Amarantus an short term vegetable

50,000ಖರ್ಚು ಮಾಡಿ 1 ತಿಂಗಳಲ್ಲಿ 1 ಲಕ್ಷ ಗಳಿಸುವ ಬೆಳೆ.

ಕೆಲವು ಅಲ್ಪಾವಧಿ ಬೆಳೆಗಳು ಸ್ವಲ್ಪ  ಹೆಚ್ಚಿನ ಲಾಭ ತಂದು ಕೊಡುತ್ತವೆ. ಅಂತದ್ದರಲ್ಲಿ ಒಂದು ಹರಿವೆ. ಸೊಪ್ಪು ತರಕಾರಿಗಳಿಗೆ ಕೆಲವು ಸೀಸನ್ ಗಳಲ್ಲಿ ಭಾರೀ ಬೇಡಿಕೆ. ಆ ಸೀಸನ್ ತಿಳಿದುಕೊಂಡು ಅದಕ್ಕನುಗುಣವಾಗಿ ಬೆಳೆ ಬೆಳೆದರೆ ಲಾಭವಾಗುತ್ತದೆ. ಇದನ್ನು ಮಾರುಕಟ್ಟೆಯಲ್ಲಿ  ತಿಳಿದುಕೊಂಡು ಸುರೇಶ್ ರವರು ಮಳೆಗಾಲದಲ್ಲಿ ಮತ್ತು ಮಳೆಗಾಲ ಮುಗಿಯುವ ಈ ಸಮಯದಲ್ಲಿ ಹರಿವೆ ಬೆಳೆದಿದ್ದಾರೆ. ಎರಡನೇ ಬೆಳೆ ಕಿತ್ತು ಆಗಿದೆ. ಮೂರನೇ ಬೆಳೆಯನ್ನು ಇನ್ನೇನು ಒಂದು ವಾರದಲ್ಲಿ ಬಿತ್ತನೆ ಮಾಡಲಿದ್ದಾರೆ. ಮಳೆಗಾಲ ಕಳೆದ ತಕ್ಷಣ  ಹರಿವೆ, ಬಸಳೆ ಮುಂತಾದ…

Read more
arecanut planting and shade- ನೆಡುವಾಗ ನೆರಳು ಮಾಡಿ.

ಅಡಿಕೆ ಸಸಿ ನೆಡುವಾಗ ಮುಖ್ಯವಾಗಿ ಅರಿತುಕೊಳ್ಳಬೇಕಾದ ವಿಚಾರ.

ನಾನು ಅಡಿಕೆ ಸಸಿ ಹಾಕಿದ್ದೀನೆ. ಸಾವಿರ ಸಾವಿರ ಲೆಕ್ಕ ಕೊಡಬಹುದು. ಎಂಬುದಾಗಿ ಜನ ಹೇಳುತ್ತಾರೆ. ಒಂದು ವರ್ಷದ ನಂತರ ನೆಟ್ಟ ಗಿಡದಲ್ಲಿ ಹಲವು ಗಿಡ ಸತ್ತು ಹೋಗಿದೆ ಎನ್ನುತ್ತಾರೆ. ಕೆಲವು ಗಿಡ ಮಾತ್ರ ಚೆನ್ನಾಗಿ ಬೆಳೆದಿದೆ. ಉಳಿದವು ನೆಟ್ಟ ಹಾಗೆ ಇದೆ ಎನ್ನುತ್ತಾರೆ. ಇದಕ್ಕೆ ಕಾರಣ ಮತ್ತೇನೂ ಅಲ್ಲ. ಪಾಲನೆಯಲ್ಲಿ ನಿರ್ಲಕ್ಷ್ಯ. ಎಳೆಯ ಪ್ರಾಯದಲ್ಲಿ ಸಸಿಗಳನ್ನು ಬೆಳೆಸುವುದು ಒಂದು ತಪಸ್ಸಿನ ತರಹ. ಗಿಡ ನೆಟ್ಟು ಬಿಟ್ಟು, ನೀರಾವರಿ ಮಾಡಿ ಗೊಬ್ಬರ ಕೊಟ್ಟರೆ ಸಾಲದು. ಎಳೆಯ ಪ್ರಾಯದಲ್ಲಿ ಅದನ್ನು ನಿತ್ಯ ಗಮನಿಸುತ್ತಿದ್ದು,…

Read more
ಬಯೋ ಚಾರ್

ಮಣ್ಣಿನ ಸ್ನೇಹಿತ -ಬಯೋ ಚಾರ್.

