krushiabhivruddi

ಹುಲುಸಾಗಿ ಬೆಳೆದ ನೀಲಗಿರಿ ಮರಗಳು

ನೀಲಗಿರಿ- ಹಾಳೂ ಅಲ್ಲ – ತೀರಾ ಒಳ್ಳೆಯದೂ ಅಲ್ಲ.

ನೀಲಗಿರಿಯ ನೆಡುತೋಪುಗಳು ಪ್ರಾರಂಭವಾಗಿ ಸುಮಾರು 150  ವರ್ಷ ಕಳೆದಿದೆ. ಈಗ ಪ್ರಾರಂಭವಾಗಿದೆ ಈ ಮರದಿಂದ ನೀರು ಬರಿದಾಗುತ್ತದೆ ಎಂದು. ನಿಜಕ್ಕೂ ನೀರು ಬರಿದಾಗುವುದು ಹೌದೇ?ಅಥವಾ ಇದು ಒಂದು  ಅಪ ಪ್ರಚಾರವೇ ಸ್ವಲ್ಪ ಚರ್ಚೆ ಮಾಡೋಣ. ತಜ್ಜರ ಪ್ರಕಾರ ಇದು  ಹಾಳೂ ಅಲ್ಲ- ತೀರಾ ಒಳ್ಳೆಯದೂ ಅಲ್ಲ. ನೀಲಗಿರಿ ಮರ ಏನು: ನೀಲಗಿರಿ Eucalyptus ಎಂಬ ಮರ ಬಹಳ ವೇಗವಾಗಿ ಬೆಳೆಯುವ ಮರ. ಆಸ್ಟ್ರೇಲಿಯಾ ಮೂಲದ ಈ ಮರವನ್ನು  1790 ರಲ್ಲಿ  ಕರ್ನಾಟಕದ ರಾಜ್ಯದ ನಂದಿ ಬೆಟ್ಟಗಳಲ್ಲಿ ಬೆಳೆಸಲಾಯಿತು….

Read more
ಬೊರ್‍ವೆಲ್ ಕೆಲಸ

ಬೋರ್ವೆಲ್ ಗೆ ಪಂಪು ಇಳಿಸುವ ಬಗ್ಗೆ ಮಾಹಿತಿ.

ಇಂದು ಕೃಷಿ ನೀರಾವರಿಗೆ, ಮನೆಬಳಕೆಯ ನೀರಿಗೆ ಎಲ್ಲದಕ್ಕೂ ಬೋರ್ವೆಲ್ ಮೂಲವೇ ಆದಾರ. ಕೊಳವೆ ಬಾವಿಯನ್ನು ತೋಡುವಾಗ ನೀರು ಸಿಗುತ್ತದೆ.  ಆದರೆ ಬಾವಿಯೊಳಗೆ ನೀರು ಎಷ್ಟು ಇದೆ, ಎಷ್ಟು ತೆಗೆಯಲು ಸಾಧ್ಯ ಎಂಬುದನ್ನು ಮೇಲಿನಿಂದು ನೋಡಿ ಲೆಕ್ಕಾಚಾರ ಹಾಕಲಿಕ್ಕೆ ಆಗುವುದಿಲ್ಲ. ಪಂಪು ಇಳಿಸಿ ನೀರನ್ನು ಹೊರ ತರಬೇಕು. ಎಷ್ಟು ಆಳಕ್ಕೆ ಪಂಪು ಇಳಿಸಬೇಕು.  ಎಷ್ಟು ಅಶ್ವ ಶಕ್ತಿ ಇವೆಲ್ಲದರ ಮಾಹಿತಿ ಇಲ್ಲಿದೆ. ಹೆಚ್ಚಿನವರು ಕೊಳವೆ ಬಾವಿ ತೋಡುತ್ತಾರೆ. ಸುಮಾರು 500 ಅಡಿ ಹೋಗಿದೆ, ಪಂಪು ಎಷ್ಟು ಇಳಿಸಬೇಕು ಎಂಬ…

