆ  ಒಂದೆರಡು ಸಿಂಗಾರ ಹಾಳಾಗುತ್ತದೆ. ಇಳುವರಿ ನಷ್ಟವಾಗುತ್ತದೆ. ಬಸವನ ಹುಳುಗಳು, ಸಿಂಬಳದ ಹುಳುಗಳು , ಮಳೆಗಾಲದಲ್ಲಿ ನೆಲದಲ್ಲಿ ಅಲ್ಲಲ್ಲಿ ಸಂಚರಿಸುತ್ತಾ ಇರುತ್ತವೆ. ಹಾವಸೆ ಇತ್ಯಾದಿಗಳು ಇದರ ಆಹಾರ. ಅದನ್ನು ತಿನ್ನುತ್ತಾ…

Read more
Lakshmana phala

ಲಕ್ಷ್ಮಣ ಫಲ – ಇದು ಕ್ಯಾನ್ಸರ್ ನಿವಾರಕವೇ? ಇಲ್ಲಿದೆ ವಾಸ್ತವ.

ಕೆಲವು ಹಣ್ಣು ಹಂಪಲುಗಳಲ್ಲಿ ಒಮ್ಮೊಮ್ಮೆ ಭಾರೀ ಔಷಧೀಯ ಮಹತ್ವ ಬಂದು ಅದಕ್ಕೆ ಬೆಲೆ ಬರುತ್ತದೆ. ಹಾಗೆ ನೋಡಿದರೆ  ಇಂತಹ ಔಷಧೀಯ ಗುಣದ ಹಣ್ಣು ಹಂಪಲುಗಳು, ಕಾಯಿ, ಎಲೆ ಸೊಪ್ಪುಗಳು ಎಷ್ಟು ನಮ್ಮಲ್ಲಿವೆಯೋ ಯಾರಿಗೆ ಗೊತ್ತು? ಕೆಲವು ಪ್ರಚಾರಕ್ಕೆ ಬಂದು ಕೆಲವರಿಗೆ ಅದು ಲಾಭ ಮಾಡಿಕೊಡುತ್ತವೆ. ಇಂತಹ ಹಣ್ಣುಗಳ ಸಾಲಿನಲ್ಲಿ ಬಂದ ಒಂದು ಹಣ್ಣು ಲಕ್ಷ್ಮಣ ಫಲ ಎಂಬ ಒಂದು ಹುಳಿ ಹಣ್ಣು. ಯಾರೋ ಲಕ್ಷ್ಮಣ ಫಲ ಎಂಬುದು ಭಾರೀ  ಔಷಧೀಯ ಮಹತ್ವವನ್ನು ಹೊಂದಿದೆ ಎಂದರು ಅದಕ್ಕೆ ಈಗ…

Read more
ಮಣ್ಣು ಪರೀಕ್ಷೆ ಬೇಕಾಗಿಲ್ಲದ ಮಣ್ಣು ಇದು

ಮಣ್ಣು ಪರೀಕ್ಷೆ -ನಿಮ್ಮ ಸ್ವ ಅನುಭವದಲ್ಲೇ ಮಾಡಬಹುದು.

ಮಣ್ಣು ಪರೀಕ್ಷೆ ಮಾಡುವುದರಿಂದ ಗೊಬ್ಬರವನ್ನು  ಎಷ್ಟು ಬಳಸಬೇಕು, ಯಾವುದು ಬೇಕು, ಯಾವುದು ಬೇಕಾಗಿಲ್ಲ ಎಂಬುದು ತಿಳಿಯುತ್ತದೆ. ಇದು ಸತ್ಯವಾದರೂ ಮಣ್ಣು ಎಂಬುದು ಕಾಲಕಾಲಕ್ಕೆ  ಸ್ಥಿತಿಗತಿ ಬದಲಾವಣೆಯಾಗುವ ಕಾರಣ ಅದನ್ನು ಹೇಗೆ ಪರೀಕ್ಷಿಸಿ ಅದನ್ನು ತಿಳಿಯುವುದು ಎಂಬುದೇ  ಪ್ರಶ್ನೆ. ಇದಕ್ಕೆಇರುವ ಉತ್ತರ ರೈತರೇ  ಪರೀಕ್ಷೆ ವಿಚಾರದಲ್ಲಿ ತಜ್ಞತೆ ಹೊಂದುವುದು. ಹಾಗೆಂದು ಮಣ್ಣು ಪರೀಕ್ಷೆ ಎಂಬುದು ಬೇಡ ಎಂದಲ್ಲ. ಅನುಕೂಲ ಇದ್ದವರು ಇದನ್ನು ಸಮೀಪದ ಕೃಷಿ ಇಲಾಖೆಯಲ್ಲಿ ಮಾಡಿಸಿಕೊಳ್ಳಬಹುದು. ಕೆಲವು ಖಾಸಗಿ ಮಣ್ಣು ಪರೀಕ್ಷಾ ಪ್ರಯೋಗಾಲಯದಲ್ಲಿ ಮಾಡಿಸಿಕೊಳ್ಳಬಹುದು. ಕೆಲವು ಭಾರತ…