ಮಣ್ಣಿಗೆ ಒಂದು ಜೀವ ಚೈತನ್ಯ ಎಂಬುದಿದೆ. ಮಣ್ಣಿನ ಜೀವಾಣುಗಳಿಗೆ ಬದುಕಲು ಸೂಕ್ತವಾದ ವಾತಾವರಣ ಬೇಕು. ಅದೇ ರೀತಿಯಾಗಿ ತೇವಾಂಶ ಭರಿತ ತಂಪಾದ ವಾತಾವರಣವೂ ಬೇಕು. ಇದನ್ನು ಒದಗಿಸಿಕೊಡುವಂತದ್ದೇ  ಬಯೋ ಚಾರ್. ಅರೆ ಸುಟ್ಟ ಕೃಷಿ ತ್ಯಾಜ್ಯಗಳು ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಿ, ಮಣ್ಣಿಗೆ ಜೀವ ಚೈತನ್ಯವನ್ನು ಕೊಡುತ್ತದೆ. ಮಣ್ಣಿಗೆ ಒಂದಷ್ಟು ತರಗೆಲೆ ಹಾಕಿ. ಅದು ಮಣ್ಣಿನಲ್ಲಿರುವ ಅಸಂಖ್ಯಾತ ಜೀವಾಣುಗಳ ಸಹಯೋಗದಿಂದ ಕರಗಿ ಮಣ್ಣಾಗುತ್ತದೆ. ಹೆಚ್ಚೆಂದರೆ  ವರ್ಷ ತನಕ ಇರಬಹುದು. ಅದೇ ರೀತಿಯಲ್ಲಿ ಒಂದು ಕಟ್ಟಿಗೆಯನ್ನು ಹಾಕಿದರೂ…

Read more
ಮಡಹಾಗಲ ಕಾಯಿ ತುಂಬಿದ ಬುಟ್ಟಿ.

ಹೆಚ್ಚಿನ ಬೆಲೆಯಿರುವ ಸುಲಭವಾಗಿ ಬೆಳೆಯುವ ತರಕಾರಿ.

ಮಡಹಾಗಲ ಎಂಬುದು ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ  ಹಾಗೆಯೇ ಅಂಡಮಾನ್ ನಿಕೋಬಾರ್ ಮುಂತಾದ ಕಡೆ ಇದು ವೈವಿಧ್ಯಮಯ ತಳಿಗಳಾಗಿ ಬೆಳೆಯಲ್ಪಡುತ್ತವೆ. ಪ್ರಾದೇಶಿಕವಾಗಿ ಇದರಲ್ಲಿ ತಳಿಗಳು ಭಿನ್ನವಾಗಿದ್ದು, ಈಶಾನ್ಯ ರಾಜ್ಯಗಳಾದ ಅಸ್ಸಾಂ , ತ್ರಿಪುರಾ, ಒಡಿಸ್ಸಾ, ಪಶ್ಚಿಮ ಬಂಗಾಳ ಮುಂತಾದ  ಕಡೆ ಇದರ ವಾಣಿಜ್ಯ ಬೇಸಾಯ ನಡೆಯುತ್ತದೆ. ಇಲ್ಲಿ ಸ್ವಲ್ಪ ದೊಡ್ದ ಗಾತ್ರದ ಅಧಿಕ ಇಳುವರಿಯ ತಳಿಗಳೂ ಇವೆ. ಕಾಡುಹೀರೆ, ಅಥವಾ ಅಥವಾ ಕಾಡು ಹಾಗಲ ಎಂದು ಸ್ಥಳೀಯ ಜನ ಕರೆಯುವ ಇದರ ಹೆಸರು…

Read more
6 ವರ್ಷಕ್ಕೆ ಅಡಿಕೆ -ಫಲ – High yield in arecanut

ಅಡಿಕೆ -ಫಲ ಬರುವ ಸಮಯಕ್ಕೇ ತೋಟ ಫ್ರೀ –ಹೇಗೆ?