Read more
ಗೇರು ಹಣ್ಣುಗಳನ್ನು ಸ್ವಚ್ಚ ಮಾಡುತ್ತಿರುವುದು

ಗೇರು ಕೃಷಿಗೆ  ರೈತರಿಂದ ಗುಡ್ ಭೈ – ತೀರಾ ನಷ್ಟದ ಬೆಳೆ

ಒಂದು ಕಾಲದಲ್ಲಿ ಕರಾವಳಿಯ ಎಲ್ಲಾ ಭಾಗಗಳಲ್ಲಿ ಗೇರು ಬೆಳೆ ನಳನಳಿಸುತ್ತಿತ್ತು.  ಎಂತೆಂತಹ ಮರಗಳು, ಬುಟ್ಟಿ ಬುಟ್ಟಿ ಗೇರು ಹಣ್ಣುಗಳು. ಇಂದು ಆ ವೈಭವ ಇಲ್ಲ.ಗೇರು ಮರದಲ್ಲಿ ಹಣ್ಣು ಆದರೂ ಕೊಯ್ಯುವ ಗೋಜಿಗೇ ಹೋಗದ ಜನ, ಕೊಯ್ದ ಮಜೂರಿ ಹುಟ್ಟದ ನಷ್ಟದ ಬೆಳೆಯಾಗಿ, ಗೇರು ಕೃಷಿಗೆ ರೈತರು ಈಗಾಗಲೇಗುಡ್ ಭೈ ಹೇಳುತ್ತಿದ್ದಾರೆ.. ಸದ್ಯವೇ  ಗೇರು ಬೆಳೆ ಎಂಬುದು ನಮ್ಮಲ್ಲಿ ಗತ ವೈಭವವಾದರೂ ಅಚ್ಚರಿ ಇಲ್ಲ.   ಗೇರು ಮರಗಳಿಂದ (Cashew) ಕೊಕ್ಕೆ ಹಾಕಿ ಹಣ್ಣು ಕೊಯ್ಯುವುದು, ಹೆಕ್ಕುವುದು, ಬೀಜ ಪ್ರತ್ಯೇಕಿಸುವುದು,…

Read more
ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ ಎಂದರೆ ಅದು ರಾಸಾಯನಿಕ ಗೊಬ್ಬರಗಳಿಗೆ ಸಮನಾದ ಫಲಿತಾಂಶವನ್ನು ಕೊಡುವಂತಹ ಸಾವಯವ ಮೂಲವಸ್ತುಗಳನ್ನು ಸೇರಿಸಿ ತಯಾರಿಸಿದ ಗೊಬ್ಬರ. ರಸ ಗೊಬ್ಬರ, ರಾಸಾಯನಿಕ ಗೊಬ್ಬರ ಬೇರೆ ಬೇರೆ. ರಸ ಗೊಬ್ಬರ ಎಂಬುದು ಹೆಚ್ಚು ಸಾತ್ವಾಂಶಗಳ ಯಾವುದೇ ಮೂಲವಸ್ತುಗಳ ಮೂಲಕ ತಯಾರಿಸಬಹುದು. ‘ರಸ’ ಎಂದರೆ ಹೆಚ್ಚು ಸತ್ವ ಉಳ್ಳ ತಯಾರಿಕೆ.   ರಾಸಾಯನಿಕ ಮಾತ್ರವಲ್ಲ, ಸಾವಯವ ಮೂಲದಲ್ಲೂ ರಸಗೊಬ್ಬರ ತಯಾರಿಸಬಾರದು ಎಂದಿಲ್ಲ. ತಯಾರಿಸಬಹುದು. ಇದು ಹೊಸ ತಂತ್ರಜ್ಞಾನವಂತೂ ಅಲ್ಲ. ಮರೆತು ಹೋಗಿರಬಹುದು ಅಥವಾ ಕಷ್ಟ ಎಂದು ಬಿಟ್ಟಿರಬಹುದು. ಸಾವಯವ…

Read more
ಅಡಿಕೆ -ದರ ಎರಿಕೆ

ಅಡಿಕೆ -ದರ ಏರಿಕೆಗೆ ಮುಹೂರ್ತ ಕೂಡಿ ಬರುವ ಮುನ್ಸೂಚನೆ.

