ಪ್ರೂನಿಂಗ್ ಮಾಡಿ ಅಡಿಕೆ ಸಸ್ಯ ಬೆಳವಣಿಗೆ ಹೆಚ್ಚಿಸಿ.
ಸಸ್ಯಗಳಲ್ಲಿ ಹಿತಮಿತವಾಗಿ ಎಲೆ ಗೆಲ್ಲು ಕಡಿದರೆ ಮತ್ತೆ ಬರುವ ಹೊಸ ಚಿಗುರುಗಳು ಸಧೃಢವಾಗಿ ಬರುತ್ತವೆ. ಏಕದಳ ಸಸ್ಯಗಳ ಗೆಲ್ಲು ಕಡಿದರೆ ನಿರಾಯಾಸವಾಗಿ ಅದು ಚಿಗುರಿ ಬದುಕಿಕೊಳ್ಳುತ್ತದೆ. ಹಾಗೆಂದು ದ್ವಿದಳ ಸಸ್ಯಗಳಲ್ಲಿ ಎಲ್ಲಾ ಎಲೆ ಕಡಿಯುವ ಕ್ರಮ ಇಲ್ಲ. ಅದನ್ನು ಹಿತ ಮಿತವಾಗಿ ಸ್ವಲ್ಪ ಪ್ರೂನಿಂಗ್ ಮಾಡಿ ಬೆಳವಣಿಗೆಗೆ ಬೂಸ್ಟ್ ಕೊಡಬಹುದು. ಅಡಿಕೆ ಸಸಿಗಳಲ್ಲಿ ಒಂದು ಎರಡು ವರ್ಷ ಪ್ರಾಯದಲ್ಲಿ ಬೆಳವಣಿಗೆ ಹೆಚ್ಚಿಸಲು ಕೆಳಭಾಗದ ಎರಡು ಎಲೆಯನ್ನು ಅರ್ಧ ದಷ್ಟು ತುಂಡು ಮಾಡಿದರೆ ಸಸ್ಯ ಬೆಳವಣಿಗೆಗೆ ಅನುಕೂಲವಾಗುತ್ತದೆ. ಅಡಿಕೆ…