ಅಡಿಕೆ ತೋಟ ಎಂದರೆ  ನಿರ್ದಿಷ್ಟ ವರ್ಷಕ್ಕೇ ಇಳುವರಿ ಬರಬೇಕು. ಗರಿಷ್ಟ  ಇಳುವರಿ ಸಿಗಬೇಕು. ಅದಕ್ಕೆ ಎಳವೆಯಲ್ಲಿ ಸೂಕ್ತ ಮಿಶ್ರ ಬೆಳೆ ಆರಿಸಬೇಕು. ಅಡಿಕೆ ಬೆಳೆಸುವಾಗ ಪ್ರಾರಂಭದ ಮೂರು ನಾಲ್ಕು ವರ್ಷಗಳ ಕಾಲ ಯಾವ ಮಿಶ್ರ ಬೆಳೆ ಬೆಳೆಯುತ್ತೇವೆಯೋ ಅದನ್ನು ಅವಲಂಭಿಸಿ, ಅದರ ಇಳುವರಿ ನಿರ್ಧಾರವಾಗುತ್ತದೆ. ಎಳೆ ಪ್ರಾಯದಲ್ಲಿ ಮಗುವನ್ನು ಯೋಗ್ಯ ರೀತಿಯಲ್ಲಿ ಸಾಕಿದರೆ ಮಾತ್ರ ಅದರ ಮುಂದಿನ ಭವಿಷ್ಯ ಉತ್ತಮವಾಗುತ್ತದೆ. ಇದರಂತೆ ಅಡಿಕೆ, ತೆಂಗು ಮುಂತಾದ  ಧೀರ್ಘಾವಧಿ ಬೆಳೆಗಳೂ ಸಹ. ಮಿಶ್ರ ಬೆಳೆಗಳಿಂದ ಬರುವ ಆದಾಯದಿಂದ ಇಡೀ ಹೊಲವೇ…

Read more
ಹೂ ಬಿಟ್ಟದ್ದೆಲ್ಲಾ ಕಾಯಿಯಾಗುವ ಉತ್ತಮ ತರಕಾರಿ ತೊಂಡೆ

ಮಂಗಗಳ ಕಾಟ ಇಲ್ಲದ ಲಾಭದ ತರಕಾರಿ ಬೆಳೆ ಇದು.

ಬಹುತೇಕ ತರಕಾರಿಗಳಲ್ಲಿ ಗಂಡು ಹೂವು, ಹೆಣ್ಣು ಹೂವು ಗಳಿರುತ್ತವೆ. ಗಂಡಿನ ಮೂಲಕ ಪರಾಗಸ್ಪರ್ಶ ಆಗಿ ಕಾಯಿ ಕಚ್ಚಬೇಕು. ಆದರೆ ತೊಂಡೆ ಕಾಯಿ ಹಾಗಲ್ಲ. ಎಲ್ಲಾ ಹೂವುಗಳೂ ಕಾಯಿಯಾಗುತ್ತದೆ. ತೊಂಡೆ ಕಾಯಿ ಬೇಡಿಕೆಯ ತರಕಾರಿ. ರಾಜ್ಯದ ಎಲ್ಲಾ ಕಡೆ  ಬೆಳೆಸಬಹುದು. ಒಮ್ಮೆ ತೊಂಡೆ ಬೆಳೆಸಿದವರು ಮತ್ತೆ  ಆ ಕೃಷಿ ಬಿಡುವುದಿಲ್ಲ. ಮಳೆ ಕಡಿಮೆ ಇರುವ ಕಡೆ ಇದನ್ನು ವರ್ಷದುದ್ದಕ್ಕೂ ಬೆಳೆಸಬಹುದು.  ಮಳೆ ಹೆಚ್ಚು ಇರುವಲ್ಲಿ ನವೆಂಬರ್ ತಿಂಗಳ ನಂತರ ಜೂನ್  ತನಕ ಬೆಳೆ  ಬೆಳೆಸಬಹುದು. 100 ಚದರ ಅಡಿಯ…

Read more
ಪರಭಕ್ಷಕ ಇರುವೆ

ಇರುವೆಗಳಿಂದ ಬೆಳೆಗೆ ತೊಂದರೆ ಇದೆಯೇ?