ಈ ಹಿಂದೆ ನಾವು ಕೆಲವು ವರ್ತಕರು ಮತ್ತು  ಅನುಭವಿಗಳ ಹೇಳಿಕೆಯಂತೆ ಊಹಿಸಿದ್ದ ಬೆಲೆ ಏರಿಕೆಯ  ಕಾಲ ಈಗ ಕೂಡಿ ಬರುವ ಸೂಚನೆ ಕಾಣುತ್ತಿದೆ. ನಿನ್ನೆ ಪಟೋರಾ ಅಡಿಕೆಗೆ 20 ರೂ, ಜಂಪ್. ಇಂದು ಹಳೆ ಅಡಿಕೆಗೆ 10 ರೂ. ಜಂಪ್. ಇನ್ನೇನು ಮುಂದಿನ ವಾರದ ಒಳಗೆ ಚಾಲಿ ಮತ್ತು ಕೆಂಪಡಿಕೆ ಎರಡೂ ಏರಿಕೆ ಪ್ರಾರಂಭವಾಗುವ ಮುನ್ಸೂಚನೆ ಇದೆ. ದರ ಏರಿಕೆಯ ಮುಹೂರ್ತ ಖಾಸಗಿ ವ್ಯಾಪಾರಿಗಳಿಂದ ಪ್ರಾರಂಭವಾಗಿದೆ. ಈಗ ಏರಿಕೆ ಆಗುವುದು ಮುಂದಿನ ಮಳೆಗಾಲದ ಹಂಗಾಮಿಗೆ ದಾಸ್ತಾನು ಮಾಡಿಕೊಳ್ಳುವುದಕ್ಕೆ…

Read more
areca palm

ಮಳೆ ಬಂತೆಂದು ಚಿಂತೆ ಮಾಡಬೇಡಿ. ಇದರಿಂದ ಬೆಳೆ ನಷ್ಟ ಆಗದು.

ಈಗ ಮಳೆ ಬಂದು ಅಡಿಕೆಯಲ್ಲಿ ಮುಂದಿನ ಫಸಲು ಕಡಿಮೆಯಾಗಿ ನಷ್ಟ ಆಗಬಹುದು ಎಂದು ಆತಂಕದಲ್ಲಿರುವ ಬೆಳೆಗಾರರಿಗೆ ಇದು ಕಿವಿ ಮಾತು.ಬೆಳೆ ನಷ್ಟ ಆಗದು. ಅನುಕೂಲವೇ ಆಗುವುದು. ಎಪ್ರೀಲ್ ತಿಂಗಳಲ್ಲಿ ಮಳೆ ಬರುವುದು ಇತ್ತೀಚಿನ ದಿನಗಳಲ್ಲಿ ಅಪರೂಪವಾದರೂ ಹಿಂದೆ ಬಹುತೇಕ ವಿಶೇಷ ದಿನಗಳ ಸಂದರ್ಭದಲ್ಲಿ ಮಳೆ ಆಗುತ್ತಿತ್ತು. ಕಳೆದ ವರ್ಷ ಇದಕ್ಕಿಂತಲೂ ಬೇಗ ಮಳೆ  ಬಂದಿದೆ. ಆದರೆ  ಫಸಲಿಗೆ ತೊಂದರೆ ಆಗಿರಲಿಲ್ಲ.  ಈ ವರ್ಷ ಎಪ್ರೀಲ್ ನಲ್ಲಿ ಮಳೆ ಧಾರಾಕಾರವಾಗಿ ಬಂದಿದೆ. ತಾಪಮಾನ  ತುಂಬಾ ಇಳಿಕೆಯಾಗಿದೆ. ಇಂತಹ ವಾತಾವರಣದಿಂದ…

Read more
ಹಳ್ಳಿಯ ಮನೆಗಳಲ್ಲಿ ರಾಶಿ ರಾಶಿ ದುಂಬಿ

ಹಳ್ಳಿಯ ಮನೆಗಳಿಗೆಲ್ಲಾ ನುಗ್ಗಿದೆ- ‘ಕೆಲ್ಲು’ ಎಂಬ ಈ ಅನಾಹುತಕಾರಿ ದುಂಬಿ.