Read more
ವೇಸ್ಟ್ ಡಿ ಕಂಪೊಸರ್

“ವೇಸ್ಟ್ ಡಿ ಕಂಪೋಸರ್ “ ಒಂದು ಗೊಬ್ಬರ ಅಲ್ಲ.

ಹೆಸರೇ ಹೇಳುತ್ತದೆ, ಇದು ಕೃಷಿ ತ್ಯಾಜ್ಯಗಳನ್ನು ಕಳಿಯಿಸಿ ಕೊಡುವ ಜೀವಾಣುಗಳನ್ನು ಹೊಂದಿರುವ ಉತ್ಪನ್ನ ಎಂದು. ಆದರೆ ಜನ ಇದನ್ನೇ ಗೊಬ್ಬರ ಎಂದು ಭಾವಿಸಿ, ಎಲ್ಲದಕ್ಕೂ ವೇಸ್ಟ್ ಡಿ ಕಂಪೋಸರ್ ಬಳಸಿ ಎಂದು ಸಲಹೆ ಕೊಡುತ್ತಾರೆ.  ಯಾವ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆಯೋ ತಿಳಿಯದು. ಬರೇ ಇದನ್ನು ಬಳಸಿ ಬೆಳೆಗಳಿಗೆ ಪೋಷಕಾಂಶದ ತೃಷೆ ತೀರಿತೆಂದಾದರೆ ಅದು ಒಂದು ಅದ್ಭುತವೇ ಸರಿ. ಗೊಬ್ಬರಗಳು ಅಥವಾ ಪೊಷಕಾಂಶಗಳಲ್ಲಿ ಸ್ಥೂಲ ಗೊಬ್ಬರಗಳು ಮತ್ತು ತೀಕ್ಷ್ಣ ಗೊಬ್ಬರಗಳು ಎಂದು ಎರಡು ವಿಧ. ಈಗ ಅದರಲ್ಲಿ ನ್ಯಾನೋ…

Read more
good cow structure

ಇದು ಉತ್ತಮ ಹಸುವಿನ ಲಕ್ಷಣ

ಹೈನುಗಾರಿಕೆಯ ಯಶಸ್ಸು ಹಸುವಿನ ಆಯ್ಕೆಯಿಂದ ಮೊದಲ್ಗೊಳ್ಳುತ್ತದೆ. ಪ್ರತೀಯೊಂದು ಸಸ್ಯ, ಪ್ರಾಣಿ, ಮನುಷ್ಯರಿಗೆ  ವಂಶಗುಣದಲ್ಲೇ ಕೆಲವು ವಿಶೇಷತೆಗಳು ಇರುತ್ತವೆ. ಆದರ ಮೇಲೆ  ಅವುಗಳ ಉತ್ಪಾದಕತೆಯು ನಿಂತಿರುತ್ತದೆ. ಕೃಷಿಕರಲ್ಲಿ ಬಹುತೇಕ ಮಂದಿ ಹೈನುಗಾರಿಕೆ ಅವಲಂಬಿತರು. ಹಸು ಕೊಳ್ಳುವುದು, ಕೊಡುವುದು ಇದ್ದೇ ಇರುತ್ತದೆ. ಹೀಗಿರುತ್ತಾ ಕೊಳ್ಳುವ ಹಸು ಹೇಗಿರಬೇಕು ಎಂಬ ಬಗ್ಗೆ  ಪ್ರತೀಯೊಬ್ಬರಿಗೂ ಗೊತ್ತಿರಲೇ ಬೇಕು. ಹಸು ಕೊಳ್ಳುವುದು ಒಂದು ಪರೀಕ್ಷೆ: ಯಶಸ್ವೀ  ಹೈನುಗಾರಿಕೆಯ ಆಧಾರಸ್ಥಂಬವಾದ ಹಸು- ಕರುವನ್ನು ರೈತರು ತಮ್ಮ ಮನೆಯಲ್ಲೇ ತಳಿ ಸುಧಾರಣೆಯ ಮೂಲಕ ಪಡೆಯುವುದು ಎಲ್ಲದಕ್ಕಿಂತ ಉತ್ತಮ….

Read more
error: Content is protected !!