ಇರುವೆಗಳು ನಮ್ಮ ಹೊಲದಲ್ಲಿ ಅಲ್ಲಲ್ಲಿ ನೆಲದ ಮಣ್ಣನ್ನು ತಿರುವಿ ಹಾಕುವ  ಕೆಲಸವನ್ನು ಮಾಡುತ್ತವೆ. ಕೆಲವೊಮ್ಮೆ  ಹಣ್ಣು ಹಂಪಲುಗಳ ಮೇಲೆಯೂ ವಾಸಿಸುತ್ತವೆ. ಎಲೆಯಲ್ಲಿ ಗೂಡುಕಟ್ಟಿ ಕುಳಿತಿರುತ್ತವೆ. ಇವುಗಳಿಂದ ರೈತನಿಗೆ ಯಾವ ಹಾನಿಯೂ ಇಲ್ಲ. ಇವು ಒಂದು ದೃಷ್ಟಿಯಲ್ಲಿ  ಮಣ್ಣನ್ನು ಸುಸ್ಥಿತಿಯಲ್ಲಿಡುವ ಜೀವಿಗಳು. ಯಾರ ಮಣ್ಣಿನಲ್ಲಿ ಇರುವೆಗಳು ಚಟುವಟಿಕೆಯಲ್ಲಿ ಇರುತ್ತವೆಯೋ ಆ ಮಣ್ಣು ಫಲವತ್ತಾದ ಮಣ್ಣಾಗಿರುತ್ತದೆ. ಇರುವೆಗಳಲ್ಲಿ ಪ್ರಕಾರಗಳು: ನೆಲದಲ್ಲಿ ಹಲವಾರು ಬಗೆಯ ಇರುವೆಗಳು ವಾಸವಾಗಿರುತ್ತವೆ. ಸಾಮಾನ್ಯವಾಗಿ ನೆಲದಲ್ಲಿ  ಹರಿದಾಡುವ ಇರುವೆಗಳು ಬೇರೆ ಕಡೆ ವಾಸಿಸುವುದು ಅಪರೂಪ. ಕೆಲವು ಇರುವೆಗಳು…

Read more
ಭತ್ತದ ಬೆಳೆ ಹೊಲದಲ್ಲಿ ನವೀನ್ ಚಂದ್ರ ಜೈನ್ -Naveen chandra jain

ಭತ್ತ ಬೆಳೆಯುವವರು ಒಮ್ಮೆ ಇವರ ಅನುಭವವನ್ನು ಕೇಳಿ.

ಯಾವುದೇ ಬೆಳೆ ನಷ್ಟದ ಬೆಳೆ ಅಲ್ಲ. ಬೆಳೆಯ ಪೂರ್ವಾಪರವನ್ನು ಅರಿತುಕೊಳ್ಳಬೇಕು. ಆಯಾ ಬೆಳೆಗೆ ಏನು ಬೇಕು, ಹೇಗೆ ಬೆಳೆಯಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಸಂದೇಹಗಳನ್ನು ಸಂಕೋಚ ಇಲ್ಲದೆ ತಜ್ಞರ ಮೂಲಕ ತಿಳಿದುಕೊಳ್ಳಬೇಕು. ಆಗ ಬೆಳೆ ಕಷ್ಟವಾಗುವುದಿಲ್ಲ. ನಷ್ಟವೂ ಆಗುವುದಿಲ್ಲ. ಯಾವುದರಲ್ಲೂ ಅದು ಕೃಷಿ ಇರಲಿ, ಉದ್ದಿಮೆ ಇರಲಿ, ನಷ್ಟ  ಆಗುವುದಲ್ಲ. ನಾವು ಮಾಡಿಕೊಳ್ಳುವುದು. ಇದು ನಿಟ್ಟೆ ಗುತ್ತು ನವೀನ್ ಚಂದ್ರ ಜೈನ್ ಅವರ ಅನುಭವ. ಇವರು ಎಲ್ ಎಲ್ ಬಿ ವ್ಯಾಸಂಗ ಮಾಡಿ ಆಯ್ಕೆ ಮಾಡಿಕೊಂಡದ್ದು ಕೃಷಿ ವೃತ್ತಿಯನ್ನು….