ಹಳ್ಳಿಗಳಲ್ಲಿ, ಹಳ್ಳಿಗೆ ತಾಗಿದ ಪಟ್ಟಣಗಳಲ್ಲಿ ಈಗ ಬೆಳಕಿನ ದೀಪವನ್ನು ಹುಡುಕಿ ಬರುವ ಹಿಂಡು ಹಿಂಡು ದುಂಬಿಗಳು (ಕೆಲ್ಲು) ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಕೆಲವು ಜನ ಇದು ಯಾವುದೋ ಮಾರಿ. ದೆವ್ವದ ಉಪಟಳ ಎಂದು ಮಾತಾಡುತ್ತಿದ್ದಾರೆ. ವಾಸ್ತವವಾಗಿ ಇದು ನಾವೇ ಮಾಡಿಕೊಂಡ ಆವಾಂತರ. ಬಹುತೇಕ ಎಲ್ಲಾ ಮನೆಗಳಲ್ಲೂ ಇದು ಇದೆ. ರಸ್ತೆ ಸಂಚರಿಸುವಾಗ ಮೈಗೆ ತಾಗಿ ಮನೆ ಮನೆಗೆ ಪ್ರಸಾರವಾಗುತ್ತಿದೆ.ಮನೆಯ ಕಿಟಕಿ ಬಾಗಿಲು ಸಂದು, ಬಟ್ಟೆ ಬರೆ, ಪುಸ್ತಕಗಳು, ಹಂಚಿನ ಛಾವಣಿಯ ರೀಪು ಪಕ್ಕಾಸುಗಳಲ್ಲಿ, ಗೊಡೆ ಸಂದುಗಳಲ್ಲಿ,…

Read more
ಅಡಿಕೆಗೆ ಸಿಂಪರಣೆ

ಅಡಿಕೆಗೆ ಬಳಸುತ್ತಿರುವ ಕೀಟ- ಶಿಲೀಂದ್ರ ನಾಶಕ ಕೆಲಸ ಮಾಡುವುದಿಲ್ಲವಂತೆ. 

ಭಾರತ ಸರಕಾರದ ಕೃಷಿ ಮಂತ್ರಾಲಯವು ಕೆಲವು ಕೀಟನಾಶಕಗಳನ್ನು ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪ ಎತ್ತಿದೆ. ಕಾರಣ ಅವು ಕೆಲಸ ಮಾಡುವುದಿಲ್ಲವಂತೆ. ಸುಮಾರು 27 ಬೆಳೆಸಂರಕ್ಷಗಳನ್ನು ಬ್ಯಾನ್ ಮಾಡಲು ಮುಂದಾಗಿದೆ. ಹೌದು ನಾವು ಅಡಿಕೆ ಮಿಳ್ಳೆ ಉದುರದಂತೆ ತಡೆಯಲು ಬಳಸುವ ಕೆಲವು ಕೀಟನಾಶಕ, ಶಿಲೀಂದ್ರ ನಾಶಕಗಳೂ ಸೇರಿದಂತೆ  ಬಹಳಷ್ಟು ಕೃಷಿ ಒಳಸುರಿಗಳು ಬಳಸಿಯೂ  ಕೆಲಸ ಮಾಡದೆ ನಮ್ಮ ಜೇಬು ಖಾಲಿ ಮಾಡಿದ್ದಷ್ಟೇ. ಅದೆಷ್ಟೋ ರೈತರು ಬೆಳೆಗಳಿಗೆ ಬರುವ ರೋಗಕ್ಕೆ, ಕೀಟಕ್ಕೆ ಔಷಧಿ ಸಿಂಪಡಿಸುತ್ತಾರೆ. ಒಂದನ್ನು ಸಿಂಪಡಿಸಿ ಫಲಿತಾಂಶ ಸಿಗದಿದ್ದರೆ…

Read more
ಫಲವತ್ತಾದ ಮೇಲ್ಮಣ್ಣು

ಮೇಲ್ಮಣ್ಣು ಉಳಿದರೆ ಮಾತ್ರ ಕೃಷಿ ಲಾಭದಾಯಕ .

ಮೇಲುಮಣ್ಣು ಉತ್ತಮವಾಗಿದ್ದರೆ ಮಾತ್ರ ಕೃಷಿ ಕೈ ಹಿಡಿದೀತು. ಒಂದು ವೇಳೆ ಮೇಲು ಮಣ್ಣು ಕೊಚ್ಚಣೆ ಅಧಿಕವಾಗಿದ್ದರೆ ಅಲ್ಲಿ ಕೃಷಿ ಮಾಡುವುದು ಲಾಭದಾಯಕವಲ್ಲ.ಮೇಲು ಮಣ್ಣು ಉಳಿಸಲು ಮತ್ತು ರಚನೆಯಾಗುವ ರೀತಿಯ ಬೇಸಾಯ ಕ್ರಮಗಳನ್ನು ಅನುಸರಿಸುವುದು ಕೃಷಿಕರ ಆದ್ಯ ಕರ್ತವ್ಯ.       ಮೇಲು ಮಣ್ಣು ಹೇಗಿರುತ್ತದೆ: ಒಂದು ಹಿಡಿ ಮಣ್ಣು ಕೈಯಲ್ಲಿ ಹಿಡಿದರೆ ಅದು ಲಾಡಿನಂತೆ ಉಂಡೆ ಕಟ್ಟಲು ಬರಬೇಕು. ಅಂಟು ಆಂಟಾದ ಕಪ್ಪು ಮಿಶ್ರ ಬಣ್ಣದ, ಅರೆ ಬರೆ ಸಾವಯವ ವಸ್ತುಗಳು ಕೊಳೆಯುತ್ತಿರುವ ಸ್ಥಿತಿಯಲ್ಲಿ ಮೇಲು ಮಣ್ಣು…

Read more
ಹುಳ ಇರುವ ಬದನೆಕಾಯಿ

ಬದನೆಯಲ್ಲಿ ಹುಳ ಹೇಗೆ ಆಗುತ್ತದೆ.

ತರಕಾರಿ ಬೆಳೆಗಳಲ್ಲಿ ಬದನೆ, ಬೆಂಡೆ ಮುಂತಾದವುಗಳಿಗೆ  ಕಾಯಿ ಕೊರಕ ಎಂಬ ಹುಳು ತೊಂದರೆ ಮಾಡುತ್ತದೆ. ಒಂದು ಪತಂಗ ಕಾಯಿಯ ಮೇಲೆ  ಮೊಟ್ಟೆ ಇಟ್ಟು, ಅದು ಮರಿಯಾಗಿ ಹುಳವಾಗುವುದು. ಬದನೆ ಬೆಳೆಯಲ್ಲಿ ಪ್ರಮುಖ ಸಮಸ್ಯೆ ಕಾಯಿ ಮತ್ತು ಚಿಗುರು ಕೊರಕ ಹುಳು. ಇದರ ಹೆಸರು Leucinodes orbonalis ಈ ದಿನ ಸರಿ ಇದ್ದ ಗಿಡ ನಾಳೆ ಬಾಡುತ್ತದೆ. ಒಂದು ಗಿಡಕ್ಕೆ ಪ್ರಾರಂಭವಾದರೆ  ಮತ್ತೆ ಹೆಚ್ಚುತ್ತಾ  ಹೋಗುತ್ತದೆ. ಕಾಯಿ ಕೊರಕವೂ ಇಂದು ಚೆನ್ನಾಗಿದ್ದ ಕಾಯಿಯಲ್ಲಿ ನಾಳೆ ಸಣ್ಣ ತೂತು ಕಂಡು…

Read more
error: Content is protected !!