Read more
flower

ಸಾವಿರಗಟ್ಟಲೆ ಉಳಿಸುವ ಉಚಿತ ಔಷಧಿ ಸಸ್ಯ ಇದು.

ಸಾವಿರಗಟ್ಟಲೆ ಸಂದರ್ಶನ ಫೀಸ್ ಮತ್ತು ಸಾವಿರ ಲೆಕ್ಕದ ಮುಲಾಮು ಮಾತ್ರೆಗೆ ಖರ್ಚು ಮಾಡುವ ಬದಲು ಉಚಿತವಾಗಿ ಅ ಫಲವನ್ನು ಈ ಸಸ್ಯದ ಮೂಲಕ ಪಡೆಯಬಹುದು. ಇದು ಒಂದು ಸುಂದರ ಹೂ ಬಿಡುವ ಸಸ್ಯ. ಸಾಮಾನ್ಯವಾಗಿ ಹೊಳೆ ದಂಡೆ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ಕರಾವಳಿಯ ಜನ ಆನೆ ಸಜಂಕು ( ದೊಡ್ದ ಚಗಚೆ) ಎಂದು ಕರೆಯುತ್ತಾರೆ. ಇದು ಅಸಾಮಾನ್ಯ ಔಷಧೀಯ ಸಸ್ಯವಾಗಿದ್ದು, ಮಹತ್ವ ಗೊತ್ತಿದ್ದವರು ಇದನ್ನು ತಮ್ಮ ಹೊಲದ ಬದಿಯಲ್ಲಿ ನೆಟ್ಟು ಬೆಳೆಸಿರುತ್ತಾರೆ….

Read more
ಉತ್ತಮ ಲಕ್ಷಣದ ಹಸು

ಉತ್ತಮ ಹಸುವಿನ ಆಯ್ಕೆಗೆ ಸೂಕ್ಷ್ಮ ಪರೀಕ್ಷೆಗಳು.

ಕೊಳ್ಳುವ ಹಸು ಮಾಲಕರು ಹೇಳಿದಂತೆ ಹಾಲು ಕೊಡುತ್ತದೆಯೇ, ಅವರು ಹೇಳುವುದರಲ್ಲಿ ಸತ್ಯ ಇದೆಯೇ ಎಂಬುದನ್ನು ಕೊಳ್ಳುವವರು ಪರೀಕ್ಷೆ ಮಾಡುವುದು ಅವನ ಹಕ್ಕು. ಇದಕ್ಕೆ ಕೊಡುವವರು ಆಕ್ಷೇಪ ಮಾಡಬಾರದು. ಹಾಲಿನ ಪರೀಕ್ಷೆ ಮತ್ತು ಹಾಲು ಹಿಂಡುವಾಗಿನ ಕೆಲವು ಪರೀಕ್ಷೆಗಳನ್ನು ಮಾಡಿ ಹಸುಕೊಂಡರೆ ಒಳ್ಳೆಯದು. ಹಾಲು ಇಳುವರಿ ಪರೀಕ್ಷೆ : ಹಸುವಿನಿಂದ ಒಂದೂವರೆ ದಿನದಲ್ಲಿ 3 ಬಾರಿ ಹಾಲನ್ನು ಕರೆದು, ದಿನಕ್ಕೆ ಎಷ್ಟು ಹಾಲು ಕೊಡುತ್ತದೆಂದು ತಿಳಿದುಕೊಳ್ಳಬಹುದು. ಹಸು ಬೇಗ ಹಾಲು ತೊರೆ ಬಿಡಬೇಕು. ಮೊಲೆಗಳು ಗಟ್ಟಿಯಾಗಿರಬಾರದು. ನಾಲ್ಕು ಮೊಲೆಗಳಿಂದ…

Read more
error: Content is protected !!